ಜೆಡಿಎಸ್ ಸಮಾವೇಶದಲ್ಲಿ ಮತ್ತೆ ಕಣ್ಣೀರಧಾರೆ: ಅಪ್ಪನ ಸ್ಥಿತಿ ಕಂಡು ಕಣ್ಣೀರು ಹಾಕಿದ ಅಣ್ತಮ್ಮ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ವ್ಯಾಪ್ತಿಯ ಸೋಮನಹಳ್ಳ ಅಮ್ಮನವರ ದೇಗುಲ ಆವರಣದಲ್ಲಿ ಇಂದು ಭಾನುವಾರ ಜೆಡಿಎಸ್ ಸಮಾವೇಶ ಆಯೋಜನೆಗೊಂಡಿತ್ತು. ಜ್ಯೋತಿ ಬೆಳಗುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ ಹೆಚ್​ಡಿಕೆ ಭಾಷಣ ವೇಳೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. 
ಸೋದರರು ಕಣ್ಣೀರು ಹಾಕುವ ಸಾಂದರ್ಭಿಕ ಚಿತ್ರ
ಸೋದರರು ಕಣ್ಣೀರು ಹಾಕುವ ಸಾಂದರ್ಭಿಕ ಚಿತ್ರ

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ವ್ಯಾಪ್ತಿಯ ಸೋಮನಹಳ್ಳ ಅಮ್ಮನವರ ದೇಗುಲ ಆವರಣದಲ್ಲಿ ಇಂದು ಭಾನುವಾರ ಜೆಡಿಎಸ್ ಸಮಾವೇಶ ಆಯೋಜನೆಗೊಂಡಿತ್ತು. ಜ್ಯೋತಿ ಬೆಳಗುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ ಹೆಚ್​ಡಿಕೆ ಭಾಷಣ ವೇಳೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. 

ಸೋದರನ ಕಣ್ಣಲ್ಲಿ ನೀರು ಕಂಡು ಹೆಚ್ ಡಿ ರೇವಣ್ಣ ಅವರು ಸಹ ವೇದಿಕೆಯಲ್ಲಿ ಕಣ್ಣೀರು ಹಾಕಿದರು. ಭಾಷಣ ಮುಗಿಸಿ ಟವೆಲ್ ಹಿಡಿದುಕೊಂಡು ಬಂದು ಅಳುತ್ತಾ ಕುಳಿತ ಹೆಚ್ ಡಿಕೆಯನ್ನು ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸಮಾಧಾನಪಡಿಸಿದರು.

ಸಮಾವೇಶ ಮಧ್ಯೆ ಮನೆಯಲ್ಲಿ ವಯೋಸಹಜ ಶಕ್ತಿಹೀನತೆಯಿಂದ ಕುಳಿತಿರುವ ಹೆಚ್ ಡಿ ದೇವೇಗೌಡರು ಮನೆಯಲ್ಲಿ ಕುಳಿತಿರುವ ದೃಶ್ಯವನ್ನು ತೋರಿಸಲಾಯಿತು. ಆಗ ಕಣ್ಣೀರು ಹಾಕುತ್ತಾ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಸಾಲಮನ್ನಾದಿಂದ ರೈತರಿಗೆ ಬದುಕು ಶಾಶ್ವತವಾಗಿ ಸಿಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿ 5 ವರ್ಷ ನನಗೆ ಆಡಳಿತ ಕೊಟ್ಟರೆ ರೈತರು ಸಾಲಗಾರರಾಗದಿರುವಂತಹ ರೀತಿಯಲ್ಲಿ ನಾನು ಮಾಡುತ್ತೇನೆ. ರಾಜ್ಯಕ್ಕೆ ಯಾವ ರೀತಿ ಯೋಜನೆಗಳನ್ನು ಕೊಡುತ್ತೇನೆ ಎಂದು ಮನೆಮನೆಗೆ ಪ್ರಣಾಳಿಕೆ ಕಳುಹಿಸುತ್ತೇನೆ ಎಂದು ಘೋಷಿಸಿದರು.

ನಾಡಿನ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕಬೇಕು, ಹಳ್ಳಿಯಲ್ಲಿರುವ ಶಿಕ್ಷಣವಂಚಿತ ಹೆಣ್ಣುಮಕ್ಕಳಿಗೆ ಆಸರೆಯಾಗುವ ಯೋಜನೆ ಸಿದ್ಧಪಡಿಸಿದ್ದೇನೆ ಎಂದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ, ಅನುದಾನ ನೀಡಿದ್ದೇನೆ, ಆದರೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಕೆಲವು ಮಾಧ್ಯಮಗಳಲ್ಲಿ ಕೂಡ ನನ್ನ ಬಗ್ಗೆ ತಪ್ಪಾಗಿ ಬಂದವು ಎಂದು ನೊಂದು ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com