ಕಾನೂನು ಕುಣಿಕೆಯಲ್ಲಿ ಶಿವಕುಮಾರ್: ಕಾಂಗ್ರೆಸ್ ಅಧಿಕಾರಕ್ಕೆ ತರಲು ಹರಸಾಹಸ; ಪಕ್ಷಕ್ಕಾಗಿ ದುಡಿಯಲು ತೀರಾ ಕಡಿಮೆ ಸಮಯಾವಕಾಶ!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಕೃತ ದಿನಾಂಕ ಘೋಷಿಸದಿದ್ದರೂ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ನಡೆಸುತ್ತಿವೆ. ಆದರೆ ಒಕ್ಕಲಿಗ ಪ್ರಭಾವಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಡಿ ಕುಣಿಕೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಕೃತ ದಿನಾಂಕ ಘೋಷಿಸದಿದ್ದರೂ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ನಡೆಸುತ್ತಿವೆ. ಆದರೆ ಒಕ್ಕಲಿಗ ಪ್ರಭಾವಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಡಿ ಕುಣಿಕೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ.

ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಹೆಚ್ಚು ಗಮನಹರಿಸುತ್ತಿದ್ದಾರೆ, ಹೀಗಾಗಿ ನವೆಂಬರ್ ತಿಂಗಳ ಕ್ಯಾಲೆಂಡರ್ ನಲ್ಲಿ ಕಾರ್ಯಕ್ರಮಗಳ ಪಟ್ಟಿ ಮಾಡಿದ್ದಾರೆ.

ನವೆಂಬರ್ 14 ರಂದು, ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು, ಕಾಂಗ್ರೆಸ್ ಅನೇಕ ಅಧಿಕೃತ ಕಾರ್ಯಗಳನ್ನು ಪಟ್ಟಿ ಮಾಡಿದೆ ಆದರೆ ಶಿವಕುಮಾರ್ ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆ (ಇಡಿ) ಎದುರಿಸಲಿದ್ದಾರೆ. ಒಂದು ವಾರದ ಹಿಂದೆ ಡಿಕೆಶಿ ಸಹೋದರ ಮತ್ತು ಸಂಸದ ಡಿಕೆ ಸುರೇಶ್ ಅವರನ್ನು ಇದೇ ವಿಷಯದ ಕುರಿತು ಇಡಿ ಪ್ರಶ್ನಿಸಿತ್ತು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊರತರುವ ಯಂಗ್ ಇಂಡಿಯಾ ಟ್ರಸ್ಟ್‌ಗೆ ನೀಡಿದ ದೇಣಿಗೆ ನೀಡಿರುವ ಸಂಬಂಧ ಕರ್ನಾಟಕದ ಇತರ ಕಾಂಗ್ರೆಸ್ ನಾಯಕರನ್ನೂ ಪ್ರಶ್ನಿಸಲಾಗುತ್ತಿದೆ.

ನವೆಂಬರ್ 18 ರಂದು, ಶಿವಕುಮಾರ್ ಕರ್ನಾಟಕ ಹೈಕೋರ್ಟ್‌ನಲ್ಲಿ ಪಟ್ಟಿ ಮಾಡಲಾದ ಸಿಬಿಐ ಪ್ರಕರಣಕ್ಕೆ ಹಾಜರಾಗಬೇಕಿದೆ. ನವೆಂಬರ್ 19 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಕ್ಕಾಗಿ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಆದರೆ  ಅವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಆದಾಯ ತೆರಿಗೆ ಮತ್ತು ಇತರ ಎರಡು ಪ್ರಕರಣಗಳ ಸಂಬಂಧ ಕೋರ್ಟ್ ಗೆ ಹಾಜರಾಗಬೇಕಿದೆ. ನವೆಂಬರ್ 21 ರಂದು, ತಮಿಳುನಾಡಿನ ಚೆನ್ನೈನ ನ್ಯಾಯಾಲಯದಲ್ಲಿ  ಮತ್ತು ನವೆಂಬರ್ 23 ರಂದು ಅವರು ದೆಹಲಿಯಲ್ಲಿ ಇಡಿ ಪ್ರಕರಣಕ್ಕೆ ಹಾಜರಾಗಬೇಕಾಗಿದೆ.

