ಜೆಡಿಎಸ್ ಪಂಚರತ್ನ ಯಾತ್ರೆಗೆ ಮಳೆ ಅಡ್ಡಿ: ವಾರದಮಟ್ಟಿಗೆ ಕಾರ್ಯಕ್ರಮ ಮುಂದೂಡಿದ ಎಚ್.ಡಿಕೆ
ಮುಳಬಾಗಿಲು: ಸತತ ಮಳೆ ಕಾರಣ ಪಂಚರತ್ನ ರಥಯಾತ್ರೆಯನ್ನು ವಾರದಮಟ್ಟಿಗೆ ಮುಂದೂಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ದೇವರ ಪ್ರಸಾದವೂ ಆಗಿದೆ, ಚೆನ್ನಾಗಿ ಪೂಜೆಯೂ ನಡೆದಿದೆ. ಆದರೆ, ಮಳೆ ಕಾರಣ ಸಮಾವೇಶ ನಡೆಸಲು ಸಾಧ್ಯವಾಗುತ್ತಿಲ್ಲ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ ನಾಲ್ಕೈದು ದಿನ ಮಳೆ ಬರಲಿದೆ' ಎಂದರು.
ಕಾರ್ಯಕ್ರಮ ಅಸ್ತವ್ಯಸ್ತವಾಗಲಿದೆ ಎಂಬ ಮುಖಂಡರ ಸಲಹೆ ಮೇರೆಗೆ ರಥಯಾತ್ರೆ ಮುಂದೂಡಲಾಗಿದೆ. ಗ್ರಾಮ ವಾಸ್ತವ್ಯವೂ ನಡೆಯುವುದಿಲ್ಲ ಎಂದು ಹೇಳಿದರು. ಪಂಚರತ್ನ ನನ್ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಮಳೆ ಬಂದಿರುವುದು ಪಂಚರತ್ನಕ್ಕೆ ಶುಭ ಸೂಚನೆ. ಮುಂದಿನ ದಿನಾಂಕವನ್ನು ಮೂರು ದಿನಗಳಲ್ಲಿ ಚರ್ಚೆ ಮಾಡಿ ನಿಗದಿ ಮಾಡುತ್ತೇವೆ.
ಮುಳಬಾಗಿಲಿನಿಂದಲೇ ಮತ್ತೆ ರಥಯಾತ್ರೆಗೆ ಚಾಲನೆ ನೀಡುತ್ತೇವೆ ಎಂದರು. ಇನ್ನು ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಪಂಚರತ್ನ ಯೋಜನೆ ಜಾರಿಯಾಗಬೇಕೆಂದ್ರೆ ಜೆಡಿಎಸ್ ಪಕ್ಷಕ್ಕೆ ಬಹುಮತ ಅಗತ್ಯ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