ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದರು ಅಧಿಕಾರ ಅನುಭವಿಸಿಲ್ಲ; ನಾನು ತಪ್ಪು ಮಾಡಿದ್ದರೆ ಕ್ಷಮಿಸಿ, ನನ್ನ ಪತ್ನಿಗೆ ಮತ ನೀಡಿ!

ಮೂರೂ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಮುಂದುವರಿದಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರ ಆರಂಬಿಸಿದ್ದಾರೆ.
ಶಿವರಾಮೇಗೌಡ ಮತ್ತು ಪುಟ್ಟರಾಜು
ಶಿವರಾಮೇಗೌಡ ಮತ್ತು ಪುಟ್ಟರಾಜು

ಮೇಲುಕೋಟೆ: ಮೂರೂ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಮುಂದುವರಿದಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರ ಆರಂಬಿಸಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ನಾಗಮಂಗಲದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿರುವ ಪತ್ನಿ ಸುಧಾ ಶಿವರಾಮೇಗೌಡ ಪರ ಮತ ಯಾಚಿಸಿದರು.

ಕಳೆದ ನಾಲ್ಕು ದಶಕಗಳಿಂದ ನಾನು ರಾಜಕೀಯದಲ್ಲಿದ್ದೇನೆ, ಆದರೆ ಯಾವುದೇ ಎಂದಿಗೂ ಅಧಿಕಾರವನ್ನು ಅನುಭವಿಸಲಿಲ್ಲ. ಆದರೂ ಈ ಭಾಗದ ಜನರು ನನ್ನೊಂದಿಗಿದ್ದಾರೆ. ನಾನೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ನನ್ನ ಪತ್ನಿಗೆ ಮತ ನೀಡಿ ಎಂದು ನಾಗಮಂಗಲದಲ್ಲಿ ಹೇಳಿದರು.

ಇನ್ನೂ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಗುರುವಾರ ಪ್ರಚಾರ ಆರಂಭಿಸಿದ್ದಾರೆ. ತಾಲೂಕಿನ ಬಳಘಟ್ಟ, ಜಕ್ಕನಹಳ್ಳಿ, ಮಾಣಿಕ್ಯನಹಳ್ಳಿ, ಹಳೇಬೀದಿ, ಸುಂಕಾತೊಣ್ಣೂರು, ಲಕ್ಷ್ಮೀಸಾಗರ, ಚಿಕ್ಕಾಡೆ, ಕನಗನಮರಡಿ, ದೊಡ್ಡಬ್ಯಾಡಹಳ್ಳಿ, ಹಿರೇಮರಳಿ ಮತ್ತಿತರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು.

ಮೊದಲು ಪುಟ್ಟರಾಜು ದಂಪತಿ ಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೆಡಿಎಸ್ ನೀಡಿದ ಭರವಸೆಗಳು ಮತ್ತು ಪಕ್ಷದ ಪ್ರಣಾಳಿಕೆಯನ್ನು ಜನರಿಗೆ ತಲುಪಿಸಲು ಪಕ್ಷದ ಎಲ್ಲಾ ಕಾರ್ಯಕರ್ತರು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com