ಘನಾನುಘಟಿ ನಾಯಕರ ನಾಮಪತ್ರ ಸಲ್ಲಿಕೆ: ಭರ್ಜರಿ ರೋಡ್ ಶೋ, ಬೆಂಬಲಿಗರ ಬೃಹತ್ ಶಕ್ತಿ ಪ್ರದರ್ಶನ

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ನಾಮಪತ್ರ ಸಲ್ಲಿಕೆಗೆ ಇನ್ನು ಬಾಕಿ ಉಳಿದಿರುವುದು ಎರಡೇ ದಿನ. ರಾಜಕೀಯ ಪಕ್ಷಗಳು ಮತ್ತು ಟಿಕೆಟ್ ಆಕಾಂಕ್ಷಿತರ ಬೇಗುದಿ ಹೆಚ್ಚಾಗುತ್ತಿದೆ. ನಿನ್ನೆ ಸೋಮವಾರ ನಾಮಪತ್ರ ಸಲ್ಲಿಕೆಯ ಮೂರನೇ ಪ್ರಮುಖ ಮೂರು ಪಕ್ಷಗಳ ಘಟಾನುಘಟಿ ನಾಯಕರು ಸೇರಿದಂತೆ ಸುಮಾರು 842 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಘನಾನುಘಟಿ ನಾಯಕರ ನಾಮಪತ್ರ ಸಲ್ಲಿಕೆ: ಭರ್ಜರಿ ರೋಡ್ ಶೋ, ಬೆಂಬಲಿಗರ ಬೃಹತ್ ಶಕ್ತಿ ಪ್ರದರ್ಶನ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ನಾಮಪತ್ರ ಸಲ್ಲಿಕೆಗೆ ಇನ್ನು ಬಾಕಿ ಉಳಿದಿರುವುದು ಎರಡೇ ದಿನ. ರಾಜಕೀಯ ಪಕ್ಷಗಳು ಮತ್ತು ಟಿಕೆಟ್ ಆಕಾಂಕ್ಷಿತರ ಬೇಗುದಿ ಹೆಚ್ಚಾಗುತ್ತಿದೆ. ನಿನ್ನೆ ಸೋಮವಾರ ನಾಮಪತ್ರ ಸಲ್ಲಿಕೆಯ ಮೂರನೇ ಪ್ರಮುಖ ಮೂರು ಪಕ್ಷಗಳ ಘಟಾನುಘಟಿ ನಾಯಕರು ಸೇರಿದಂತೆ ಸುಮಾರು 842 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ಮೊದಲೆರಡು ದಿನ ಕ್ರಮವಾಗಿ 221 ಮತ್ತು 200 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೂರನೇ ದಿನವಾದ ನಿನ್ನೆ ನಾಲ್ಕು ಪಟ್ಟು ಹೆಚ್ಚಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹಾಗೂ ಹಲವು ಸಚಿವರುಗಳು ನಿನ್ನೆ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ಭರ್ಜರಿ ರೋಡ್ ಶೋ, ಶಕ್ತಿ ಪ್ರದರ್ಶನ: ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವ ದಿನ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಾಗ ಬೆಂಬಲಿಗರು, ಕಾರ್ಯಕರ್ತರು ಸಂಭ್ರಮ ಪಡುವುದು, ಮೆರವಣಿಗೆ ಸಾಗುವಂತೆ ನಿನ್ನೆ ವಾತಾವರಣ ಕಂಡುಬಂತು. ನಾಯಕರ ಬಲಾಬಲ ಪ್ರದರ್ಶಿಸಲು ರ್ಯಾಲಿ, ಪಥಸಂಚಲನ, ಸಮಾವೇಶಗಳನ್ನು ಆಯೋಜಿಸಿದ್ದರಿಂದ ಬಹುತೇಕ ಕ್ಷೇತ್ರಗಳಲ್ಲಿ ವಿಶೇಷವಾಗಿ ಪ್ರಮುಖ ನಾಯಕರು ತಮ್ಮ ಪತ್ರಗಳನ್ನು ಸಲ್ಲಿಸಿದ ಸಂದರ್ಭದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಹೆಚ್ಚಿನ ಅಭ್ಯರ್ಥಿಗಳು ತಮ್ಮ ನಾಮ ಪತ್ರಗಳನ್ನು ಸಲ್ಲಿಸುವ ಮೊದಲು ಅವರ ಬೆಂಬಲಿಗರು ಮತ್ತು ಕುಟುಂಬ ಸದಸ್ಯರೊಂದಿಗೆ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ಕಂಡುಬಂತು. 

