ಕ್ಷೇತ್ರದ ಜನರಿಗೆ ಪ್ರೀತಿ, ವಾತ್ಸಲ್ಯ ಬೇಕಾಗಿದೆ, ಹಾಗೇ ಕಠಿಣ ಆಡಳಿತವೂ ಬೇಕು: ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ ರಾವ್ (ಸಂದರ್ಶನ)

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಖಾಕಿ ಧರಿಸಿ ಖಡಕ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಈಗ ಖಾದಿ ಧರಿಸಿ ರಾಜಕಾರಣಿಯಾಗಿ ಜನರಿಗೆ ಕೈಮುಗಿದು ನಿಲ್ಲುತ್ತಿದ್ದಾರೆ.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಖಾಕಿ ಧರಿಸಿ ಖಡಕ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಈಗ ಖಾದಿ ಧರಿಸಿ ರಾಜಕಾರಣಿಯಾಗಿ ಜನರಿಗೆ ಕೈಮುಗಿದು ನಿಲ್ಲುತ್ತಿದ್ದಾರೆ.

ತಮ್ಮ ಕ್ಷೇತ್ರ ಚಾಮರಾಜಪೇಟೆಯ ಕೆಲವು ಭಾಗಗಳಲ್ಲಿ  ಜನರು ಸುಮಾರು ಎರಡು ದಶಕಗಳಿಂದ ದಯನೀಯ ಪರಿಸ್ಥಿತಿಯಲ್ಲಿ ಹೇಗೆ ಬದುಕುತ್ತಿದ್ದಾರೆ ಎಂದು ನನಗೆ ವಿಸ್ಮಯವಾಗಿದೆ ಎಂದು ಹೇಳಿದ್ದಾರೆ.  ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ನ  ಜೊತೆಗಿನ ಸಂವಾದದಲ್ಲಿ,  ರಾವ್ ಹಲವು ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

ಖಾಕಿ ಸಮವಸ್ತ್ರದಿಂದ ಹಿಡಿದು ಈಗ ರಾಜಕೀಯ ಅಭ್ಯರ್ಥಿಯಾಗಿದ್ದೀರಿ, ನಿಮ್ಮ ಅನಿಸಿಕೆ ಏನು?

ಇದು ಇಲ್ಲಿಯವರೆಗೆ ತುಂಬಾ ಚೆನ್ನಾಗಿದೆ. ಎರಡು ದಶಕಗಳಿಂದ ರಾಜಕೀಯದಲ್ಲಿರುವ (ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್) ವಿರುದ್ಧ ನಾನು ಕಣಕ್ಕಿಳಿದಿದ್ದೇನೆ. ರಾಜಕೀಯದ ಮಟ್ಟಿಗೆ ನಾನು ಅನನುಭವಿ, ಆದರೆ ಸಾರ್ವಜನಿಕ ಸೇವಕನಾಗಿ ಹೊಸಬನಲ್ಲ. ಮೂರೂವರೆ ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದೇನೆ. ಹಾಗಾಗಿ ಇದೊಂದು ವಿಭಿನ್ನ ರೀತಿಯ ಸ್ಪರ್ಧೆ. UPSC ಯಲ್ಲಿ ಆಯ್ಕೆಯ ವಿಧಾನವು ಚುನಾವಣೆಗಿಂತ ಭಿನ್ನವಾಗಿದೆ, ಆದರೆ ಎರಡೂ ಸಾಂವಿಧಾನಿಕ ಸಂಸ್ಥೆಗಳನ್ನು ಹೊಂದಿವೆ.

ಚಾಮರಾಜಪೇಟೆಯನ್ನೆ ಆಯ್ಕೆ ಮಾಡಿಕೊಂಡಿದ್ದು ಏಕೆ?

