40 ಪರ್ಸೆಂಟ್ ಕಮಿಷನ್ನಿಗಾಗಿ ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ?

ಪೇಸಿಎಂ ಅಭಿಯಾನದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆಯುತ್ತಿದ್ದು, 40 ಪರ್ಸೆಂಟ್ ಕಮಿಷನ್ನಿಗಾಗಿ ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ?...
ʻಪೇ ಸಿಎಂʼ ಪೋಸ್ಟರ್‌
ʻಪೇ ಸಿಎಂʼ ಪೋಸ್ಟರ್‌

ಬೆಂಗಳೂರು: ಪೇಸಿಎಂ ಅಭಿಯಾನದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆಯುತ್ತಿದ್ದು, 40 ಪರ್ಸೆಂಟ್ ಕಮಿಷನ್ನಿಗಾಗಿ ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ? ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

#PayCM ಹ್ಯಾಶ್ ಟ್ಯಾಗ್ ಬಳಿಸಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

40% ಕಮಿಷನ್‌ಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ? ಕಮಿಷನ್ ಕಿರುಕುಳದ ಸಂತ್ರಸ್ತರಲ್ಲಿ ಲಿಂಗಾಯತ ಗುತ್ತಿಗೆದಾರರು ಇಲ್ಲವೇ? ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ ಎಂದು ಟ್ವೀಟ್ ಮಾಡಿದೆ.

ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲು ಬಿಜೆಪಿ ವಿಫಲ ಯತ್ನ ನಡೆಸುತ್ತಿದೆ. ಮಠಗಳ ಅನುದಾನದಲ್ಲೂ 30% ಕಮಿಷನ್ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡೆಯಬೇಕು! ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಲೇಬೇಕು! ನಿನ್ನೆ ಬಿಜೆಪಿಯವರು ಕಳಿಸಿದ ಬಸ್ಸು"ಡಕೋಟಾ ಇಂಜಿನ್ ಸರ್ಕಾರ, ಬ್ರೇಕ್ ಇಲ್ಲದ ಭ್ರಷ್ಟಾಚಾರ" ಎಂದು ರೋಧಿಸುತ್ತಿತ್ತು! ಕರ್ನಾಟಕ ಈಗ #PayCM ಮುಕ್ತ ರಾಜ್ಯವಾಗಬೇಕಿದೆ. #40PercentSarkara’ ಎಂದು ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com