ರಾಜ್ಯಕ್ಕೆ 'ಬಿಜೆಪಿ ಚಾಣಕ್ಯ' ಅಮಿತ್ ಶಾ ಆಗಮನ: ಹಳೆ ಮೈಸೂರು ಭಾಗದ ಮತದಾರರನ್ನು ಓಲೈಸಲು ಕೇಸರಿ ಪಡೆ ತಂತ್ರ

2023ರ ವಿಧಾನಸಭೆ ಚುನಾವಣೆಗೆ ಸಮಯ ಸನ್ನಿಹಿತವಾಗುತ್ತಿದೆ. ಚುನಾವಣೆಯ ಮೂಡ್ ಗೆ ಈಗಾಗಲೇ ಪ್ರಮುಖ ಪಕ್ಷಗಳು ಸಿದ್ಧವಾಗುತ್ತಿವೆ. ಈ ಹೊತ್ತಿನಲ್ಲಿ ಕಳೆದ ರಾತ್ರಿ ಬಿಜೆಪಿಯ ಚಾಣಾಕ್ಷ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಹಳೆ ಮೈಸೂರು ಭಾಗದಲ್ಲಿ ಪುಷ್ಠಿ ನೀಡಬೇಕಿದೆ. 
ನಿನ್ನೆ ಬೆಂಗಳೂರಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು
ನಿನ್ನೆ ಬೆಂಗಳೂರಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಸಮಯ ಸನ್ನಿಹಿತವಾಗುತ್ತಿದೆ. ಚುನಾವಣೆಯ ಮೂಡ್ ಗೆ ಈಗಾಗಲೇ ಪ್ರಮುಖ ಪಕ್ಷಗಳು ಸಿದ್ಧವಾಗುತ್ತಿವೆ. ಈ ಹೊತ್ತಿನಲ್ಲಿ ಕಳೆದ ರಾತ್ರಿ ಬಿಜೆಪಿಯ ಚಾಣಾಕ್ಷ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಹಳೆ ಮೈಸೂರು ಭಾಗದಲ್ಲಿ ಪುಷ್ಠಿ ನೀಡಬೇಕಿದೆ. 

ನಾಳೆ ಮಂಡ್ಯದಲ್ಲಿ ಅಮಿತ್ ಶಾ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮಿತ್ ಶಾ ಅವರು ಬಿಜೆಪಿಯ ಸ್ಟಾರ್ ಪ್ರಚಾರಕ. ನಾಳೆ ಮಂಡ್ಯದಲ್ಲಿ ಅವರು ಭಾಷಣ ಮಾಡುವಾಗ ಬಿಜೆಪಿಯ ಸಾಧನೆಯ ರಿಪೋರ್ಟ್ ಕಾರ್ಡುಗಳನ್ನು ಜನತೆಯ ಮುಂದಿಡುವ ಸಾಧ್ಯತೆಗಳಿವೆ.

ಇಂದು ಐಟಿ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು, ನಂತರ ಸಕ್ಕರೆ ನಾಡು ಮಂಡ್ಯದಲ್ಲಿ ಅಮಿತ್ ಶಾ ಅವರು ಸಂಚರಿಸಲಿದ್ದಾರೆ. ವಿಧಾನಸಭೆ ಚುನಾವಣೆಗೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ, ರಾಜ್ಯ ನಾಯಕರಿಗೆ ಉತ್ತೇಜನ ನೀಡಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಚೆಕ್ ಮೇಟ್ ಕೊಡುವುದು ಅಮಿತ್ ಶಾ ಪ್ರವಾಸದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ. ಮಂಡ್ಯದಲ್ಲಿ ಸ್ವತಂತ್ರ ಸಂಸದೆಯಾಗಿ ಸುಮಲತಾ ಅಂಬರೀಷ್ ಕೂಡ ಇದ್ದಾರೆ. ಅವರನ್ನು ಸಹ ಬಿಜೆಪಿಗೆ ಸೆಳೆಯುವ ಸಾಧ್ಯತೆ ಹೆಚ್ಚಾಗಿದೆ. 

ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆ ಕಾಲದಲ್ಲಿ ಮೈಸೂರಿನ ಹಿಂದಿನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ಕೋಮುದಳ್ಳುರಿ ಹೆಚ್ಚಾಗಿದೆ. ಇಲ್ಲಿನ ಜಮಿಯಾ ಮಸೀದಿಯಲ್ಲಿ ಹಿಂದೂ ಸಂಘಟನೆಗಳು ತಮಗೆ ಪೂಜೆ ಮಾಡುವ ಹಕ್ಕನ್ನು ಕೇಳುತ್ತಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಬಹುದು ಎಂಬ ಲೆಕ್ಕಾಚಾರ ಕೂಡ ಇದೆ.

