ಆರ್ ವಿ ದೇಶಪಾಂಡೆ
ಆರ್ ವಿ ದೇಶಪಾಂಡೆ

ಹಳಿಯಾಳದಲ್ಲಿ ತ್ರಿಕೋನ ಸ್ಪರ್ಧೆ: ರಾಜ್ಯದ ಹಿರಿಯ ಶಾಸಕ ದೇಶಪಾಂಡೆಗೆ ಈ ಬಾರಿ ಕಠಿಣ ಪೈಪೋಟಿ!

ಆರ್‌ವಿ ದೇಶಪಾಂಡೆ ಎಂದೇ ಖ್ಯಾತ ಪಡೆದಿರುವ ರಘುನಾಥ ವಿ ದೇಶಪಾಂಡೆ ಅವರು ಈವರೆಗೆ ಒಂಬತ್ತು ಚುನಾವಣೆಯನ್ನು ಎದುರಿಸಿ, ಎಂಟು ಬಾರಿ ಗೆದ್ದಿದ್ದಾರೆ ಮತ್ತು ಒಂದು ಬಾರಿ ಸೋಲನ್ನು ಅನುಭವಿಸಿದ್ದಾರೆ.

ಹಳಿಯಾಳ (ಉತ್ತರ ಕನ್ನಡ): ಆರ್‌ವಿ ದೇಶಪಾಂಡೆ ಎಂದೇ ಖ್ಯಾತ ಪಡೆದಿರುವ ರಘುನಾಥ ವಿ ದೇಶಪಾಂಡೆ ಅವರು ಈವರೆಗೆ ಒಂಬತ್ತು ಚುನಾವಣೆಯನ್ನು ಎದುರಿಸಿ, ಎಂಟು ಬಾರಿ ಗೆದ್ದಿದ್ದಾರೆ ಮತ್ತು ಒಂದು ಬಾರಿ ಸೋಲನ್ನು ಅನುಭವಿಸಿದ್ದಾರೆ.

ರಾಜ್ಯದ ಅತ್ಯಂತ ಹಿರಿಯ ಶಾಸಕರಾಗಿರುವ ದೇಶಪಾಂಡೆಯವರ ಭದ್ರಕೋಟೆ ಹಳಿಯಾಳದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ತೀವ್ರ ಪೈಪೋಟಿ ಎದುರಾಗಿದೆ.

ಹಳಿಯಾಳ ವಿಧಾನಸಭಾ ಕ್ಷೇತ್ರದಿಂದಲೇ ಒಂಬತ್ತನೇ ಬಾರಿ ಸ್ಪರ್ಧಿಸುವ ಮೂಲಕ ದಾಖಲೆ ನಿರ್ಮಿಸಿರುವ ದೇಶಪಾಂಡೆ ಅವರಿಗೆ 2023ರ ವಿಧಾನಸಭೆ ಚುನಾವಣೆ ಅತ್ಯಂತ ವಿಶೇಷವಾಗಿದೆ. ಗುರ್ಮಿಟ್‌ಕಲ್‌ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಮೀರಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ನಂತರ ಖರ್ಗೆ ಅವರು ಚಿತ್ತಾಪುರದಿಂದ ಸ್ಪರ್ಧಿಸಿದ್ದರು.

ದೇಶಪಾಂಡೆ ಅವರು ಒಂದೇ ಪಕ್ಷ ಮತ್ತು ಒಂದೇ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ಖರ್ಗೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ ಮತ್ತು ಜಿಲ್ಲೆಯ ಅತ್ಯಂತ ಸಕ್ರಿಯ ರಾಜಕಾರಣಿಯಾಗಿದ್ದಾರೆ.

2008ರಲ್ಲಿ ಜೆಡಿಎಸ್ ಅಭ್ಯರ್ಥಿ ಸುನೀಲ್ ಹೆಗಡೆ(ಈಗ ಬಿಜೆಪಿಯಲ್ಲಿದ್ದಾರೆ) ಅವರ ವಿರುದ್ಧ 5,425 ಮತಗಳ ಅಂತರದಿಂದ ಸೋತಾಗ ಮೊದಲ ಬಾರಿ ಸೋಲಿನ ರುಚಿ ಕಂಡಿದ್ದರು. ಆದರೆ ನಂತರ ನಡೆದ ಚುನಾವಣೆಯಲ್ಲಿ ಈ ಟ್ರೆಂಡ್ ಉಲ್ಟಾ ಹೊಡೆದು, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ್ ಹೆಗಡೆ ವಿರುದ್ಧ ದೇಶಪಾಂಡೆ ಅವರು 5,939 ಮತಗಳಿಂದ ಗೆದ್ದಿದ್ದರು. 

ಈ ಬಾರಿ ಹಳಿಯಾಳ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅನುಭವಿ ಇಬ್ಬರು ಪ್ರತಿಸ್ಪರ್ಧಿಗಳಾದ ಸುನೀಲ್ ಹೆಗ್ಡೆ ಮತ್ತು ಶ್ರೀಕಾಂತ್ ಎಲ್ ಘೋಟ್ನೇಕರ್ ಅವರು ದೇಶಪಾಂಡೆ ವಿರುದ್ಧ ಸ್ಪರ್ಧಿಸಿದ್ದಾರೆ. ಹೆಗ್ಡೆ ಅವರು ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾಗಿದ್ದರೂ, ಕಾಂಗ್ರೆಸ್ ನಲ್ಲಿ ಬಂಡಾಯ ಸಾರಿದ ಘೋಟ್ನೇಕರ್ ಅವರು ತನ್ನ ಗುರುವಿನ ವಿರುದ್ಧ ಸೆಡ್ಡು ಹೊಡೆದಿದ್ದಾರೆ.

ಕುತೂಹಲಕಾರಿ ವಿಚಾರ ಎಂದರೆ, ಈ ಪ್ರತಿಸ್ಪರ್ಧಿಗಳಿಬ್ಬರೂ ದೇಶಪಾಂಡೆ ಅವರ ಒಂದು ಕಾಲದ ಶಿಷ್ಯರು. ಹೆಗ್ಡೆ ಬಹಳ ಹಿಂದೆಯೇ ಕಾಂಗ್ರೆಸ್ ತೊರೆದಿದ್ದಾರೆ. ಆದರೆ ಘೋಟ್ನೇಕರ್ ಅವರು ದೇಶಪಾಂಡೆ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ದೀರ್ಘಕಾಲದ ಮಿತ್ರ. ಘೋಟ್ನೇಕರ್ ಅವರು ಕ್ಷೇತ್ರದಲ್ಲಿ ಸುಮಾರು 50,000 ಮತದಾರರನ್ನು ಒಳಗೊಂಡಿರುವ ಪ್ರಬಲ ಮರಾಠಿ ಸಮುದಾಯಕ್ಕೆ ಸೇರಿದ್ದು, ಮರಾಠಾ ಕಾರ್ಡ್ ಅನ್ನು ಮತ್ತು ದೇಶಪಾಂಡೆ ಅವರ ವೈಫಲ್ಯಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

Related Stories

No stories found.

Advertisement

X
Kannada Prabha
www.kannadaprabha.com