ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನ: 'ಕೈ' ಬಿಟ್ಟು 'ತೆನೆ' ಹೊರಲು ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಸಜ್ಜು?

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಕೈ ಕೊಟ್ಟು ಜೆಡಿಎಸ್ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಜೋರಾಗಿ ಕೇಳಿ ಬರುತ್ತಿವೆ.
ಕೆ.ಹೆಚ್. ಮುನಿಯಪ್ಪ
ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಕೈ ಕೊಟ್ಟು ಜೆಡಿಎಸ್ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಜೋರಾಗಿ ಕೇಳಿ ಬರುತ್ತಿವೆ.

ಜೆಡಿಎಸ್ ಸೇರ್ಪಡೆ ಬಗ್ಗೆ ದೇವೇಗೌಡರ ಜೊತೆ ನಡೆದಿದೆಯಾ ಮಾತುಕತೆ ಎಂಬ ಅನುಮಾನ ಶುರುವಾಗಿದೆ. ಸತತ ಏಳು ಬಾರಿ ಕಾಂಗ್ರೆಸ್ ನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಮುನಿಯಪ್ಪ ಅವರು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಇತ್ತೀಚೆಗೆ ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದ ಮಾಜಿ ಕೇಂದ್ರ ಸಚಿವ ಮುನಿಯಪ್ಪ , ಡಾ. ಎಂ.ಸಿ ಸುಧಾಕರ್, ಕೊತ್ತನೂರು ಮಂಜುನಾಥ್ ರನ್ನ ಪಕ್ಷಕ್ಕೆ ಸೇರಿಸಿಕೊಂಡ ಕಾರಣ ಆಕ್ರೋಶಗೊಂಡಿದ್ದಾರೆನ್ನಲಾಗಿದೆ.

ಇದೀಗ ಕಾಂಗ್ರೆಸ್ ಪಾಳಯದಿಂದ ಒಂದು ಕಾಲನ್ನ ಹೊರಗೆ ಇಟ್ಟಿರುವ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಜೆಡಿಎಸ್ ಗೆ ಹೋಗಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿರುವುದು ತಿಳಿದುಬಂದಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ನಾಳೆ ಬೆಂಬಲಿಗರ ಸಭೆ ಕರೆದಿದ್ದಾರೆನ್ನಲಾಗಿದೆ. ಕೋಲಾರದ ತಮ್ಮ ನಿವಾಸದಲ್ಲಿ ಮುಂದಿನ ರಾಜಕೀಯ ತೀರ್ಮಾನಕ್ಕಾಗಿ ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com