ಬೆಂಗಳೂರು: ನಿಮ್ಮಂತವರಿಂದ ಭಾರತೀಯ ಕಾಂಗ್ರೆಸ್ ಪಕ್ಷ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಚ್ಚರಿಕೆಯ ಪತ್ರ ರವಾನಿಸಿರುವ ಸುರ್ಜೇವಾಲ ಅವರು, ಒಂದು ಪಕ್ಷದಲ್ಲಿ ಇದ್ದು ನಿಮ್ಮಂತ ನಾಯಕರು ಲಕ್ಷ್ಮಣ ರೇಖೆಯನ್ನು ದಾಟಬಾರದು. ಅನಾವಶ್ಯಕ ಹೇಳಿಕೆಯು ವಿವಾದ ಹಾಗೂ ಅಹಿತಕರ ವಾತಾವರಣ ಸೃಷ್ಟಿಸುತ್ತಿದೆ. ಅನಾವಶ್ಯಕ ಹೇಳಿಕೆಯು ತಪ್ಪು ಸಂದೇಶ ಹಾಗೂ ಅಭಿಪ್ರಾಯವನ್ನು ಸೃಷ್ಟಿಸಿದೆ. ಎಲ್ಲ ಜಾತಿ, ಜನಾಂಗ ಸಮೂಹವನ್ನು ಒಳಗೊಳ್ಳುವುದು ಕಾಂಗ್ರೆಸ್ ಪಕ್ಷ ಹುಟ್ಟಿನಿಂದ ನಡೆಸಿಕೊಂಡು ಬರುತ್ತಿದೆ ಎಂದರು.
ಇನ್ನು ಮುಂದೆ ಸಾರ್ವಜನಿಕ ಹೇಳಿಕೆ ನೀಡುವ ಮುನ್ನ ಎಚ್ಚರಿಕೆ ವಹಿಸಿ. ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತುಪಾಲನೆ ಅತೀ ಮುಖ್ಯ. ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಎತ್ತಿಹಿಡಿಯಬೇಕು ಎಂದು ಪತ್ರ ಬರೆದಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಸಿಎಂ ಹುದ್ದೆ ಅಲಂಕರಿಸಲು ಅರ್ಹರಲ್ಲ. ಒಕ್ಕಲಿಗ ಸಮುದಾಯ ನಂಬಿಕೊಂಡರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಒಕ್ಕಲಿಗ ಸಮುದಾಯಕ್ಕಿಂತಲೂ ಮುಸ್ಲಿಂಮರ ಮತಗಳು ಜಾಸ್ತಿ ಇವೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Advertisement