'ಭಾರತ್ ಜೋಡೋ ಯಾತ್ರೆ': ಧ್ವಜ ನೆಟ್ಟಿದ್ದ ಕಬ್ಬಿಣದ ಕಂಬಿ ಕಿತ್ತು - ಹಣ್ಣು, ನೀರಿನ ಬಾಟಲ್ ದೋಚಿ ಜನರು ಪರಾರಿ!

ಗುಂಡ್ಲುಪೇಟೆಯಲ್ಲಿ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಅವ್ಯವಸ್ಥೆಗಳ ಆಗರವಾಗಿತ್ತು. ರಾಜ್ಯ ನಾಯಕರು ಎಷ್ಟೇ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದ್ದರೂ  ಕೆಲವರಿಂದ ಅಸ್ತವ್ಯಸ್ತವಾಗಿತ್ತು.
ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆ
ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆ

ಮೈಸೂರು: ಗುಂಡ್ಲುಪೇಟೆಯಲ್ಲಿ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಅವ್ಯವಸ್ಥೆಗಳ ಆಗರವಾಗಿತ್ತು. ರಾಜ್ಯ ನಾಯಕರು ಎಷ್ಟೇ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದ್ದರೂ ಕೆಲವರಿಂದ ಅಸ್ತವ್ಯಸ್ತವಾಗಿತ್ತು.

ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯಲ್ಲಿ ಭಾರತ್ ಜೋಡೋ ಪಾದಯಾತ್ರೆಗಾಗಿ, ಹಾಕಿದ್ದ ಕಬ್ಬಿಣದ ಧ್ವಜಸ್ತಂಭಗಳನ್ನು ಕೆಲ ಜನರು ಕಿತ್ತುಕೊಂಡು ಓಡಿ ಹೋದ ಕಾರಣ ಭಾರತ್ ಜೋಡೋ ಯಾತ್ರೆಗೆ ಸ್ವಲ್ಪ ಹಿನ್ನಡೆ ಉಂಟಾಯಿತು.

ದಿನವಿಡೀ ಶ್ರಮ ವಹಿಸಿ ಪಕ್ಷದ ಕಾರ್ಯಕರ್ತರು ನೆಟ್ಟ ಧ್ವಜ ಹಾಕಿದ್ದ ಲೋಹದ ಕಂಬಗಳನ್ನು ಕಿತ್ತುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂತು.

ನಾವು ಹಣವಿಲ್ಲದೇ ಪರದಾಡುತ್ತಿದ್ದೇವೆ, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವುದು ನಿಜಕ್ಕೂ ಕಷ್ಟಕರವಾಗಿದೆ, ಕಂಬಗಳನ್ನು ತೆಗೆದುಕೊಂಡು ಹೋಗುವುದು ಯಾವುದೇ ಅಪರಾಧವಲ್ಲ, ಅಥವಾ ತಪ್ಪಲ್ಲ ಎಂದು ಕೆಲಸೂರು ಬಳಿ ಇರುವ ನಂಜಯ್ಯ ಹೇಳಿದ್ದಾರೆ, ಅವರು 7 ಕಂಬಗಳನ್ನು ಕಿತ್ತುಕೊಂಡು ಹೋಗಿದ್ದಾರೆ, ಅವರಿಗೆ ಮತ್ತೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದಾಗ ಅಲ್ಲಿಂದ ಓಡಿ ಹೋದರು.

ಭಾರತ್ ಜೋಡೋ ಕಾರ್ಯಕ್ರಮಕ್ಕೆ ಆಗಮಿಸಿದವರಿಗಾಗಿ, ಮಧ್ಯಾಹ್ನದ ಊಟ, ಮಜ್ಜಿಗೆ, ಕಬ್ಬಿನ ರಸ, ಸೇರಿದಂತೆ ಟೀ, ಕಾಫಿ ವ್ಯವಸ್ಥೆ ಮಾಡಿದ್ದರು. ಸುಡುವ ಬಿಸಿಲಿನಲ್ಲಿ ಸಾವಿರಾರು ಜನರಿಗೆ ಆಹಾರ ವಿತರಿಸಲು ಸಂಘಟಕರು ಸುಸ್ತಾಗಿದ್ದರಿಂದ ಹಲವರು, ನೀರಿನ ಬಾಟಲ್ ಗಳು ಮತ್ತು ಒಬ್ಬೊಬ್ಬರು 10-12 ಬಾಳೆಹಣ್ಣುಗಳನ್ನು  ತೆಗೆದುಕೊಂಡು ಹೋದರು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com