ಮೈಸೂರಿನ ಹೈವೋಲ್ಟೇಜ್ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ ಸೋಮಣ್ಣ ಅವರು ನಾಮಪತ್ರ ಸಲ್ಲಿಸುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ಅವರ ತವರು ನೆಲದಲ್ಲಿಯೇ ಕಾಂಗ್ರೆಸ್ ನಾಯಕನನ್ನು ಸೋಲಿಸಲು ಶಕ್ತಿ ಪ್ರದರ್ಶನಕ್ಕಾಗಿ ರೋಡ್‌ಶೋ ಮತ್ತು ಸಮಾವೇಶವನ್ನು ಆಯೋಜಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಿಕ್ಕಮಗಳೂರಿನಿಂದ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್‌ನ ಮಾಜಿ ಸಚಿವ ಎಚ್‌ಡಿ ರೇವಣ್ಣ ಹೊಳೆನರಸೀಪುರದಿಂದ ನಾಮಪತ್ರ ಸಲ್ಲಿಸಿದರು.

ರಾಮನಗರ ಜಿಲ್ಲೆ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಬೈಕ್ ರ್ಯಾಲಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಿ ಬಳಿಕ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಇದೇ ಜಿಲ್ಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಹಾಗೂ ಅವರ ಪುತ್ರ ನಿಖಿಲ್ ರಾಮನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿದ್ದಂತೆ ಬೃಹತ್ ರೋಡ್ ಶೋ ನಡೆಸಿದರು. ಜಿಲ್ಲೆಯ ಇಬ್ಬರು ಬಲಾಢ್ಯ ನಾಯಕರು ತಮ್ಮ ಶಕ್ತಿ ಪ್ರದರ್ಶಿಸಿದ್ದರಿಂದ ಮೂರು ಊರುಗಳು ಸ್ಥಬ್ದಗೊಂಡು ಹೋಗಿದ್ದವು. 

ಬೆಂಗಳೂರು ನಗರದಲ್ಲಿ ಸಚಿವರಾದ ಆರ್.ಅಶೋಕ (ಪದ್ಮನಾಭ ನಗರ), ಡಾ.ಸಿ.ಎನ್.ಅಶ್ವಥ್ ನಾರಾಯಣ (ಮಲ್ಲೇಶ್ವರಂ), ಮುನಿರತ್ನ ನಾಯ್ಡು (ರಾಜರಾಜೇಶ್ವರಿ ನಗರ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) ನಾಮಪತ್ರ ಸಲ್ಲಿಸಿದರೆ, ಸಚಿವರಾದ ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಎಂ.ಟಿ.ಬಿ.ನಾಗರಾಜ್ (ಹೊಸಕೋಟೆ) ), ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ) ಮತ್ತು ಜೆ.ಸಿ.ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ) ಸಹ ನಾಮಪತ್ರ ಸಲ್ಲಿಸಿದರು.

ಎಂಟಿಬಿ ನಾಗರಾಜ್ ಅವರ ಕಟ್ಟಾ ಎದುರಾಳಿ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ನಾಮಪತ್ರ ಸಲ್ಲಿಸಿದರೆ, ಸತೀಶ್ ರೆಡ್ಡಿ (ಬೊಮ್ಮನಹಳ್ಳಿ), ರಿಜ್ವಾನ್ ಅರ್ಷದ್ (ಶಿವಾಜಿನಗರ), ಎಸ್ ರಘು (ಸಿವಿ ರಾಮನ್ ನಗರ) ದಿನೇಶ್ ಗುಂಡೂರಾವ್ (ಗಾಂಧಿ ನಗರ), ರವಿ ಸುಬ್ರಹ್ಮಣ್ಯ (ಬಸವನಗುಡಿ), ಪುಟ್ಟಣ್ಣ (ರಾಜಾಜಿನಗರ) ), ಸೌಮ್ಯಾ ರೆಡ್ಡಿ (ಜಯನಗರ), ಎಸ್ ಮುನಿರಾಜು (ದಾಸರಹಳ್ಳಿ) ಮತ್ತು ಪದ್ಮನಾಭ ರೆಡ್ಡಿ (ಸರ್ವಜ್ಞ ನಗರ) ಇತರರು ತಮ್ಮ ನಾಮಪತ್ರ ಸಲ್ಲಿಸಿದರು. ನೂರಾರು ಬೆಂಬಲಿಗರೊಂದಿಗೆ ನೇತಾರರು ಬೀದಿಗಿಳಿದಿದ್ದರಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com