'ಟ್ರಾವೆಲಿಂಗ್ ಮೋಡ್' ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ: ಕುಟುಂಬ ಸಮೇತ ವಿದೇಶ ಪ್ರವಾಸದಲ್ಲಿ ಬಿಎಸ್ ವೈ!

ಬಿಡುವಿಲ್ಲದ ರಾಜಕೀಯದ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸದ್ಯ ಪ್ರವಾಸದ ಮೂಡ್ ನಲ್ಲಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿದ ನಂತರ ಬಿಎಸ್ ವೈ ಕಳೆದ 10 ತಿಂಗಳಲ್ಲಿ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ವಿದೇಶ ಪ್ರವಾಸದಲ್ಲಿ ಯಡಿಯೂರಪ್ಪ
ವಿದೇಶ ಪ್ರವಾಸದಲ್ಲಿ ಯಡಿಯೂರಪ್ಪ

ಬೆಂಗಳೂರು: ಬಿಡುವಿಲ್ಲದ ರಾಜಕೀಯದ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸದ್ಯ ಪ್ರವಾಸದ ಮೂಡ್ ನಲ್ಲಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿದ ನಂತರ ಬಿಎಸ್ ವೈ ಕಳೆದ 10 ತಿಂಗಳಲ್ಲಿ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಜುಲೈ 2021 ರಂದು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಯುರೋಪಿಯನ್ ದೇಶಗಳು ಸೇರಿದಂತೆ ನಾಲ್ಕು ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ್ದಾರೆ. ಈ ಬಾರಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದಾರೆ.

1972ರಲ್ಲಿ ಶಿಕಾರಿಪುರ ಪುರಸಭೆಯಿಂದ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ಸುಮಾರು ಐದು ದಶಕಗಳ ಕಾಲ ರಾಜಕೀಯ ಜೀವನದಲ್ಲಿದ್ದಾರೆ. ಇಷ್ಟು ವರ್ಷ ಕರ್ನಾಟಕದ ಉದ್ದಗಲ ಮತ್ತು ಉಸಿರು ಹಿಡಿದು ಪಕ್ಷವನ್ನು ಬಲಪಡಿಸಿ ನಂತರ ಸಿಎಂ ಆದರು. ಈಗ ಪಕ್ಷದ ನೆಲೆಯನ್ನು ಬಲಪಡಿಸಲು ಅವರ ಪ್ರವಾಸ ಕರ್ನಾಟಕಕ್ಕೆ ಸೀಮಿತವಾಗಿದೆ. ಈಗ ಸಮಯ ಸಿಕ್ಕಿದ್ದರಿಂದ ಕುಟುಂಬ ಸಮೇತ ಪ್ರವಾಸ ಮಾಡಿ ಅವರ ಜತೆ ಕಾಲ ಕಳೆಯುತ್ತಿದ್ದಾರೆ’’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

2011 ರಲ್ಲಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಾಗ, ಅವರು ತಮ್ಮ ಕುಟುಂಬದೊಂದಿಗೆ ಮಾರಿಷಸ್‌ಗೆ ಹೋಗಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ, ಅವರು ಮಾಲ್ಡೀವ್ಸ್ ಮತ್ತು ಯುಎಇ ಸೇರಿದಂತೆ ಕೆಲವು ದೇಶಗಳಿಗೆ ಪ್ರಯಾಣಿಸಿದರು. ರಾಜೀನಾಮೆ ನೀಡಿದ ಕೆಲವೇ ವಾರಗಳ ನಂತರ ಅವರು ಆಗಸ್ಟ್‌ನಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದರು. ಇದೇ ವೇಳೆ ಕನ್ನಡ ಸಂಘದ ಆಹ್ವಾನ ಬಂದಾಗ ಎರಡು ಬಾರಿ ಯುಎಇಗೆ ತೆರಳಿದ್ದರು. ಕರ್ನಾಟಕದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಅವರು ಗೈರಾಗಿದ್ದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಮಗ ಬಿವೈ ವಿಜಯೇಂದ್ರ, ಸೊಸೆಯಂದಿರು, ಪುತ್ರಿಯರು, ಅಳಿಯ ಮೊಮ್ಮಕ್ಕಳು ಸೇರಿದಂತೆ ತಮ್ಮ ಇಡೀ ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಿಂದ ನಿರ್ಗಮಿಸಿದ ಕೂಡಲೇ ಯಡಿಯೂರಪ್ಪ ಬೆಂಗಳೂರು ತೊರೆದರು.

ಜುಲೈ 1 ರೊಳಗೆ ಹಿಂತಿರುಗುತ್ತಾರೆ ಎಂದು ಮೂಲಗಳು ತಿಳಿಸಿವೆ. "ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಭೇಟಿ ನೀಡುವುದು ಅವರ ಆಸೆಯಾಗಿತ್ತು". ಅವರು ಯುಕೆ ಮತ್ತು ಜರ್ಮನಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com