ಬಾಗಲಕೋಟೆ: ತಮಗೆ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕಾರಣ ಎಂಬ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಯಾರು ಯಾರ ಟಿಕೆಟ್ ನ್ನು ತಪ್ಪಿಸಿಲ್ಲ, ತಪ್ಪಿಸಲು ಸಾಧ್ಯ ಕೂಡ ಇಲ್ಲ, ಟಿಕೆಟ್ ಹಂಚಿಕೆ ನಿರ್ಧಾರ ಹೈಕಮಾಂಡ್ ನದ್ದು, ಲಿಂಗಾಯತ ನಾಯಕರನ್ನು ಪಕ್ಷ ಕಡೆಗಣಿಸಿಲ್ಲ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುವಾಗ ಪ್ರತಿಕ್ರಿಯೆ ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಯಾವುದೇ ತೊಂದರೆ ಇಲ್ಲ. ಲಿಂಗಾಯತರಿಗೆ ಸಮರ್ಪಕವಾಗಿ ಮನ್ನಣೆ ನೀಡಿದ್ದೇ ಬಿಜೆಪಿ. ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಾ ಬಂದಿದೆ. ಬಿಜೆಪಿ ಯಾರ ಕಪಿಮುಷ್ಠಿಯಲ್ಲೂ ಇಲ್ಲ, ಇದು ವ್ಯವಸ್ಥೆ ಬದ್ಧ ಪಕ್ಷ. ಎಲ್ಲವನ್ನೂ ಪರಿಶೀಲಿಸಿ ಹೈಕಮಾಂಡ್ ನಾಯಕರು ಟಿಕೆಟ್ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement