ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮಾವೇಶವಲ್ಲ, "ಕಮಿಷನ್ ಸಮಾವೇಶ"; ಏನು ಸಾಧನೆ ಹೇಳಲು ಹೊರಟಿದ್ದೀರಿ?: ಕಾಂಗ್ರೆಸ್ ಟೀಕೆ

ಇಂದಿನ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸರ್ಕಾರದ ಸಾಧನೆ ಏನಿದೆ ಎಂದು ಹೇಳಲು ಹೊರಟಿದ್ದೀರಿ ಎಂದು ಸಿಎಂ ಬೊಮ್ಮಾಯಿಯವರನ್ನು ಹಾಗೂ ಸರ್ಕಾರವನ್ನು ಟೀಕಿಸಿ ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ. 
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಇಂದಿನ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸರ್ಕಾರದ ಸಾಧನೆ ಏನಿದೆ ಎಂದು ಹೇಳಲು ಹೊರಟಿದ್ದೀರಿ ಎಂದು ಸಿಎಂ ಬೊಮ್ಮಾಯಿಯವರನ್ನು ಹಾಗೂ ಸರ್ಕಾರವನ್ನು ಟೀಕಿಸಿ ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ. 

ರಾಜ್ಯದಲ್ಲಿ ನಡೆಯುವ ಕಾಮಗಾರಿಗಳಿಗೆ ಶೇಕಡಾ 40ರಷ್ಟು , ಬಿಬಿಎಂಪಿಯಲ್ಲಿ ಶೇಕಡಾ 50 ಪರ್ಸೆಂಟ್ ಕಮಿಷನ್ ಆರೋಪ ಕೇಳಿಬಂದಿದೆ. ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಪೈಪೋಟಿ ನಡೆಯದಿರುತ್ತದೆಯೇ, ಗುತ್ತಿಗೆದಾರರು ಸರ್ಕಾರದ ಕಮಿಷನ್ ಕಿರುಕುಳದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಿಲ್ಲ, ಪತ್ರಿಕಾಗೋಷ್ಠಿ ನಡೆಸಿದರೂ ಉಪಯೋಗವಿಲ್ಲ, 40% ಕಮಿಷನ್ ಲೂಟಿ ನಿಂತೇ ಇಲ್ಲ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ನಿಮ್ಮ ಸರ್ಕಾರದ ಸಾಧನೆ ಏನಿದೆ, ಅಕ್ರಮಗಳನ್ನು ಮುಚ್ಚಿಕೊಳ್ಳುವುದೇ ಎಂದು ಕೇಳಿದ್ದಾರೆ. 

ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮವೇಶವಲ್ಲ "ಕಮಿಷನ್ ಸಮಾವೇಶ" 40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ, ನಿಮ್ಮದೇ ಪಕ್ಷದ ಕಾರ್ಯಕರ್ತ & ಗುತ್ತಿಗೆದಾರ ಸಂತೋಷ್ ಪಾಟೀಲ್‌ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ, ಹೈಕೋರ್ಟ್ ಕೂಡ ಈ ಬಗ್ಗೆ ಪ್ರಶ್ನಿಸಿದೆ, ನಾಚಿಗೆಯಾಗಬೇಕು ನಿಮಗೆ ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com