ಕ್ಷೇತ್ರವನ್ನು ಯಾರೂ ತೆಗೆದುಕೊಳ್ಳಲಿಲ್ಲ. ಚಾಮರಾಜಪೇಟೆ ಕ್ಷೇತ್ರ ತೆಗೆದುಕೊಳ್ಳುತ್ತೀರಾ ಎಂದು ಅವರು ನನ್ನನ್ನು ಕೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿನ ಪರಿಶೀಲನೆ ನಡೆಸಿದಾಗ, ಶಾಂತಿನಗರ, ಪುಲಕೇಶಿನಗರ, ಸರ್ವಜ್ಞನಗರ, ಗಾಂಧಿನಗರ, ಚಾಮರಾಜಪೇಟೆಯಂತಹ ಕೆಲವು (ವಿಧಾನಸಭಾ) ಸ್ಥಾನಗಳಲ್ಲಿ ಬಿಜೆಪಿ ಏಕೆ ಇಲ್ಲ, ಅಲ್ಲಿ ಬಿಜೆಪಿ ಏಕೆ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ಈ ಕ್ಷೇತ್ರಗಳಲ್ಲಿ 30 ವರ್ಷಗಳಿಂದ ಬಿಜೆಪಿಗೆ ಎಂಟ್ರಿ ಕೊಡಲು ಸಾಧ್ಯವಾಗಿಲ್ಲ. ನಮ್ಮಲ್ಲಿ ಸಂಘಟನೆ, ಸಂಘ ಅಥವಾ ಮೋರ್ಚಾ ಇಲ್ಲವೇ? ನಮ್ಮಲ್ಲಿ ಏನು ಕೊರತೆಯಿದೆ? ನಮಗೇಕೆ ಅಭ್ಯರ್ಥಿ ಇಲ್ಲ? ಹಾಗಾಗಿ ಫಲಿತಾಂಶ ಏನೇ ಇರಲಿ ಅಲ್ಲಿಂದಲೇ ಸ್ಪರ್ಧಿಸುವಂತೆ ಹೇಳಿದ್ದರು. ಕೊನೆ ಗಳಿಗೆಯಲ್ಲಿ ನನಗೆ ಕ್ಷೇತ್ರ ನೀಡಲಾಯಿತು. ಅದೆಲ್ಲದರ ನಡುವೆಯೂ ನನ್ನ ಕೈಲಾದಷ್ಟು ಶಕ್ತಿ ತುಂಬಿ ಕ್ಷೇತ್ರದ ಉದ್ದಗಲಕ್ಕೂ ಪ್ರಚಾರ ನಡೆಸುತ್ತಿದ್ದೇನೆ.

ಚಾಮರಾಜಪೇಟೆ ಕ್ಷೇತ್ರ ಏಕೆ ದೊಡ್ಡ ಸವಾಲಾಗಿದೆ?

ಚಾಮರಾಜಪೇಟೆಯು 125 ವರ್ಷಗಳಷ್ಟು ಹಳೆಯದಾಗಿದೆ. ಆಜಾದ್ ನಗರ, ರಾಯಪುರಂ, ಚಲವಾದಿ ಪಾಳ್ಯ, ಜೆಜೆ ನಗರ ಮತ್ತು ಪಾದರಾಯನಪುರದಂತಹ ವಾರ್ಡ್‌ಗಳಿಂದ ಆವೃತವಾಗಿದೆ. ದುರದೃಷ್ಟವಶಾತ್ ಅವರು ಸಮಾಜದ ಅತ್ಯಂತ ಕೆಳಮಟ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲಿ ವಾಸಿಸುವ ಜನರ ಸ್ಥಿತಿಯನ್ನು ಸುಧಾರಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಅವರಿಗೆ ಅಭಿವೃದ್ಧಿ ನೋಡಿ ಒಗ್ಗಿಕೊಂಡಂತೆ ಕಾಣುತ್ತಿಲ್ಲ.

2.30 ಲಕ್ಷ ಮತದಾರರಲ್ಲಿ 90,000 ಮುಸ್ಲಿಮರು. ಪರಿಶಿಷ್ಟ ಜಾತಿಯಿಂದ ಸುಮಾರು 80 ಸಾವಿರ ಸದಸ್ಯರಿದ್ದಾರೆ. ನಂತರ ಕೆಲವು ಭಾಗ ಮಾರ್ವಾಡಿ ಜೈನರು, ಕೆಲವು ಬ್ರಾಹ್ಮಣರು ಮತ್ತು ನಂತರ ಇತರ ಸಮುದಾಯಗಳಿವೆ. ಇದು  ಒಂದು ಸಮುದಾಯಕ್ಕೆ ಸೇರಿದ ದೊಡ್ಡ ವರ್ಗ ವಾಸಿಸುವ ಬಸವನಗುಡಿ ಅಥವಾ ಜಯನಗರ ಅಲ್ಲ. ಜನರು ಅಪರಾಧಗಳನ್ನು ಮಾಡಿದ ನಂತರ ಇಲ್ಲಿ ಬಂದು ಆಶ್ರಯ ಪಡೆಯುತ್ತಾರೆ.  ಅಪರಾಧಕ್ಕೆ ದೊಡ್ಡ ಕಾರಣ ಬಡತನ. ಈ ಜನರನ್ನು ಬಡವರನ್ನಾಗಿಸಲು ವ್ಯವಸ್ಥಿತ ಮಾರ್ಗವಿದೆ. ಅದರಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ.

