ಬಿಜೆಪಿ ಅಭ್ಯರ್ಥಿಗಳ ಬಡಿದಾಟಕ್ಕಿಂತ ಬಣ ಬಡಿದಾಟವೇ ಪಟ್ಟಿ ಬಿಡುಗಡೆಗೆ ತಡೆಯೊಡ್ಡಿದೆ: ಕಾಂಗ್ರೆಸ್

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಜೆಡಿಎಸ್ ಕೂಡಾ ಎರಡನೇ ಪಟ್ಟಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಜೆಡಿಎಸ್ ಕೂಡಾ ಎರಡನೇ ಪಟ್ಟಿ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ, ಆಡಳಿತಾರೂಢ ಬಿಜೆಪಿ ಮಾತ್ರ ಇನ್ನೂ ಮೊದಲ ಪಟ್ಟಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಅದರ ಅಭ್ಯರ್ಥಿಗಳ ಬಡಿದಾಟಕ್ಕಿಂತ ಬಣ ಬಡಿದಾಟವೇ ಪಟ್ಟಿ ಬಿಡುಗಡೆಗೆ ತಡೆಯೊಡ್ಡಿದೆ ಎಂದು ಕಾಂಗ್ರೆಸ್ ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಎಸ್ ಯಡಿಯೂರಪ್ಪ ಬಣ, ಬೊಮ್ಮಾಯಿ ಬಣ, ಆರ್ ಎಸ್ ಸ್ ಬಣ, ವಲಸಿಗರ ಬಣ, ಸಂತೋಷ್ ಬಣ, ಹೈಕಮಾಂಡ್ ಬಣಗಳ ಮೇಲಾಟದಲ್ಲಿ ಕನಿಷ್ಠ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿಲ್ಲ. ಇದು ಬಿಜೆಪಿ "ಮುಳುಗಿದ ಹಡಗು" ಎಂಬುದಕ್ಕೆ ನಿದರ್ಶನ ಎಂದು ಕುಹಕವಾಡಿದೆ.

ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ  ಘೋಷಿಸಲು ತಿಣುಕಾಡುತ್ತಿರುವ ರಾಜ್ಯ ಬಿಜೆಪಿಗೆ ಚುನಾವಣೆ ಎದುರಿಸುವ ಶಕ್ತಿ ಇದೆಯೇ. ಇಂದೇ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಬಿಎಸ್ ವೈ ಹೇಳಿದರೆ, ಇನ್ನೆರಡು ದಿನ ತಡ ಎಂದು  ಬೊಮ್ಮಾಯಿ ಹೇಳುತ್ತಾರೆ. ಪಟ್ಟಿ ಬಿಡುಗಡೆಯ ದಿನಾಂಕದಲ್ಲೆ ಒಮ್ಮತ ಇಲ್ಲದವರು ಅಭ್ಯರ್ಥಿಗಳಲ್ಲಿ ಒಮ್ಮತ ಇರಲು ಸಾಧ್ಯವೇ! ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com