2023ರ ವಿಧಾನಸಭೆ ಚುನಾವಣೆ: ಬಿರುಸಿನ ಸಿದ್ಧತೆಯಲ್ಲಿ ಬಿಜೆಪಿ, ಪ್ರಚಾರಕರ ನೇಮಕ

2023ರ ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಅದಕ್ಕೆ ತಯಾರಿಯನ್ನು ತೀವ್ರಗೊಳಿಸಿದೆ. ರಾಜಕೀಯ ಪಡಸಾಲೆಯಲ್ಲಿ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದೆ.
ಒಬಿಸಿ ಮೋರ್ಚಾ ಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಒಬಿಸಿ ಮೋರ್ಚಾ ಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
Updated on

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಅದಕ್ಕೆ ತಯಾರಿಯನ್ನು ತೀವ್ರಗೊಳಿಸಿದೆ. ರಾಜಕೀಯ ಪಡಸಾಲೆಯಲ್ಲಿ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದೆ. 

ಸರಣಿ ಸಭೆಗಳನ್ನು ನಡೆಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಮಧ್ಯಸ್ಥಿಕೆಯಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಸಾಧನೆ ತೋರುವವರನ್ನು ಕರೆತರಲಾಗುತ್ತಿದೆ. 

2013ರ ವಿಧಾನಸಭೆ ಚುನಾವಣೆಯಲ್ಲಿ ಸಂಘಟನಾ ಲೋಪದಿಂದ ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇದೀಗ 2023ರಲ್ಲಿ ಅದೇ ತಪ್ಪನ್ನು ಪುನರಾವರ್ತಿಸಲು ಪಕ್ಷ, ಪಕ್ಷದಲ್ಲಿನ ನಾಯಕರು ಸಿದ್ಧರಿಲ್ಲ.

ಮೈಸೂರು ಮತ್ತು ತುಮಕೂರುಗಳಲ್ಲಿ ಪ್ರಚಾರಕರಾಗಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ(ಸಂಘಟನೆ)ಜಿ ವಿ ರಾಜೇಶ್, ಮತ್ತೊಬ್ಬ ಪ್ರಚಾರಕ ಅರುಣ್ ಕುಮಾರ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಆರ್ ಎಸ್ಎಸ್ ನಲ್ಲಿ ಪ್ರಚಾರಕರು ಅವಿವಾಹಿತರಾಗಿದ್ದು ಪೂರ್ಣಕಾಲೀನ ಕಾರ್ಯಕರ್ತರಾಗಿರುತ್ತಾರೆ. ಅವರು ಬಿಜೆಪಿಯಲ್ಲಿಯೂ ಕೆಲಸ ಮಾಡುತ್ತಾರೆ. ಪಕ್ಷದಲ್ಲಿನ ಸ್ಥಾನಗಳ ನೇಮಕಾತಿಯಲ್ಲಿ ಪ್ರಚಾರಕರ ನೇಮಕ ಮೊದಲ ಬಾರಿಗೆ ನಡೆಯುತ್ತಿದೆ. ಆಗಸ್ಟ್ ನಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಕಾಲಾವಧಿ ಮುಗಿಯಲಿದ್ದು ರಾಜ್ಯ ಬಿಜೆಪಿಯ ಮುಂದಿನ ಅಧ್ಯಕ್ಷರ ನೇಮಕ ಕೂಡ ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯವಾಗಿದೆ. 

ಸದ್ಯದಲ್ಲಿಯೇ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಾತಿ ನಡೆಯಲಿದೆ ಎಂಬ ಸೂಚನೆ ಸಿಕ್ಕಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಸಿ ಟಿ ರವಿ, ಸುನಿಲ್ ಕುಮಾರ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಬೊಮ್ಮಾಯಿಯವರು ಇದೇ 25ರಂದು ದೆಹಲಿಗೆ ತೆರಳುತ್ತಿದ್ದು, ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮತ್ತು ಸಂಘಟನಾ ಪುನರುಜ್ಜೀವನವಾಗುವ ಸಾಧ್ಯತೆ ಹೆಚ್ಚಳವಾಗಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಬಿಜೆಪಿ ಅಧ್ಯಕ್ಷೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸಂತೋಷ್ ಮತ್ತು ಯಡಿಯೂರಪ್ಪ ಪಾಳಯ ಅವರನ್ನು ಒಕ್ಕಲಿಗರು ಎಂದು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಒಕ್ಕಲಿಗರಾಗಿದ್ದು, ಸಂತೋಷ ಪಾಳಯಕ್ಕೆ ಹತ್ತಿರವಾಗಿದ್ದಾರೆ, ಇಂಧನ ಸಚಿವ ಸುನೀಲ್ ಕುಮಾರ್ ಹಿಂದುಳಿದ ಪೂಜಾರಿ ಸಮುದಾಯದವರಾಗಿದ್ದಾರೆ. ವಿವಾದರಹಿತ ಬದ್ಧ ನಾಯಕ. ಜಿ ವಿ ರಾಜೇಶ್ (32) ಬಿಎಲ್ ಸಂತೋಷ್ ಮತ್ತು ಅರುಣ್ ಕುಮಾರ್ ಅವರಂತಹ ಪೂರ್ಣ ಸಮಯದ ಆರ್‌ಎಸ್‌ಎಸ್ ಪ್ರಚಾರಕರು, ದಕ್ಷಿಣ ಕನ್ನಡದವರು. ಪ್ರಧಾನ ಕಾರ್ಯದರ್ಶಿಯಾಗಿ ಬಿ.ವೈ.ವಿಜಯೇಂದ್ರ ಅವರನ್ನು ಕರೆತರುವ ಸಾಧ್ಯತೆ ಇದ್ದು, ಹಿಂದಿನ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಪದಾಧಿಕಾರಿಗಳ ತಂಡ ಬದಲಾಗುವ ಸಾಧ್ಯತೆ ಬಿಜೆಪಿಯಲ್ಲಿ ದಟ್ಟವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com