ಯೋಗೇಶ್ವರ್ ಬಿಜೆಪಿ ಸರ್ಕಾರದ ಪವರ್ ಲೀಡರ್- ಎಚ್.ಡಿ.ಕೆ; ಜೆಡಿಎಸ್ ಮನೆ, ಬಿಜೆಪಿ ಮನೆ ಎಂದು ವಿಂಗಡಿಸಲ್ಲ -ಸಿಪಿವೈ; ವಸತಿ ಯೋಜನೆ ಕ್ರೆಡಿಟ್ ವಾರ್!

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರೀತಿ ಗೋಲ್‌ಮಾಲ್ ರಾಜಕಾರಣ ಮಾಡುತ್ತಿಲ್ಲ. ನಾವು ಅನ್ನದಾತರ ಸಮಸ್ಯೆ ಪರ ಯಾವ ಹೋರಾಟಕ್ಕಾದರೂ ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಿ.ಪಿ ಯೋಗೇಶ್ವರ್ ಮತ್ತು ಎಚ್.ಡಿ ಕುಮಾರಸ್ವಾಮಿ
ಸಿ.ಪಿ ಯೋಗೇಶ್ವರ್ ಮತ್ತು ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರೀತಿ ಗೋಲ್‌ಮಾಲ್ ರಾಜಕಾರಣ ಮಾಡುತ್ತಿಲ್ಲ. ನಾವು ಅನ್ನದಾತರ ಸಮಸ್ಯೆ ಪರ ಯಾವ ಹೋರಾಟಕ್ಕಾದರೂ ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಸತಿಹೀನರಿಗೆ ಸೂರು ಕಲ್ಪಿಸುವಂತೆ ನಾನು 2019ರಲ್ಲೇ ವಸತಿ ಸಚಿವರಿಗೆ ಪತ್ರ ಬರೆದು 3,200 ಮನೆಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೆ. ಆದರೆ ಕೊರೋನಾ ಕಾಲದಿಂದಾಗಿ ಅದು ವಿಳಂಬವಾಗಿತ್ತು. ಇದೀಗ ಸರ್ಕಾರ ಮನೆಗಳ ಮಂಜೂರಾತಿಗೆ ಆದೇಶ ನೀಡಿದೆ. ಅದನ್ನು ಸಿ.ಪಿ. ಯೋಗೇಶ್ವರ್ ಅವರು ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರದ ಪವರ್‌ಪುಲ್ ಮಂತ್ರಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಪತ್ರ ಬರೆದ ವೇಳೆ ಸರ್ಕಾರ ಮನ್ನಣೆ ನೀಡಿರಲಿಲ್ಲ. ಆದರೆ ನನ್ನ ಪತ್ರಕ್ಕೆ ಮನ್ನಣೆ ನೀಡಿದೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರದ ಪವರ್ ಲೀಡರ್ ಆಗಿದ್ದಾರೆ ಎಂದು ಟೀಕಿಸಿದರು.

ಇನ್ನೂ ಎಚ್ .ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್, ಈ ಹಿಂದೆ ನಾನು ನೀರಾವರಿ ಮಾಡಲು ಮುಂದಾದಾಗಲೂ ನೆಗೆಟಿವ್‌ ಆಗಿ ಮಾತನಾಡಿದ್ದರು. ನಮ್ಮ ಕೆಲಸ ಯಶಸ್ವಿ ಆದ ಮೇಲೆ ಅದನ್ನು ನಾವೇ ಮಾಡಿದ್ದು ಎಂದರು. ಕುಮಾರಸ್ವಾಮಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ವಸತಿ ಯೋಜನೆ ವಿಚಾರದಲ್ಲೂಅದನ್ನೇ ಮಾಡುತ್ತಿದ್ದಾರೆ. ಬೇಕಿದ್ದರೆ 3 ಸಾವಿರ ಫಲಾನುಭವಿಗಳನ್ನು ಕುಮಾರಸ್ವಾಮಿ ಅವರೇ ಆಯ್ಕೆ ಮಾಡಲಿ ಎಂದಿದ್ದಾರೆ.

ನೆರೆಯಿಂದ ತಾಲೂಕಿನಲ್ಲಿ ಮನೆಗಳು ಹಾನಿಯಾದ ಹಿನ್ನೆಲೆಯಲ್ಲಿ ನನ್ನ ಮನವಿಗೆ ಸ್ಪಂದಿಸಿ ವಸತಿ ಸಚಿವ ಸೋಮಣ್ಣ 3 ಸಾವಿರ ಮನೆ ಮಂಜೂರು ಮಾಡಿದ್ದಾರೆ. ಇಲ್ಲಿ ಯಾರು ಮನೆ ತಂದರು ಎಂಬುದು ಮುಖ್ಯವಲ್ಲ, ತಾಲೂಕಿಗೆ ಸಿಕ್ಕಿದೆ ಎಂಬುದು ಮುಖ್ಯ. ಆದರೆ, ಕುಮಾರಸ್ವಾಮಿ ಅವರು ಜೆಡಿಎಸ್‌ ಮನೆ, ಕಾಂಗ್ರೆಸ್‌ ಮನೆ ಎಂದು ವಿಂಗಡಿಸಲು ಮುಂದಾಗಿದ್ದಾರೆ ಎಂದು ಕಿಡಿಕಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com