ಟಿಪ್ಪುವನ್ನು ಕನ್ನಡಿಗ ಎಂದು ಒಪ್ಪಿಯೇ ಇಲ್ಲ; ರೈಲಿಗೆ ಒಡೆಯರ್ ಹೆಸರೇ ಸೂಕ್ತ: ಆರ್. ಅಶೋಕ್

ಸರ್ಕಾರ ಒಳ್ಳೆಯ ಉದ್ದೇಶದಿಂದ ಮೈಸೂರು–ಬೆಂಗಳೂರು ನಡುವಿನ ಟಿಪ್ಪು ಎಕ್ಸಪ್ರೆಸ್ ರೈಲಿಗಿದ್ದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ. ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು: ಸರ್ಕಾರ ಒಳ್ಳೆಯ ಉದ್ದೇಶದಿಂದ ಮೈಸೂರು–ಬೆಂಗಳೂರು ನಡುವಿನ ಟಿಪ್ಪು ಎಕ್ಸಪ್ರೆಸ್ ರೈಲಿಗಿದ್ದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ. ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಟಿಪ್ಪು ಕನ್ನಡಿಗ ಅಂತ ಒಪ್ಪಿಯೇ ಇಲ್ಲ, ಟಿಪ್ಪುವಿನ ಆಡಳಿತ ಭಾಷೆ ಪರ್ಶಿಯನ್. ಕಗ್ಗೊಲೆ ಮಾಡಿ, ಮತಾಂತರ ಮಾಡಿದ್ದಾನೆ. ಚಲುವನಾರಾಯಣ ಸ್ವಾಮಿ ದೇವಸ್ಥಾನದ ಬಳಿ ಕೊಗ್ಗೊಲೆ ಮಾಡಿದ್ದಾನೆ ಎಂದು ಹೇಳಿದರು.

ಮೈಸೂರು ಮಂಡ್ಯ ಭಾಗಕ್ಕೆ ನೀರು ಕೊಟ್ಟವರು ಒಡೆಯರ್. ತಮ್ಮ ಒಡವೆ ಮಾರಿ ಕೆಆರ್‌ಎಸ್ ಕಟ್ಟಿ ಕರ್ಣರಾದರು. ಮೊದಲ ವಿದ್ಯುತ್ ತಯಾರಿಕೆ ಮಾಡಿದ್ದು, ಸೋಪ್, ಸಕ್ಕರೆ ತಯಾರಿಕೆ ಎಲ್ಲವನ್ಮೂ ಕರ್ನಾಟಕಕ್ಕೆ ಕೊಟ್ಟವರು‌. ಅವರ ಹೆಸರಲ್ಲೇ ಜಂಬೂ ಸವಾರಿ ಆರಂಭವಾಗಿದ್ದು ಹಾಗಾಗಿ ಒಡೆಯರ್ ಹೆಸರು ಸೂಕ್ತವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ವಿರೋಧಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಇನ್ನು ನೂರು ಟ್ರೈನ್ ತಂದು ಟಿಪ್ಪು, ಲಾಡೆನ್, ಗಜನಿ ಮೊಹಮ್ಮದ್ ಟ್ರೈನ್ ಓಡಿಸಲಿ. ಈ ಹೆಸರನ್ನ ಟ್ರೈನಿಗೆ ಇಟ್ರೆ ಜನರು ಮೆಚ್ತಾರೆ. ಅವರು ಅಧಿಕಾರಕ್ಕೆ ಬಂದಾಗ ಇಟ್ಟುಕೊಳ್ಳಲಿ. ನಮ್ಮ ಬೆಂಬಲ ಒಡೆಯರ್ ಅವರಿಗೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com