ಹೈಟೆಕ್ ಬಸ್ಸಿನಲ್ಲಿ ಕೋಲಾರ ಸುತ್ತಿಕೊಂಡು ಬರಲು ಹೊರಟ ಸಿದ್ದರಾಮಯ್ಯ: ಚಿನ್ನದ ನಾಡಿನಿಂದ ಈ ಬಾರಿ ಸ್ಪರ್ಧೆ?

2023 ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದೆ. ಇನ್ನು ಕೆಲವೇ ತಿಂಗಳುಗಳು ಬಾಕಿ. ಈ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಬಾರಿ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ

ಕೋಲಾರ: 2023 ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದೆ. ಇನ್ನು ಕೆಲವೇ ತಿಂಗಳುಗಳು ಬಾಕಿ. ಈ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಬಾರಿ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಚಿನ್ನದ ಗಣಿ ನಾಡು ಕೋಲಾರದತ್ತ ಚಿತ್ತ ಹರಿಸಿದ್ದಾರೆ. ರಾಜ್ಯದ ನಾಲ್ಕೈದು ಕಡೆಗಳಿಂದ ಸ್ಪರ್ಧೆಗೆ ಇಂಗಿತ, ಕಾರ್ಯಕರ್ತರು, ಬೆಂಬಲಿಗರ ಒತ್ತಡ, ಬೇಡಿಕೆ ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗೆ ಕೋಲಾರದಿಂದ ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಲು, ಜನರ ಬೆಂಬಲ ಎಷ್ಟರ ಮಟ್ಟಿಗೆ ಇದೆ ಎಂದು ಸ್ಪಷ್ಟ ಚಿತ್ರಣ ಪಡೆಯಲು ಸಿದ್ದರಾಮಯ್ಯನವರು ಇಂದು ಕೋಲಾರಕ್ಕೆ ಆಗಮಿಸಿದ್ದಾರೆ. ಅವರಿಗಾಗಿ ವಿಶೇಷ ಕ್ಯಾರವಾನ್ ಇರುವ ಬಸ್ಸು ಸಜ್ಜಾಗಿದ್ದು ಆ ಮೂಲಕವೇ ಕೋಲಾರದಾದ್ಯಂತ ಸಂಚಾರ ಮಾಡಲಿದ್ದಾರೆ.ಹಲವು ಮಾಸ್ಟರ್ ಪ್ಲಾನ್ ಗಳನ್ನು ಮಾಡಿಕೊಂಡಿದ್ದಾರೆ.

ವಿಶೇಷ ಹೈಟೆಕ್ ಬಸ್ಸು: ಬಸ್​ನಲ್ಲಿ ಟಿವಿ, ಲಿಫ್ಟ್, ಬಾತ್​ರೂಮ್, ಮೀಟಿಂಗ್ ವ್ಯವಸ್ಥೆಯಿದ್ದು, ಇದೇ ಬಸ್​​ನಲ್ಲಿ ರಾಜ್ಯ ಸುತ್ತಲು ಸಿದ್ದರಾಮಯ್ಯ ಯೋಜನೆ ಮಾಡಿಕೊಂಡಿದ್ದಾರೆ. ಚಾಲಕ ಹೊರತುಪಡಿಸಿ ಆರು ಪ್ರಯಾಣಿಕರಿಗೆ ಸೀಟ್ ವ್ಯವಸ್ಥೆ. ವಿಶೇಷ ಬಸ್​ನಲ್ಲಿದೆ ಏರ್ ಕಂಡೀಷನ್, ಮೂರು LED ಟಿವಿ. ಬಸ್​​ ಮೇಲೆ ನಿಂತು ಭಾಷಣ ಮಾಡಲು ಲಿಫ್ಟ್ ವ್ಯವಸ್ಥೆಯಿದೆ. 

ಶ್ರೀನಿವಾಸ ಗೌಡ ನಿಲ್ಲುವುದಿಲ್ಲ, ಹಾಗಾಗಿ ನನ್ನನ್ನು ಕರೆಯುತ್ತಿದ್ದಾರೆ: ನಾಲ್ಕೈದು ಮಂದಿ ಒಟ್ಟಿಗೆ ಹೋಗಬೇಕಿರುವುದರಿಂದ ವಿಶೇಷ ಬಸ್ಸು ವ್ಯವಸ್ಥೆ ಮಾಡಿದ್ದಾರೆ. ಶ್ರೀನಿವಾಸ ಗೌಡ ಕೋಲಾರದಲ್ಲಿ ನಿಲ್ಲುವುದಿಲ್ಲ, ಶ್ರೀನಿವಾಸ ಗೌಡರು ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಅಲ್ಲಿ ಬೇರೆ ಯಾರೂ ಕ್ಯಾಂಡಿಡೇಟ್ ಇಲ್ಲ, ಹಾಗಾಗಿ ನನ್ನನ್ನು ಈ ಬಾರಿ ಸ್ಪರ್ಧೆಗೆ ನಿಲ್ಲಿ ಎಂದು ಕರೆಯುತ್ತಿದ್ದಾರೆ. ಬೇರೆ ನಾಲ್ಕೈದು ಕಡೆ ಕರೆಯುತ್ತಾರೆ. ಅಂತಿಮವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದರು.

ಎಲ್ಲೆಲ್ಲಿ ಸ್ಪರ್ಧಿಸಬಹುದು ಎಂದು ಹೆಸರು ಸೂಚಿಸಿ ನಾನು ಹೈಕಮಾಂಡ್ ಗೆ ವರದಿ ಕಳುಹಿಸುತ್ತೇನೆ, ಹೈಕಮಾಂಡ್ ಎಲ್ಲಿ ಸ್ಪರ್ಧಿಸಬೇಕೆಂದು ತೀರ್ಮಾನ ಕೈಗೊಳ್ಳುತ್ತಾರೆಯೋ ಅಲ್ಲಿ ನಿಂತುಕೊಳ್ಳುತ್ತೇನೆ,ಕೋಲಾರ ಜನತೆಯನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೊರಟಿದ್ದೇನೆ ಎಂದರು ಸಿದ್ದರಾಮಯ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com