ಗಣಿತ ಮೇಷ್ಟ್ರ ಹೊಸ ರಾಜಕೀಯ "ಲೆಕ್ಕಾಚಾರ": ತೆನೆ ಇಳಿಸಿ, ಕೈ ಹಿಡಿಯಲು ಮುಂದಾದ ವೈಎಸ್ ವಿ ದತ್ತಾ 

ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ ಎಸ್ ವಿ ದತ್ತ ಜೆಡಿಎಸ್ ತೊರೆದಿದ್ದಾರೆ. ತಾವು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ಸ್ವತಃ ದತ್ತ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಖಚಿತಪಡಿಸಿದ್ದಾರೆ.
ವೈ ಎಸ್ ವಿ ದತ್ತ
ವೈ ಎಸ್ ವಿ ದತ್ತ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ ಎಸ್ ವಿ ದತ್ತ ಜೆಡಿಎಸ್ ತೊರೆದಿದ್ದಾರೆ. ತಾವು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ಸ್ವತಃ ದತ್ತ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಖಚಿತಪಡಿಸಿದ್ದಾರೆ.

ನನಗೆ ಈಗ 70 ವರ್ಷವಾಗಿದೆ. 2023 ನನ್ನ ಕೊನೆಯ ಚುನಾವಣೆ. ಕಡೂರು ಕ್ಷೇತ್ರದ ಜನತೆಯ ನಿರ್ಧಾರಕ್ಕೆ ನನ್ನ ರಾಜಕೀಯ ನಿವೃತ್ತಿ ವಿಚಾರವನ್ನು ಬಿಟ್ಟಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್ ಭವಿಷ್ಯ ಮಂಕಾಗಿದೆ. ಕಾರ್ಯಕರ್ತರಿಗೆ ಬೇರೆ ಕಡೆ ವ್ಯವಸ್ಥೆ ಆಗಬೇಕು, ನನ್ನ ನಂಬಿಕೊಂಡ ಬೆಂಬಲಿಗರು, ಕಾರ್ಯಕರ್ತರ ಭವಿಷ್ಯ ವಿಚಾರ ಮಾಡಬೇಕು ಎಂದರು.

ನನ್ನ ನಂಬಿ ಬಂದವರು ಅತಂತ್ರ ಆಗಬಾರದು. ಅವರಿಗೆ ನೆಲೆಕೊಡಿಸಲು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ನನ್ನ ಮತ್ತು ದೇವೇಗೌಡರ ರಾಜಕೀಯ 50 ವರ್ಷ ಸುದೀರ್ಘವಾದುದ್ದು. ದೇವೇಗೌಡರ ಜೊತೆ ನಾನು 20 ವರ್ಷಗಳಿಂದ ಇದ್ದೇನೆ. ನನಗೂ ಅವರಿಗೆ ತಂದೆ ಮಗನ ಸಂಬಂಧ. ನಾನು ದೇವೇಗೌಡರು ಇರುವವರೆಗೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೆ. ಆದರೆ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಒತ್ತಾಯಿಸಿದ್ದಾರೆ. ನಾನು ದೇವೇಗೌಡರಿಗೆ ಈ ವಿಚಾರ ಹೇಳಲು ಹೋಗಿ ವಾಪಸ್ ಬಂದಿದ್ದೇನೆ. ನಮ್ಮ ಕ್ಷೇತ್ರದ ಕೋಮುವಾದಿಗಳ ಜೊತೆ ಸೆಣಸಬೇಕು ಅಂದ್ರೆ ಕಾಂಗ್ರೆಸ್ ಸೇರಬೇಕು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಒತ್ತಾಯವಾಗಿದೆ ಎಂದು ತಿಳಿಸಿದರು. 

ಕಾಂಗ್ರೆಸ್ ಪಕ್ಷ ಸೇರ್ಪಡೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಯಾವುದೇ ಷರತ್ತು ವಿಧಿಸದೆ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದಿದ್ದಾರೆ. ಒಂದು ಮೂಲದ ಪ್ರಕಾರ ಅವರು ಇದೇ ಡಿಸೆಂಬರ್ 17ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ರಾಜಕೀಯ ಹೊರತುಪಡಿಸಿ ದತ್ತ ಅವರು ಪ್ರೀತಿಯ, ಮಕ್ಕಳ ಅಚ್ಚುಮೆಚ್ಚಿನ ಮೇಷ್ಟ್ರು, ಸಾಹಿತ್ಯಪ್ರಿಯ ರಾಜಕಾರಣಿ, ವಾಕ್ಪಟು ಎಂದೇ ಜನಪ್ರಿಯರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com