ಬಿಜೆಪಿಗರ ಬಾಯಲ್ಲಿ 'ರಾಮನಾಮ' ಜಪ, ಹಾಕುವುದು 40% 'ಪಂಗನಾಮ'- ಕಾಂಗ್ರೆಸ್ ಟೀಕೆ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭ್ರಷ್ಚಾಚಾರ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪ, ವಾಗ್ದಾಳಿಯಲ್ಲಿ ತೊಡಗಿವೆ. ಬಾಯಲ್ಲಿ ರಾಮನಮ ಜಪ ಮಾಡುವ ಬಿಜೆಪಿ ನಾಯಕರು 40% ಕಮಿಷನ್ ಪಡೆದು ಜನರಿಗೆ ವಂಚಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭ್ರಷ್ಚಾಚಾರ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪ, ವಾಗ್ದಾಳಿಯಲ್ಲಿ ತೊಡಗಿವೆ. ಬಾಯಲ್ಲಿ ರಾಮನಮ ಜಪ ಮಾಡುವ ಬಿಜೆಪಿ ನಾಯಕರು 40% ಕಮಿಷನ್ ಪಡೆದು ಜನರಿಗೆ ವಂಚಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ, ಧರ್ಮಗಳ ನಡುವೆ ಬೆಂಕಿ ಹಚ್ಚಿ ಚುನಾವಣಾ ಲಾಭ ಪಡೆಯುವ ಬಿಜೆಪಿಗೆ, 40% ಕಮಿಷನ್ ಪಡೆಯುವುದು, ಜನರಿಗೆ ಪಂಗನಾಮ ಹಾಕುವುದು ಪ್ರಮುಖ ಗುರಿಯಾಗಿದೆ ಎಂದು  ಟೀಕಾ ಪ್ರಹಾರ ನಡೆಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಗೋರಕ್ಷಣೆ ಜಪ ಮಾಡುವ ಬಿಜೆಪಿ ಅವಧಿಯಲ್ಲಿಯೇ ದೇಶದಲ್ಲಿ  ಗೋಮಾಂಸ ರಫ್ತು ಹೆಚ್ಚಾಗಿದೆ.  ಗೋಮಾಂಸ ಕಾರ್ಖಾನೆಗಳು ಬಹುತೇಕ ಬಿಜೆಪಿ ನಾಯಕರ ಒಡೆತನದಲ್ಲೇ ಇವೆ. ಇದು ಬಿಜೆಪಿಗರ ಗೋರಕ್ಷಣೆಯ ಬೂಟಾಟಿಕೆ ಎಂದು ಕಾಂಗ್ರೆಸ್ ಕಿಡಿಕಾರಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com