ಮಹಮದ್ ಗಡ್ಕರಿ ಶೇಕ್, ಬೊಮ್ಮಾಯುಲ್ಲಾ ಖಾನ್, ಜಬ್ಬಾರ್ ಖಾನ್, ಅಶ್ವಾಖ್ ಇನಾಯತ್ ಖಾನ್ ಹೆಸರಿಂದ ಕರೆಯಬಹುದಾ ಸಿ.ಟಿ ರವಿ ಅವರೇ?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾಖಾನ್ ಎಂದಿದ್ದ ಬಿಜೆಪಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ತಿರುಗೇಟು ನೀಡಿದೆ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದೆ.
ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾಖಾನ್ ಎಂದಿದ್ದ ಬಿಜೆಪಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ತಿರುಗೇಟು ನೀಡಿದೆ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದೆ.

ಬಿಜೆಪಿ ಸರಣಿ ಟ್ವಿಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ನಿಮ್ಮ ಹಲವು ನಾಯಕರಿಗೆ ​​ಈ ಹೆಸರಿಂದ ಕರೆಯಬಹುದೇ? ಎಂದು ಪ್ರಶ್ನಿಸಿದೆ. ಮುಖ್ಯಮಂತ್ರಿ ಬಸವರಾಜ್ ಬೊಯ್ಮಾಯಿಗೆ 'ಬೊಮ್ಮಾಯುಲ್ಲಾ ಖಾನ್' ಎನ್ನಬಹುದೇ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ 'ಜಬ್ಬಾರ್ ಖಾನ್', ಕಂದಾಯ ಸಚಿವ ಆರ್‌.ಅಶೋಕ್ 'ಅಶ್ವಾಖ್ ಇನಾಯತ್ ಖಾನ್' ಎಂದು ಹೆಸರಿಡುತ್ತೀರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರು ಟ್ಯಾಗ್ ಮಾಡಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ 'ಮಹಮದ್ ಗಡ್ಕರಿ ಶೇಕ್' ಎಂದು ಹೆಸರಿಡುವಿರಾ? ಎಂದು ಟ್ವೀಟ್​ ಮೂಲಕ ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ಎಲ್ಲ ಬಿಜೆಪಿ ನಾಯಕರು ಈ ಹಿಂದೆ ಯಾವಾಗಲೋ ಮುಸ್ಲಿಮರ ಟೋಪಿ, ಟಿಪ್ಪು ಪೇಟಾ ಧರಿಸಿರುವ ಫೋಟೊವನ್ನು ಕರ್ನಾಟಕ ಕಾಂಗ್ರೆಸ್ ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಸಿಟಿ ರವಿ ಅವರು ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್ ಗೆ ಉರಿ ಹತ್ತಿಕೊಂಡಿದೆ ಎಂದು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com