ಅಮಿತ್ ಶಾ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಮಂಡ್ಯ, ಮೈಸೂರು ಭಾಗಗಳಲ್ಲಿ ಹಾಕಲಾಗಿರುವ ಫ್ಲೆಕ್ಸ್, ಬ್ಯಾನರ್ , ಕಟೌಟ್ ಗಳಲ್ಲಿ ಸಂಸದೆ ಸುಮಲತಾ ಫೋಟೋಗಳು ರಾರಾಜಿಸುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ಸುಮಲತಾ ಜೆಡಿಎಸ್ ಕೋಟೆ ಮಂಡ್ಯವನ್ನು ತಮ್ಮದಾಗಿಸಿಕೊಂಡರು. 

2023ರ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಹೊಂದುವ ಆಕಾಂಕ್ಷೆ ಇರಿಸಿಕೊಂಡಿದೆ. ಮಿಷನ್‌ನ ಭಾಗವಾಗಿ ಮಂಡ್ಯ, ಮೈಸೂರು ಭಾಗದಲ್ಲಿ 89 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ನಿನ್ನೆ ಹೇಳಿದ್ದಾರೆ. ನಾವು ಇದನ್ನು ಸವಾಲಾಗಿ ತೆಗೆದುಕೊಂಡಿದ್ದೇವೆ, ಇತರ ಪಕ್ಷಗಳಿಂದ ಹೆಚ್ಚಿನ ನಾಯಕರು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸೇರ್ಪಡೆಯಾಗುತ್ತಾರೆ ಎಂದು ಕೂಡ ಹೇಳಿದರು. 

ಬೂತ್‌ಗಳಲ್ಲಿ ಶೇಕಡಾ 100 ರಷ್ಟು ಮತದಾನವನ್ನು ಸಾಧಿಸುವ ಗುರಿಯೊಂದಿಗೆ ಶಾ ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿಯ ‘ಬೂತ್ ವಿಜಯ ಅಭಿಯಾನ’ವನ್ನು ಪ್ರಾರಂಭಿಸಲಿದ್ದಾರೆ. 2023ರ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿ ನಾರಾಯಣಗೌಡ ಅವರು ಜೆಡಿಎಸ್‌ನಿಂದ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆದ್ದು ಈಗಾಗಲೇ ಸಚಿವರಾಗಿದ್ದಾರೆ.

ಶಾ, ಸಿಎಂ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ಸಾಧ್ಯತೆ: 2023 ರ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಳ ಪ್ರವಾಸದಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ವಿಸ್ತರಣೆಯ ಬಗ್ಗೆ ಊಹಾಪೋಹಗಳು ಹರಡಿವೆ. ಸಚಿವ ಸಂಪುಟ ವಿಸ್ತರಣೆಯ ಪರಿಣಾಮಗಳ ಕುರಿತು ಶಾ ಮತ್ತು ಬೊಮ್ಮಾಯಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ಲೀನ್ ಚಿಟ್ ಸಿಕ್ಕಿದೆ ಎಂದು ಹೇಳಿಕೊಳ್ಳುತ್ತಿರುವ ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಪ್ರಬಲ ಸ್ಪರ್ಧಿಗಳಾಗಿದ್ದು, ತಮ್ಮ ಮತದಾರರ ಮುಂದೆ ತಮ್ಮನ್ನು ತಾವು ಸಾಬೀತುಪಡಿಸಬೇಕಾಗಿದೆ.

ಅಮಿತ್ ಶಾ ಅವರು ದೆಹಲಿಗೆ ಹೋದ ನಂತರ ಸಂಪುಟ ವಿಸ್ತರಣೆ ನಡೆದರೆ ಅವರಿಗೆ ಮಾತ್ರ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಮೂಲವೊಂದು ತಿಳಿಸಿದೆ. ಖಾಲಿ ಇರುವ ಆರು ಸ್ಥಾನಗಳನ್ನು ತುಂಬಲು ಬೊಮ್ಮಾಯಿ ಪ್ರಯತ್ನಿಸಿದರೆ, ಕೆಲವು ನಾಯಕರು ಜಾತಿ ಆಧಾರದ ಮೇಲೆ ಸ್ಥಾನಗಳನ್ನು ಪಡೆದುಕೊಳ್ಳುತ್ತಿರುವುದರಿಂದ ಅದು ಹಿನ್ನಡೆಯಾಗಬಹುದು.

ಯೋಗೀಶ್ವರ ಅವರಿಗೆ ಒಕ್ಕಲಿಗ ಕೋಟಾ ನೀಡಿದರೆ, ದಿವಂಗತ ಉಮೇಶ್ ಕತ್ತಿ ಅವರ ಸ್ಥಾನವನ್ನು ತುಂಬಲು ಲಿಂಗಾಯತರು ಕೋಟಾವನ್ನು ಭರ್ತಿ ಮಾಡುವಂತೆ ಒತ್ತಾಯಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಶಿವಮೊಗ್ಗದಲ್ಲಿರುವ ಈಶ್ವರಪ್ಪನವರು ತಾವು ಅಮಿತ್ ಶಾ ಅವರನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com