ಈ ಎಲ್ಲಾ ಪ್ರಕರಣಗಳಿಗಾಗಿ ಡಿಕೆ ಶಿವಕುಮಾರ್ ಕಾನೂನಾತ್ಮಕವಾಗಿ ಸಿದ್ದರಾಗಿ ಹಾಜರಾಗಬೇಕಾಗಿದೆ. ಹೀಗಾಗಿ ಪಕ್ಷಕ್ಕಾಗಿ ಅವರು ಕಡಿಮೆ ಸಮಯ ಹೊಂದಿದ್ದಾರೆ, ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಬಸ್ ಯಾತ್ರೆ ಮತ್ತು ಟ್ರ್ಯಾಕ್ಟರ್ ಯಾತ್ರೆ ನಡೆಸಲಿದೆ.  ಡಿಸೆಂಬರ್ ನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲು ಯೋಜಿಸಿದೆ.

ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ  ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಶಾಸಕರನ್ನು ಖರೀದಿಯಾಗದಂತೆ ಎಚ್ಚರಿಕೆ ವಹಿಸಿದ ನಂತರ ಡಿ.ಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಿರುಕ್ಕೊಳಗಾದ ವ್ಯಕ್ತಿಗಳಲ್ಲಿ ಶಿವಕುಮಾರ್ ಒಬ್ಬರಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್ ಮೂರ್ತಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನವಾಬ್ ಮಲಿಕ್ ಮತ್ತು ಸಂಜಯ್ ರಾವತ್ ಅವರಂತಹ ವಿರೋಧಿಗಳ ಹಿಂದೆ ಜಾರಿ ಸಂಸ್ಥೆಗಳು ಹೋಗುವುದನ್ನು ನಾವು ನೋಡಿದ್ದೇವೆ. ಇದು ಎಲ್ಲಾ ರಾಜಕೀಯ ನಾಯಕರಿಗೆ ಸರತಿ ಸಾಲಿನಲ್ಲಿ ಸಮಸ್ಯೆ  ಎದುರಿಸಲು ಸಂದೇಶವಾಗಿದೆ. ಆದರೆ ಈ ಸಂಬಂಧ ಶಿವಕುಮಾರ್ ಪ್ರತಿಕ್ರಿಯಿಸಲು ಲಭ್ಯವಾಗಿಲ್ಲ.

ಬಿಜೆಪಿಯು ತನ್ನ ವಿರೋಧಿಗಳನ್ನು ವಿಶೇಷವಾಗಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವನ್ನು (ಎಎಪಿ) ವಿಚಲಿತಗೊಳಿಸಲು ಇಡಿ, ಐಟಿ ಮತ್ತು ಸಿಬಿಐ ಅನ್ನು ರಾಜಕೀಯ ಸಾಧನವಾಗಿ ಬಳಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಬಿಜೆಪಿಗೆ ಎಲ್ಲೆಲ್ಲಿ ಗಂಭೀರ ರಾಜಕೀಯ ವಿರೋಧ ಎದುರಾದರೂ, ಅದು ತನ್ನ ವಿರೋಧಿಗಳನ್ನು ಬಲಿ ಪಡೆಯಲು ಈ ಸಂಸ್ಥೆಗಳನ್ನು ಬಳಸುತ್ತದೆ. ಹಿಮಾಚಲ ಪ್ರದೇಶದಲ್ಲಿ ಪ್ರಚಾರದ ನೇತೃತ್ವ ವಹಿಸಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಇದಕ್ಕೆ ಉದಾಹರಣೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com