ಕಾಂಗ್ರೆಸ್ ನಲ್ಲಿ ಒಡಕಿಲ್ಲ; ರಮೇಶ್ ಕುಮಾರ್ ಹೇಳಿಕೆಗೆ ಡಿಕೆ ಶಿವಕುಮಾರ್ ಸಮರ್ಥನೆ

ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಬಿರುಕಿಲ್ಲ. ಬಿರುಕು ಇರೋದು ಮಾಧ್ಯಮಗಳ ವರದಿಯಲ್ಲಿ ಮಾತ್ರ. ನಾವ್ಯಾರೂ ಸಿಎಂ ಹುದ್ದೆಗಾಗಿ ಕಚ್ಚಾಡುತ್ತಿಲ್ಲ. ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿಯೇ ಇದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಬಿರುಕಿಲ್ಲ. ಬಿರುಕು ಇರೋದು ಮಾಧ್ಯಮಗಳ ವರದಿಯಲ್ಲಿ ಮಾತ್ರ. ನಾವ್ಯಾರೂ ಸಿಎಂ ಹುದ್ದೆಗಾಗಿ ಕಚ್ಚಾಡುತ್ತಿಲ್ಲ. ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿಯೇ ಇದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆಂಬ ಮಾಜಿ ಸ್ಪೀಕರ್ ಕೆ ಆರ್ ರಮೇಶ್​ ಕುಮಾರ್ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಸಮರ್ಥಿಸಿಕೊಂಡಿದ್ದಾರೆ. ರಮೇಶ್ ಕುಮಾರ್ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸೋದು ಬೇಡ. ರಮೇಶ್​ ಕುಮಾರ್ ಹೇಳಿಕೆಯನ್ನು ತಿರುಚಲಾಗಿದೆ.

ಬೇಕಾದ್ರೆ ಅವರ ಭಾಷಣ ಕೇಳಿ, ಅವರು ಸರಿಯಾಗೇ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ನಮ್ಮನ್ನು ಬಲಿಷ್ಠರನ್ನಾಗಿ ಮಾಡಿದ್ದಾರೆ. ಅದನ್ನೇ ಮೂರು ತಲೆಮಾರು ಆಸ್ತಿ ಅಂತ ರಮೇಶ್​​​​ ಹೇಳಿದ್ದಾರೆ. ಆಸ್ತಿ ಅಂದ್ರೆ ಹಾಗಲ್ಲ, ಸಂವಿಧಾನ ಕೊಟ್ಟಿದ್ದಾರೆ ಎಂದು ಡಿಕೆಶಿ ವ್ಯಾಖ್ಯಾನಿಸಿದ್ದಾರೆ. ಉಳುವವನಿಗೆ ಭೂಮಿ ಕಾಯ್ದೆ ನೀಡಿದ್ದಾರೆ, ಅದು ಆಸ್ತಿ ಅಲ್ವಾ? ಎಂದು ರಮೇಶ್​ ಕುಮಾರ್ ಹೇಳಿಕೆ ಸಮರ್ಥನೆಗೆ ಡಿ.ಕೆ. ಶಿವಕುಮಾರ್ ಉದಾಹರಣೆಯಾಗಿ ನೀಡಿದ್ದಾರೆ. ಮನಮೋಹನ್ ಸಿಂಗ್ ಗೆ ಅಧಿಕಾರ ನೀಡಿ ತ್ಯಾಗ ಮಾಡಿದ್ದಾರೆ. ಅಲ್ಲಿ ಮನರೆಗಾ ಅಂತ ಯೋಜನೆ ನೀಡಿದ್ದಾರೆ ಅದು ಆಸ್ತಿ ಅಲ್ವಾ…? ಎಂದೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇನ್ನೂ ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್, ಇಬ್ಬರ ಕದನದಲ್ಲಿ ನಾನು ಯಾಕೆ ಬರಲಿ. ನಮಗೂ ಸಾಮರ್ಥ್ಯ ಇದೆ. ನಾವು ಬರಬೇಕು ಅಂದರೆ ನೇರವಾಗಿಯೇ ಬರುತ್ತೇವೆ. ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್ ಎಂದು ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಇಬ್ಬರ ಕದನ ನನಗೆ ಯಾಕಪ್ಪಾ? ನಮಗೂ ಸಾಮರ್ಥ್ಯ ಇದೆ. ಯಾವಾಗ ಬೇಕು. ಆವಾಗ ನೇರವಾಗಿಯೇ ಬರುತ್ತೇನೆ. ಎಂ.ಬಿ.ಪಾಟೀಲ್ಇಬ್ಬರ ಕದನದಾಗ ಬರುವಂತದ್ದು ಬೇಕಾಗಿಲ್ಲ. ನಾವು ಬರಬೇಕು ಅಂದರೆ ನೇರವಾಗಿಯೇ ಬರುತ್ತೇವೆ. ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್ ಎಂದು ಹೇಳಿದ್ದಾರೆ.

ಸಿವಿಲ್ ಗುತ್ತಿಗೆದಾರರ ಗುಂಪು ಪ್ರಧಾನಿಗೆ ಪತ್ರ ಬರೆದಿದೆ, ಶೇ. 40 ರಷ್ಟು ಕಮಿಷನ್‌ಗೆ ಸಚಿವರು ಬೇಡಿಕೆ ಇಟ್ಟಿದ್ದಾರೆ. ಸಚಿವರ ಮೇಲೆ ಇಡಿ, ಐಟಿ ಮತ್ತು ಸಿಬಿಐ ದಾಳಿಗಳನ್ನು ಏಕೆ ನಡೆಸುತ್ತಿಲ್ಲ ಎಂದು ನಾನು ತಿಳಿಯಲು ಬಯಸುತ್ತೇನೆ ಎಂದು ಅವರು ಹೇಳಿದರು. ಗ್ರಾಮೀಣ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ನವರು ಎತ್ತರಕ್ಕೆ ಬೆಳೆದಿದ್ದಾರೆ, ಹೀಗಾಗಿ ಅವರ 75ನೇ ವರ್ಷದ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com