ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಡಿ ಕೆ ಶಿವಕುಮಾರ್ v/s ಸಿದ್ದರಾಮಯ್ಯ: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ

ರಾಜ್ಯದಲ್ಲಿ ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭೆ ಚುನಾವಣೆಯಿದೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಗದ್ದುಗೆ ಏರುವ ವಿಷಯದಲ್ಲಿ ಕಾಂಗ್ರೆಸ್ ನಲ್ಲಿ ಇಬ್ಬರ ಮಧ್ಯೆ ಪೈಪೋಟಿ ಎದ್ದಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಮುನ್ನ ಪಕ್ಷದಲ್ಲಿಯೇ ಹಲವರ ಆತಂಕ ಎದುರಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿರುವಂತಿದೆ.
Published on

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭೆ ಚುನಾವಣೆಯಿದೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಗದ್ದುಗೆ ಏರುವ ವಿಷಯದಲ್ಲಿ ಕಾಂಗ್ರೆಸ್ ನಲ್ಲಿ ಇಬ್ಬರ ಮಧ್ಯೆ ಪೈಪೋಟಿ ಎದ್ದಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಮುನ್ನ ಪಕ್ಷದಲ್ಲಿಯೇ ಹಲವರ ಆತಂಕ ಎದುರಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿರುವಂತಿದೆ.

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್(D K Shivakumar) ಪಾಳಯಗಳ ನಡುವೆ ವಾಸ್ತವಿಕ ಭಿನ್ನಾಭಿಪ್ರಾಯ ಸೃಷ್ಟಿಯಾಗುವ ಬಗ್ಗೆ ಪಕ್ಷದೊಳಗೆ ಆತಂಕವಿದೆ.

ಈ ಗುಂಪುಗಾರಿಕೆಯ ಪರಿಣಾಮಗಳನ್ನು ಅರ್ಥ ಮಾಡಿಕೊಂಡಿರುವ ಹಿರಿಯ ನಾಯಕರು ಮೊದಲು ಚುನಾವಣೆ ಗೆಲ್ಲುವುದು ಮುಖ್ಯ, ಆಮೇಲೆ ಸಿಎಂ ಸ್ಥಾನ ಬರುತ್ತೆ, ಮೊದಲು ಸೇತುವೆ ದಾಟೋಣ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಒಂದೇ ಅಭಿಪ್ರಾಯ ಅಥವಾ ಭಾವನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೂ, ಅವರ ನಿಷ್ಠಾವಂತರು ಮತ್ತು ಬೆಂಬಲಿಗರು ತಮ್ಮ ನಾಯಕನನ್ನು ಪ್ರದರ್ಶಿಸಿ ವಿಜೃಂಭಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಇದು ಇನ್ನಷ್ಟು ಗೋಜಲು, ಗೊಂದಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬವನ್ನು ಆಗಸ್ಟ್ 3ರಂದು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದು, ಚುನಾವಣಾ ಕಣಕ್ಕೆ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ.

ಕುರುಬ ನಾಯಕನ 'ಅಹಿಂದ'ವನ್ನು ಗಟ್ಟಿಗೊಳಿಸುವುದರೊಂದಿಗೆ ಚುನಾವಣೆಗೆ ಮುನ್ನ ಹೈಕಮಾಂಡ್ ಮತ್ತು ಅವರ ವಿರೋಧಿಗಳಿಗೆ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಸಿದ್ದರಾಮಯ್ಯ ಪಾಳಯವು ಅವರನ್ನು ಮತ್ತು ಅವರ ಕೊಡುಗೆಗಳನ್ನು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. 

ಅಹಿಂದ ಎಂಬುದು ಕನ್ನಡದ ಸಂಕ್ಷಿಪ್ತ ರೂಪವಾಗಿದ್ದು ಅದು 'ಅಲ್ಪಸಂಖ್ಯಾತರು' (ಅಲ್ಪಸಂಖ್ಯಾತರು), 'ಹಿಂದುಳಿದವರು' (ಹಿಂದುಳಿದ ವರ್ಗಗಳು) ಮತ್ತು 'ದಲಿತರು' (ದಲಿತರು)ನ್ನು ಸೂಚಿಸುತ್ತದೆ.

ರಾಜ್ಯ ಕಾಂಗ್ರೆಸ್, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳುವ ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರದಲ್ಲಿ ಗೊಂದಲಕ್ಕೀಡಾದಂತೆ ಕಂಡುಬರುತ್ತಿದೆ. ಆರಂಭದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಆಯೋಜಿಸಿದ ಖಾಸಗಿ ಕಾರ್ಯಕ್ರಮ ಎಂದು ನೋಡಲು ಪ್ರಯತ್ನಿಸಿತು, ಶಿವಕುಮಾರ್ ಪಾಳೆಯದ ತೀವ್ರ ವಿರೋಧದ ನಡುವೆಯೂ ಸಿದ್ದರಾಮಯ್ಯ ಪಾಳೆಯ ಉತ್ಸವ ಮುಂದುವರಿಸುವಲ್ಲಿ ಯಶಸ್ಸು ಕಾಣುವ ಲಕ್ಷಣಗಳು ಗೋಚರವಾಗುತ್ತಿದೆ.

ಕಾಂಗ್ರೆಸ್‌ಗೆ ಗುಂಪುಗಾರಿಕೆ ಹೊಸದಲ್ಲ, 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವ ದೇಶದ ಹಳೆಯ ಪಕ್ಷವು ಪಕ್ಷದೊಳಗಿನ ಸುನಾಮಿಯನ್ನು ಹೇಗೆ ಎದುರಿಸುತ್ತದೆ ಮತ್ತು ದಕ್ಷಿಣ ಭಾರತದಲ್ಲಿ ಆಡಳಿತಾರೂಢ ಬಿಜೆಪಿಯ ಏಕೈಕ ಕೋಟೆಯಾದ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತದೆ ಎಂಬುದನ್ನು ನೋಡಬೇಕಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com