ಮಂಗಳೂರು: ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಿದ ಕುಮಾರಸ್ವಾಮಿ

ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರು ಅವರ ಮನೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಸೋಮವಾರ ಭೇಟಿ ನೀಡಿ ಅವರ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು.
ಪ್ರವೀಣ್ ನೆಟ್ಟಾರು ಕುಟುಂಬಕ್ಕೆಎಚ್.ಡಿಕೆ ಸಾಂತ್ವಾನ
ಪ್ರವೀಣ್ ನೆಟ್ಟಾರು ಕುಟುಂಬಕ್ಕೆಎಚ್.ಡಿಕೆ ಸಾಂತ್ವಾನ

ಮಂಗಳೂರು: ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರು ಅವರ ಮನೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಸೋಮವಾರ ಭೇಟಿ ನೀಡಿ ಅವರ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು.

ಕುಮಾರಸ್ವಾಮಿ ಅವರು ಪ್ರವೀಣ್ ಮನೆಯವರಿಗೆ 5 ಲಕ್ಷ ರು. ಚೆಕ್ ವಿತರಿಸಿದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ ಫಾರೂಕ್, ಭೋಜೇಗೌಡ ಮುಂತಾದವರು ಉಪಸ್ಥಿತರಿದ್ದರು.

ಕುಟುಂಬ ಸದಸ್ಯರನ್ನು ಸಂತೈಸುವ ವೇಳೆ, ‘ಆರೋಪಿಗಳು ಜೈಲಿನಲ್ಲಿ ಆರಾಮವಾಗಿದ್ದಾರೆ’ ಎಂದುಬಿಟ್ಟರು. ಈ ಹೇಳಿಕೆಯು ಪ್ರವೀಣ್ ಕುಟುಂಬ ಸದಸ್ಯರನ್ನು ಕೆರಳಿಸಿತು. ‘ನಿಮ್ಮಂಥ ರಾಜಕಾರಿಣಿಗಳೇ ಇದಕ್ಕೆ ಕಾರಣ. ಜೈಲಿನಲ್ಲಿ ಆರೋಪಿಗಳಿಗೆ ಸೌಕರ್ಯ ಕೊಡುವುದೇ ರಾಜಕಾರಣಿಗಳು’ ಎಂದು ಹರಿಹಾಯ್ದರು. ಕುಟುಂಬ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್​ಡಿಕೆ, ‘ನಾನು ಸಿಎಂ ಆಗಿದ್ದಾಗ ಇಂಥದ್ದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಈಗಿನ ಸರ್ಕಾರ ಏನು ಮಾಡುತ್ತೋ ಗೊತ್ತಿಲ್ಲ’ ಎಂದು ಹೇಳಿದರು.

ಪ್ರವೀಣ್​ ಹಂತಕರಿಗೆ ಶಿಕ್ಷೆ ವಿಧಿಸಬೇಕು ಎಂಬುದು ಅವರ ಆಗ್ರಹ. ಈ ಅಂಶವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಕಾಟಾಚಾರಕ್ಕೆ ತನಿಖೆ ಮಾಡುವುದು ಬೇಡ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೃತ ಪ್ರವೀಣ್ ಕುಟುಂಬಕ್ಕೆ ನಮ್ಮ ಪಕ್ಷದಿಂದ  5 ಲಕ್ಷ ರುಯ ಪರಿಹಾರ ನೀಡಿದ್ದೇವೆ. ಏನೇ ಸಮಸ್ಯೆ ಬಂದರೂ ನನ್ನ ಗಮನಕ್ಕೆ ತರಲು ಹೇಳಿದ್ದೇನೆ. ಸರ್ಕಾರ ಕಾಟಾಚಾರಕ್ಕೆ ಎನ್​ಐಎ ತನಿಖೆಗೆ ವಹಿಸಿದೆ. ಇವರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ ಎಂದರು.

ಸುಳ್ಯ ತಾಲ್ಲೂಕು ಕಳಂಜೆಯಲ್ಲಿರುವ ಮಸೂದ್ ನಿವಾಸಕ್ಕೂ ಎಚ್​ಡಿಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳ ಬೇಜವಾಬ್ದಾರಿತನ ಇಲ್ಲಿ ಕಾಣುತ್ತಿದೆ. ಪ್ರವೀಣ್ ‌ಮನೆಗೆ ಬಂದಿದ್ದವರು ಮಸೂದ್ ಮನೆಗೆ ಬರಲಿಲ್ಲ. ಮಸೂದ್ ಹತ್ಯೆ ಹಿನ್ನೆಲೆಯಲ್ಲೂ ವಿಚಿತ್ರ ಸನ್ನಿವೇಶ ಇದೆ. ಮಸೂದ್ ಸಾವಿಗೆ ಕಾರಣವನ್ನು ಗಮನಕ್ಕೆ ತಂದಿದ್ದಾರೆ. ಮಸೂದ್​ಗೆ ಯಾವುದೇ ಸಂಘಟನೆ, ಪಕ್ಷಗಳ ಸಂಪರ್ಕವಿರಲಿಲ್ಲ. ಹಿಂದೂ ಸಮಾಜದವರೇ ಆತನ ಹತ್ಯೆಗೆ ಸ್ಕೆಚ್ ಹಾಕಿದ್ದರು. ಇದನ್ನು ಪೊಲೀಸರ ಗಮನಕ್ಕೆ ತಂದು, ತನಿಖೆಗೆ ಒತ್ತಾಯಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com