ಚುನಾವಣೆಗೆ ಕಾಂಗ್ರೆಸ್ ಸಜ್ಜು: ಕರ್ನಾಟಕಕ್ಕೆ ರಾಜಕೀಯ ವ್ಯವಹಾರಗಳ ಸಮಿತಿ ರಚಿನೆ, 5 ಕಾರ್ಯದರ್ಶಿಗಳ ನೇಮಕ

ವಿಧಾನಸಭ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್, ನಿನ್ನೆ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದೆ. ಅದರಲ್ಲಿ ರಾಜ್ಯದ ಹಲವು ಪ್ರಮುಖ ಕಾಂಗ್ರೆಸ್ ನಾಯಕರಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ ಅವರ ಜೊತೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡುವ ಐವರು ಕಾರ್ಯದರ್ಶಿಗಳನ್ನು ಹೈಕಮಾಂಡ್ ನೇಮಕ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು 22 ಸದಸ್ಯರ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದ್ದು, ಸುರ್ಜೆವಾಲಾ ಅವರು ಸಂಚಾಲಕರಾಗಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ ವೀರಪ್ಪ ಮೊಯ್ಲಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜು ಖರ್ಗೆ, ಹಿರಿಯ ನಾಯಕರಾದ ಬಿ ಕೆ ಹರಿಪ್ರಸಾದ್, ದಿನೇಶ್ ಗುಂಡೂರಾವ್, ಮಾರ್ಗರೇಟ್ ಆಳ್ವ, ಡಿ ಕೆ ಸುರೇಶ್ ಮತ್ತು ಪಕ್ಷದ ಕಾರ್ಯಪಡೆ ಸದಸ್ಯ ಸುನಿಲ್ ಕಣುಗೋಲು ಸದಸ್ಯರಾಗಿರುತ್ತಾರೆ.

ಸೋನಿಯಾ ಗಾಂಧಿಯವರು ಐವರು ಎಐಸಿಸಿ ಕಾರ್ಯದರ್ಶಿಗಳನ್ನು ಸಹ ಕರ್ನಾಟಕಕ್ಕೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಮನ್ವಯದಿಂದ ಕೆಲಸ ಮಾಡಲು ನೇಮಕಾತಿ ಮಾಡಿದ್ದಾರೆ. ಅವರುಗಳು ಡಿ ಶ್ರೀಧರ್ ಬಾಬು, ಪಿ ಸಿ ಸಿ ವಿಷ್ಣುನಾದ್, ರೋಜಿ ಎಂ ಜಾನ್, ಮಯೂರ ಎಸ್ ಜಯಕುಮಾರ್ ಮತ್ತು ಅಭಿಷೇಕ್ ದತ್ತ ಆಗಿದ್ದಾರೆ. ಇವರುಗಳು ಸಹ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ.

ಕುಲ್ದೀಪ್ ಸಿಂಗ್ ಶರ್ಮ ಮತ್ತು ರಮಿಂದರ್ ಸಿಂಗ್ ಅವ್ಲ ಅವರನ್ನು ಈಗಿರುವ ಎಐಸಿಸಿ ಕಾರ್ಯದರ್ಶಿಗಳ ಜವಾಬ್ದಾರಿಯಿಂದ ಬಿಡುಗಡೆಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com