ರಾಜ್ಯ ಸರ್ಕಾರ ಭ್ರಷ್ಟಾಚಾರದ ಗುಂಡಿಯಲ್ಲಿ ಬಿದ್ದು ಕಮಿಷನ್ ಎಂಬ ಕೆಸರಲ್ಲಿ ಹೊರಳಾಡುತ್ತಿದೆ: ಕಾಂಗ್ರೆಸ್

ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಕಾಂಗ್ರೆಸ್, ಹೈಕೋರ್ಟ್ ಛಿಮಾರಿ ಹಾಕಿದರೂ, ಜನತೆ ಶಾಪ ಹಾಕಿದರೂ ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರಕ್ಕೆ ಇನ್ಯಾವ ಅಭಿವೃದ್ಧಿ...
ಬೆಂಗಳೂರಿನ ರಸ್ತೆಗಳು
ಬೆಂಗಳೂರಿನ ರಸ್ತೆಗಳು

ಬೆಂಗಳೂರು: ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಕಾಂಗ್ರೆಸ್, ಹೈಕೋರ್ಟ್ ಛಿಮಾರಿ ಹಾಕಿದರೂ, ಜನತೆ ಶಾಪ ಹಾಕಿದರೂ ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರಕ್ಕೆ ಇನ್ಯಾವ ಅಭಿವೃದ್ಧಿ ಮಾಡಲು ಸಾಧ್ಯ? ಎಂದು ಗುರುವಾರ ಪ್ರಶ್ನಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರ ಭ್ರಷ್ಟಾಚಾರದ ಗುಂಡಿಯಲ್ಲಿ ಬಿದ್ದು ಕಮಿಷನ್ ಎಂಬ ಕೆಸರಲ್ಲಿ ಹೊರಳಾಡುತ್ತಿರುವಾಗ ಅಭಿವೃದ್ಧಿ ಮರೀಚಿಕೆಯೇ ಸರಿ ಎಂದು ಕಿಡಿ ಕಾರಿದೆ.

ಮುಖ್ಯಮಂತ್ರಿಗಳೇ, ಗುಂಡಿ ಮುಚ್ಚಲು ಇನ್ನೆಷ್ಟು ಜನ ಸಾಯಬೇಕು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದುವರೆಗೂ ರಸ್ತೆಗುಂಡಿಗೆ ಸುಮಾರು 16ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ನಿತ್ಯ ನೂರಾರು ಅಪಘಾತಗಳು ರಸ್ತೆ ಗುಂಡಿಯ ಕಾರಣಕ್ಕಾಗಿಯೇ ಸಂಭವಿಸುತ್ತಿವೆ.

ರಸ್ತೆಗೆ ಹಾಕಿದ ತೇಪೆಗಳು ನಾಲ್ಕೇ ದಿನಕ್ಕೆ ಕಿತ್ತು ಹೋಗುತ್ತಿವೆ. ಸರ್ಕಾರದ ಕಮಿಷನ್ 40% ಗಿಂತಲೂ ಹೆಚ್ಚಿದೆಯೇ? ಎಂದು ಮತ್ತೊಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com