ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಪಾಪ, ನಳಿನ್ ಕುಮಾರ್ ಕಟೀಲ್ ಗೆ ಪ್ರೌಢಿಮೆ ಇಲ್ಲ, ಆತ ಒಬ್ಬ ವಿದೂಷಕ: ಸಿದ್ದರಾಮಯ್ಯ ಲೇವಡಿ

ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಬ್ಬ ವಿದೂಷಕ ಇದ್ದ ಹಾಗೆ, ಅವರಿಗೆ ಪ್ರೌಢಿಮೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಬಾಗಲಕೋಟೆ: ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಬ್ಬ ವಿದೂಷಕ ಇದ್ದ ಹಾಗೆ, ಅವರಿಗೆ ಪ್ರೌಢಿಮೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಬಾಗಲಕೋಟೆಯ ನಾಗನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐ ಬೆಳೆಸಿದ್ದೇ ಸಿದ್ದರಾಮಯ್ಯ ಎಂದು ಕಟೀಲ್ ಅವರು ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದರು.

ಕಟೀಲ್ ಗೆ ಪಾಪ, ಪ್ರೌಢಿಮೆ ಇಲ್ಲ. ನಾವು ಅಧಿಕಾರದಲ್ಲಿದ್ದಾಗ ಇವರು ವಿಪಕ್ಷ ದಲ್ಲಿ ಇದ್ದರೂ ಆಗ ಯಾಕೆ ಪ್ರಸ್ತಾಪ ಮಾಡಲಿಲ್ಲ. ಇವರ ಬಾಯಲ್ಲೇನು ಕಡಬು ಸಿಕ್ಕಿ ಹಾಕಿಕೊಂಡಿತ್ತಾ ? ಎಂದು ಪ್ರಶ್ನಿಸಿದರು. ನಮ್ಮ ಕಾಲದ್ದೂ ಸೇರಿ ಕಳೆದ ೧೬ ವರ್ಷದ್ದೂ ಸೇರಿಸಿ ತನಿಖೆ ಮಾಡಿಸಬಹುದು. ನಿಮಗ್ಯಾಕೆ ಭಯ ಎಂದು ಸವಾಲು ಹಾಕಿದ ಅವರು, ಜನರ ಗಮನ ಸೆಳೆಯೋಕೆ ಈ ಆಪಾದನೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಬಗ್ಗೆ ಅಧಿವೇಶನದಲ್ಲೇ ಸಿಎಂಗೆ ನ್ಯಾಯಾಂಗ ತನಿಖೆ ಮಾಡಿಸಿ ಅಂದೆ, ಅದಕ್ಕೆ ಅವರು ಉತ್ತರ ನೀಡಲಿಲ್ಲ. ಅದನ್ನೆಲ್ಲಾ ಬಿಟ್ಟು ಈಗ ಜಾತಿಗೆ ನಿಂತಿದ್ದಾರೆ. ಕಾಂಗ್ರೆಸ್ಸಿನವರು ಲಿಂಗಾಯಿತ ಮುಖ್ಯಮಂತ್ರಿಗಳನ್ನೇ ಟಾರ್ಗೆಟ್ ಮಾಡುತ್ತದೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಸಂಬಂಧ ಏನು...? ಬೊಮ್ಮಾಯಿ ಈಸ್ ಹೆಡ್ ಆಫ್ ದಿ ಗವರ್ನಮೆಂಟ್… ಅದಕ್ಕಾಗಿ ಅವರನ್ನೇ ನಾವು ಪ್ರಶ್ನಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.

ಪರ್ಸೆಂಟ್ ಸರ್ಕಾರ ಅಂದ್ರಲ್ಲ. ಆಗ ಯಾವ ದಾಖಲಾತಿ ಕೊಟ್ಟಿದ್ದೀರಪ್ಪಾ? 2018ರಲ್ಲಿ ನನ್ನ ವಿರುದ್ಧ ಆರೋಪ ಮಾಡಿದಾಗ ಯಾವ ದಾಖಲಾತಿ ಕೊಟ್ಟಿದ್ದರು? ಆವಾಗ ಕಟೀಲು ಎಲ್ಲಿದ್ದರು? ಯಡಿಯೂರಪ್ಪ ಅಧ್ಯಕ್ಷರಾಗಿದ್ದರು ಅಲ್ವಾ? ನರೇಂದ್ರ ಮೋದಿ ಕಡೆಯಿಂದ ಅವರೇ ಹೇಳಿಸಿದ್ದು ಅಲ್ವಾ? ಎಂದು ಸರಣಿ ಪ್ರಶ್ನೆಗಳನ್ನ ಮುಂದಿಟ್ಟರು.

Related Stories

No stories found.

Advertisement

X
Kannada Prabha
www.kannadaprabha.com