ಟಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ: ಜನಪ್ರಿಯ ವೈದ್ಯ ರೇವಣ್ಣಗೆ ಬಿಜೆಪಿ ಗಾಳ!

ವಿರೋಧ ಪಕ್ಷ ಕಾಂಗ್ರೆಸ್ ಸೋಲಿಸಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಹೊಸ ಮುಖಗಳನ್ನು ತರಲು ಪ್ರಯತ್ನಿಸುತ್ತಿದೆ.  ಜನಪ್ರಿಯ ವೈದ್ಯ ರೇವಣ್ಣ ಅವರನ್ನು ಬಿಜೆಪಿಗೆ ಕರೆ ತರಲು ಪಕ್ಷ ಮುಂದಾಗಿದೆ.
ಮಹಾದೇವಪ್ಪ, ಅಶ್ವಿನ್ ಕುಮಾರ್ ಮತ್ತು ಡಾ. ರೇವಣ್ಣ
ಮಹಾದೇವಪ್ಪ, ಅಶ್ವಿನ್ ಕುಮಾರ್ ಮತ್ತು ಡಾ. ರೇವಣ್ಣ

ಮೈಸೂರು: ವಿರೋಧ ಪಕ್ಷ ಕಾಂಗ್ರೆಸ್ ಸೋಲಿಸಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಹೊಸ ಮುಖಗಳನ್ನು ತರಲು ಪ್ರಯತ್ನಿಸುತ್ತಿದೆ. ಜನಪ್ರಿಯ ವೈದ್ಯ ರೇವಣ್ಣ ಅವರನ್ನು ಟಿ ನರಸೀಪುರ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಡಾ. ರೇವಣ್ಣ ತನ್ನ ಸರ್ಕಾರಿ ಕೆಲಸವನ್ನು ತೊರೆದಿದ್ದಾರೆ. ಜೆಡಿಎಸ್ ನಿಂದ ಹಾಲಿ ಶಾಸಕ ಅಶ್ವಿನ್ ಕುಮಾರ್ ಕಣಕ್ಕಿಳಿದಿದ್ದು, ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರನ್ನು ಕಾಂಗ್ರೆಸ್ ಘೋಷಿಸಿರುವ ಟಿ ನರಸೀಪುರ ಮೀಸಲು ಕ್ಷೇತ್ರದಿಂದ ರೇವಣ್ಣ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ರೇವಣ್ಣನವರ ಈ ಬಿಜೆಪಿ ಸೇರ್ಪಡೆ ಕೇಸರಿ ಪಕ್ಷದ ನಿರೀಕ್ಷೆಯನ್ನು ಹೆಚ್ಚಿಸಿದ್ದು, ಮೇ 10ರ ಚುನಾವಣೆಯಲ್ಲಿ ತ್ರಿಕೋನ ಹೋರಾಟ ನಡೆಯುವ ಸಾಧ್ಯತೆ ಇದೆ. ನೀಲಸೋಗೆ ಗ್ರಾಮದವರಾದ ರೇವಣ್ಣ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಹಾಗೂ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಮಾಜದ ಎಲ್ಲಾ ವರ್ಗಗಳಿಗೆ ಸೇರಿದ ರೋಗಿಗಳಲ್ಲಿ ಅವರು ಗೌರವಾನ್ವಿತ ವೈದ್ಯರಾಗಿದ್ದಾರೆ. ಬಿಜೆಪಿ ಕೋರ್ ಕಮಿಟಿ ಚರ್ಚಿಸಿ ರೇವಣ್ಣ ಅವರ ಹೆಸರನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದೆ ಎಂದು ಮೂಲಗಳು ಖಚಿತಪಡಿಸಿವೆ. ಪಕ್ಷವು ಶೀಘ್ರದಲ್ಲೇ ಪಟ್ಟಿಯನ್ನು ಪ್ರಕಟಿಸಲಿದ್ದು, ಪ್ರಚಾರವನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದು ಸ್ಥಳೀಯ ಬಿಜೆಪಿ ನಾಯಕರು ಭರವಸೆ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com