ಬಿಜೆಪಿ ಸರ್ಕಾರ ಸಮಾಜದ ಸಾಮರಸ್ಯ ಹದಗೆಡಿಸಿ, ಜನರನ್ನು ವಿಭಜಿಸುತ್ತಿದೆ- ರಾಹುಲ್ ಗಾಂಧಿ ಟೀಕೆ

ರಾಜ್ಯ ಬಿಜೆಪಿ ಸರ್ಕಾರ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಹದಗೆಡಿಸಿ, ಜನರನ್ನು ವಿಭಜಿಸುತ್ತಿದೆ ಎಂದು ಎಐಸಿಸಿ  ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಭಾಷಣ
ರಾಹುಲ್ ಗಾಂಧಿ ಭಾಷಣ

ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಹದಗೆಡಿಸಿ, ಜನರನ್ನು ವಿಭಜಿಸುತ್ತಿದೆ ಎಂದು ಎಐಸಿಸಿ  ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಸಾಮೂದಾಯಗಳು ಶಾಂತಿ, ಸಾಮರಸ್ಯದಿಂದ ಬಾಳುತ್ತಿದ್ದರು. ಯಾರಿಗೂ ಭಯವಿರಲಿಲ್ಲ. ಆದರೆ, ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಅಶಾಂತಿ ನೆಲೆಸಿದೆ. ಇವತ್ತಿನ ಕರ್ನಾಟದಲ್ಲಿನ ಸಾಮರಸ್ಯದ ಬಗ್ಗೆ ಅಮೆರಿಕದಲ್ಲೂ ಚರ್ಚೆಯಾಗುತ್ತಿದ್ದು,  ಈಗ ಸರ್ವ ಧರ್ಮ, ಸಾಮರಸ್ಯ ಕಾಣುತ್ತಿಲ್ಲ ಎಂದು ಅಮೆರಿಕದ ಪ್ರಜೆಗಳು ಹೇಳುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸಾಮರಸ್ಯ ಮೂಡಿಸಿದರೆ ಬಿಜೆಪಿ ಸರ್ಕಾರ ರಾಜಕೀಯ ಕಾರಣಕ್ಕಾಗಿ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದರು.

ಯಾವುದೇ ಉದ್ಯಮ, ವ್ಯಾಪಾರ ಯಶಸ್ವಿಯಾಗಲು ಶಾಂತಿ ಪ್ರಮುಖವಾಗಿರುತ್ತದೆ. ಆದರೆ, ಈಗಿನ ಬಿಜೆಪಿ ಸರ್ಕಾರಕ್ಕೆ ಜನರ ಜೀವನದ ಬಗ್ಗೆ ಬದ್ಧತೆ ಇಲ್ಲ. ವ್ಯಾಪಕ ರೀತಿಯಲ್ಲಿ  ವ್ಯಾಪಕ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸಲಾಗುತ್ತಿದೆ. ನೋಟ್ ಅಮಾನ್ಯೀಕರಣ ಕೇಂದ್ರ ಸರ್ಕಾರದ ದೊಡ್ಡ ಸಾಧನೆ. ಇದರಿಂದಾಗಿ ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆಗಳು ನಾಶವಾದವು. ನೋಟ್ ಅಮಾನ್ಯೀಕರಣ, ಜಿಎಸ್ ಟಿ ಹೆಸರಿನಲ್ಲಿ ದೇಶಕ್ಕೆ ವಂಚನೆ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶ ಕಾರ್ಮಿಕರು, ರೈತರು, ಸಂಪೂರ್ಣವಾಗಿ ನಾಶ ಮಾಡಿ, ಕೆಲವರನ್ನು ಉದ್ದಾರ ಮಾಡುವ ಯೋಜನೆಯಾಗಿದೆ ಎಂದರು. 

ಸಿದ್ದರಾಮಯ್ಯ  ಅವಧಿಯಲ್ಲಿ ಕ್ಷೀರಭಾಗ್ಯ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಲಾಗಿತ್ತು.  ಕರ್ನಾಟಕದ ಭಾಷೆ, ಸಂಸ್ಕೃತಿ, ಜೀವನದ ಬಗ್ಗೆ ಸಹಮತವಿದೆ.  ಕರ್ನಾಟಕದ ಸಂಸ್ಕೃತಿ, ಉಳಿಸಿ, ಬೆಳೆಸಲು ಜನರ ಆಶೀರ್ವಾದ ಬಹಳ ಮುಖ್ಯವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಜನರಲ್ಲಿ ರಾಹುಲ್ ಗಾಂಧಿ ಮನವಿ ಮಾಡಿದರು. 

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವ ಕುಮಾರ್ ಮಾತನಾಡಿ.  ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕರಲ್ಲ, ಅವರು ಸರ್ವ ಜನಾಂಗ, ಧರ್ಮದ ನಾಯಕ. ಅವರ ಮುಂದಾಳತ್ವದಲ್ಲಿ ಕೆಲಸ ಮಾಡೋಣ, ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋಣ ಎಂದರು. ಈ ನಿಟ್ಟಿನಲ್ಲಿ ಒಗಟ್ಟಿನಿಂದ ದುಡಿಯೋಣ ಎಂದು ಜನರಿಗೆ ಕರೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com