ಹಲವು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುವಂತೆ ನನಗೆ ಒತ್ತಡ ಹಾಕುತ್ತಿದ್ದಾರೆ, ಇನ್ನೂ ತೀರ್ಮಾನ ಮಾಡಿಲ್ಲ: ಸಿದ್ದರಾಮಯ್ಯ

ನನ್ನ ಕ್ಷೇತ್ರ ಬಾದಾಮಿಯಲ್ಲಿ ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಹಳ ಜನರು ಒತ್ತಡ ಹಾಕುತ್ತಿದ್ದಾರೆ, ಮಹಿಳೆಯರು ಮನೆ ಮುಂದೆ ಬಂದು ಒತ್ತಾಯಿಸುತ್ತಿದ್ದಾರೆ, ಪತ್ರ ಬರೆಯುತ್ತಿದ್ದಾರೆ. ಪ್ರತಿ ವಾರಕ್ಕೊಮ್ಮೆ ಅಲ್ಲಿ ಹೋಗುವುದಕ್ಕಾಗುವುದಿಲ್ಲ, ಇರುವುದಕ್ಕಾಗುವುದಿಲ್ಲ. ಬೇರೆ ಬೇರೆ ಕೆಲಸದ ಒತ್ತಡಗಳಿಂದಾಗಿ ಬಾದಾಮಿಗೆ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ, ಹೀಗಾಗಿ ಮ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಳಗಾವಿ: ನನ್ನ ಕ್ಷೇತ್ರ ಬಾದಾಮಿಯಲ್ಲಿ ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಹಳ ಜನರು ಒತ್ತಡ ಹಾಕುತ್ತಿದ್ದಾರೆ, ಮಹಿಳೆಯರು ಮನೆ ಮುಂದೆ ಬಂದು ಒತ್ತಾಯಿಸುತ್ತಿದ್ದಾರೆ, ಪತ್ರ ಬರೆಯುತ್ತಿದ್ದಾರೆ. ಪ್ರತಿ ವಾರಕ್ಕೊಮ್ಮೆ ಅಲ್ಲಿ ಹೋಗುವುದಕ್ಕಾಗುವುದಿಲ್ಲ, ಇರುವುದಕ್ಕಾಗುವುದಿಲ್ಲ. ಬೇರೆ ಬೇರೆ ಕೆಲಸದ ಒತ್ತಡಗಳಿಂದಾಗಿ ಬಾದಾಮಿಗೆ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ, ಹೀಗಾಗಿ ಮುಂದಿನ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸುವುದು ಎಂದು ಯೋಚಿಸುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಬಾದಾಮಿ ಕ್ಷೇತ್ರಕ್ಕೆ ಹೋಗದೆ ಎರಡು ತಿಂಗಳಾಗಿದೆ. ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ ಕ್ಷೇತ್ರ ಬದಲಿಸಲು ಯೋಚಿಸುತ್ತಿದ್ದೇನೆ. ಕೋಲಾರದಲ್ಲಿ ನಿಲ್ಲಿ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಚಾಮರಾಜಪೇಟೆಯಿಂದಲೂ ನಿಲ್ಲಿ ಎಂದು ಒತ್ತಡವಿದೆ. ವರುಣಾದಿಂದ ನಿಲ್ಲಿ ಎಂದು ನನ್ನ ಮಗ ಹೇಳುತ್ತಿದ್ದಾನೆ. ಎಲ್ಲಿ ನಿಲ್ಲಲಿ ನೀವೇ ಹೇಳಿ ಎಂದು ಸುದ್ದಿಗಾರರಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎರಡೂ ಕಡೆ ಡಬಲ್ ಎಂಜಿನ್ ಸರ್ಕಾರ ನಮ್ಮದು ಇದೆ ಎಂದು ಪ್ರಧಾನಿ ಮೋದಿಯವರು ಪದೇ ಪದೇ ಭಾಷಣದಲ್ಲಿ ಹೇಳುತ್ತಿದ್ದಾರೆ. ಅವರು ಈ ರಾಜ್ಯಕ್ಕೆ ಏನು ಮಾಡಿದ್ದಾರೆ. ಪ್ರವಾಹ ಬಂದಾಗ ಬರಲಿಲ್ಲ. ಬಡವರ ಕಷ್ಟ ಸುಖ ಕೇಳಲಿಲ್ಲ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ, ಅದಕ್ಕೋಸ್ಕರ ಮೋದಿಯವರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ಈ ದೇಶದ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ ಪರಿಹಾರಕ್ಕೆ ಏನು ಮಾಡಿದ್ದಾರೆ. 40 ಶೇಕಡಾ ಕಮಿಷನ್ ಆರೋಪ ಬಗ್ಗೆ ಏನು ಮಾಡಿದ್ದಾರೆ. ದ್ವೇಷದ ರಾಜಕಾರಣ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಾಗಿದೆ ಎಂದರು.

ಈ ದೇಶದಲ್ಲಿ ಕೊಲೆ ಕೇಸಿನ ಆರೋಪಿಗಳು ಶಾಸಕರು, ಸಂಸದರು, ಮಂತ್ರಿಗಳಾಗಿದ್ದಾರೆ. ಈ ದೇಶದ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧವೇ ಕೊಲೆ ಆರೋಪ ಬಂದಿಲ್ಲವೇ, ಅಮಿತ್ ಶಾ ವಿರುದ್ಧ ಕೊಲೆ ಆರೋಪ ಗಡಿಪಾರು ಆದೇಶ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು. 

ಬೆಳಗಾವಿಗೆ ಕೈ ನಾಯಕರು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್ ಆಗಮಿಸಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹುಟ್ಟು ಹಬ್ಬ ಹಿನ್ನೆಲೆ ಆಗಮಿಸಿದ್ದಾರೆ. ಸಂಜೆ ಐದು ಗಂಟೆಗೆ ಕಿತ್ತೂರಿನಲ್ಲಿ ನಡೆಯುತ್ತಿರುವ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಈ ನಾಯಕರೆಲ್ಲಾ ಭಾಗಿಯಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com