ಸಿದ್ದರಾಮಯ್ಯ ಕಾಂಗ್ರೆಸ್ ನ ಮುಂದಿನ ಸ್ವಯಂಘೋಷಿತ ಮುಖ್ಯಮಂತ್ರಿ: ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅಂಡು ಸುಟ್ಟ ಬೆಕ್ಕಿನಂತೆ ಓಡಾಡ್ತಿದ್ದಾರೆ, ಒಮ್ಮೆ ಕೋಲಾರ ಹೋಗ್ತಾರೆ, ಮತ್ತೆ ಚಾಮರಾಜನಗರ ಕ್ಷೇತ್ರಕ್ಕೆ ಹೋಗುತ್ತಾರೆ. ಮತ್ತೆ ಚಾಮುಂಡೇಶ್ವರಿ, ಬೀಳಗಿ ಬಾದಾಮಿಗೆ ಬರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್
ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್

ಧಾರವಾಡ: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅಂಡು ಸುಟ್ಟ ಬೆಕ್ಕಿನಂತೆ ಓಡಾಡ್ತಿದ್ದಾರೆ, ಒಮ್ಮೆ ಕೋಲಾರ ಹೋಗ್ತಾರೆ, ಮತ್ತೆ ಚಾಮರಾಜನಗರ ಕ್ಷೇತ್ರಕ್ಕೆ ಹೋಗುತ್ತಾರೆ. ಮತ್ತೆ ಚಾಮುಂಡೇಶ್ವರಿ, ಬೀಳಗಿ ಬಾದಾಮಿಗೆ ಬರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ಲೇವಡಿ ಮಾಡಿದ್ದಾರೆ.

ಇಂದು ಧಾರವಾಡ ಹೊರವಲಯ ಗರಗ ಕ್ರಾಸ್‌ನಲ್ಲಿ ಶ್ರೀ ಗುರು ಮಡಿವಾಳೇಶ್ವರ ದ್ವಾರ ಬಾಗಿಲು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗರಗ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಮಠವಿದ್ದು, ಮುಖ್ಯ ರಸ್ತೆಗೆ ದ್ವಾರ ನಿರ್ಮಾಣ ಮಾಡಲಾಗುತ್ತಿದೆ ಎಂದರು, ಸಿದ್ದರಾಮಯ್ಯ ಸ್ಥಿತಿ ಕುಂಡಿ(ಅಂಡು) ಸುಟ್ಟ ಬೆಕ್ಕಿನಂತಾಗಿದೆ. ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ಮಾಡಿದ್ದರು. ಅವರ ಶಿಷ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಹತ್ತು ಲಕ್ಷ ಜನ ಸೇರಿದ್ದರು ಎಂದಿದ್ದರು. ರಾಜ್ಯದಲ್ಲಿ 160 ಜನರಲ್ ಕ್ಷೇತ್ರಗಳಿದ್ರೂ, ಸಿದ್ದರಾಮಯ್ಯರಿಗೆ ಒಂದು ಕ್ಷೇತ್ರ ಸಹ ಸಿಗ್ತಿಲ್ಲ ಎಂದು ವ್ಯಂಗ್ಯ ಮಾಡಿದರು.

ಇನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚುನಾವಣೆ ಸ್ಪರ್ಧೆ ಬೇಡವೆಂದು ಇತ್ತೀಚೆಗೆ ಸಂತೋಷ್ ಲಾಡ್ ಹೇಳಿರುವ ಬಗ್ಗೆ ಕೇಳಿದಾಗ ಬಸನಗೌಡ ಪಾಟೀಲ್  ಯತ್ನಾಳ್, ಸಂತೋಷ್ ಲಾಡ್​ಗೆ ತಮ್ಮ ಇಬ್ಬರು ನಾಯಕರು ಸೋಲ್ತಾರೆ ಎಂದು ಅನ್ನಿಸಿರಬಹುದು. ಹಾಗಾಗಿ ಈ ರೀತಿ ಮಾತನಾಡಿದ್ದು, ಅದು ಅವರ ಪಕ್ಷದ ವಿಚಾರ ಎಂದರು.

ಇದೇ ವೇಳೆ ಯತ್ನಾಳ್ ಕಾಂಗ್ರೆಸ್ ಬಿ ಟೀಮ್ ಎಂಬ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿದರು. ಬಿ ಟೀಮ್ , ಎ ಟೀಮ್ ಎನ್ನುವುದು ಕೆಲವು ದಿನಗಳಲ್ಲಿ ಗೊತ್ತಾಗಲಿದೆ. ಸಮಾಜಕ್ಕೆ ನ್ಯಾಯ ಕೊಡಿಸಲು ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ. ನಾನು, ಕಡಾಡಿ ಸೇರಿ ಬಿಜೆಪಿಯವರೇ ಹೋರಾಟದಲ್ಲಿದ್ದೇವೆ. ಕಾಶಪ್ಪನವರಿಗೆ ಪಂಚಮಸಾಲಿ ಹೋರಾಟಕ್ಕೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಪಕ್ಷಾತೀತ ವಿಚಾರ. ಹಾಗೆ ಹರಿಹರ ಪೀಠಕ್ಕೆ ಜೆಡಿಎಸ್​ನವರು ಅಧ್ಯಕ್ಷರಾಗಿದ್ದಾರೆ ಎಂದರು.

ಪರೇಶ್​ ಮೇಸ್ತಾ ಪ್ರಕರಣದ ಬಗ್ಗೆ ಇನ್ನೊಮ್ಮೆ ತನಿಖೆ ಮಾಡಿಸುವ ಚಿಂತನೆ ನಡೆದಿದೆ. ಇನ್ನೊಮ್ಮೆ ಪುನರ್ ತನಿಖೆ ಆಗಬೇಕಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪರಿಶೀಲನೆ ಮಾಡುವಂತೆ ಸರ್ಕಾರ ಈಗಾಗಲೇ ಸಿಬಿಐಗೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿಗೆ ಮತ್ತೆ ಮಂತ್ರಿ ಸ್ಥಾನ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಆಗುತ್ತಾರೆ. ರಮೇಶ್​ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ಸುದ್ದಿ ಸುಳ್ಳು. ರಮೇಶ್ ಜಾರಕಿಹೊಳಿ ಆದಷ್ಟು ಬೇಗ ಮಂತ್ರಿ ಆಗಲಿದ್ದು, ಅವರ ಎಲ್ಲಾ ಭವಿಷ್ಯ ಬಿಜೆಪಿಯಲ್ಲಿದೆ. ಮಂತ್ರಿ ಮಂಡಲ ಪುನರ್ ರಚನೆ ಆಗಬಹುದು. ಆದರೆ ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಇಲ್ಲ ಎಂದು ಯತ್ನಾಳ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com