ಹಾಗಾದರೆ ಜನರು ತಮ್ಮ ಚುನಾಯಿತ ಪ್ರತಿನಿಧಿಯ ಮೇಲೆ ಇನ್ನೂ ಏಕೆ ಆಕ್ರೋಶ ತೋರಿಸುತ್ತಿಲ್ಲ?

ನಾನು ಅಲ್ಲಿಗೆ ಹೋದಾಗಲೆಲ್ಲಾ ಜನರು ಕೇಳುವುದು ಹಣವೇ. ಈ ಪ್ರದೇಶವು ರಾಜಾಜಿನಗರ, ಆರ್‌ಆರ್ ನಗರ, ಚಿಕ್ಕಪೇಟೆ, ಬಸವನಗುಡಿ ಮತ್ತು ಇತರ ಸುಸಜ್ಜಿತ ಸ್ಥಳಗಳಿಂದ ಸುತ್ತುವರಿದಿದೆ. ಆದರೆ ಈ ಸ್ಥಳವನ್ನು ಏಕೆ ಬಿಡಲಾಗಿದೆ? ರಾಯಪುರಂ ವಾರ್ಡ್‌ನಲ್ಲಿ 10,000 ಪೌರಕಾರ್ಮಿಕರು ಉಳಿದುಕೊಂಡಿದ್ದಾರೆ. ಅವರ ಕಟ್ಟಡಗಳು ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿವೆ. ಬದಲಾವಣೆ ತರಲು ಕೊಳಚೆ ನಿರ್ಮೂಲನಾ ಮಂಡಳಿಯನ್ನು ಏಕೆ ಬಳಸಿಕೊಂಡಿಲ್ಲ? ಎಂಬುದು ನನಗೆ ಆಶ್ಚರ್ಯ ತಂದಿದೆ.

ನೀವು ಆಯ್ಕೆಯಾದರೆ ಚಾಮರಾಜಪೇಟೆಗೆ ಏನು ಮಾಡುತ್ತೀರಿ?

ಕೆಲ ಸ್ಥಳಗಳಲ್ಲಿ ಉತ್ತಮವಾದ ಸೇವಿಂಗ್ ಸಲೂನ್ ತೆರೆಸಿ, ಅಲ್ಲಿನ ಜನರಿಗೆ ಹೇರ್ ಕಟ್ ಮತ್ತು ಶೇವಿಂಗ್ ಮಾಡಿಸುವುದು ನನ್ನ ಮೊದಲ ಆದ್ಯತೆ. ಇದರಿಂದ ಜನರ ವಿಶ್ವಾಸದ ಮಟ್ಟವು ಹೆಚ್ಚಾಗುತ್ತದೆ. ಆಗ ಆ ಸ್ಥಳಕ್ಕೆ ಉತ್ತಮ ವೈದ್ಯಕೀಯ ಸೌಲಭ್ಯಗಳು ಮತ್ತು ಸರ್ಕಾರಿ ಶಾಲೆಗಳ ಅಗತ್ಯವಿದೆ. ಈ ಸ್ಥಳಕ್ಕೆ ಪ್ರೀತಿ, ವಾತ್ಸಲ್ಯ ಮತ್ತು ಕಠಿಣ ಆಡಳಿತದ ಅಗತ್ಯವಿದೆ. ಇಲ್ಲಿನ ಜನರು ಮಹತ್ವಾಕಾಂಕ್ಷಿಗಳು ಮತ್ತು ಬದಲಾವಣೆಯನ್ನು ಬಯಸುತ್ತಾರೆ.

ಆಮ್ ಆದ್ಮಿ ಪಕ್ಷ  ಬಿಟ್ಟು ಬಿಜೆಪಿ ಸೇರಿದ್ದು ಏಕೆ?

ಎಎಪಿ ನಾಯಕರು ಉತ್ತಮ ಆಲೋಚನೆಗಳೊಂದಿಗೆ ಪ್ರಾರಂಭಿಸಿದರು, ಆದರೆ ಅವರಿಗೆ ಅದನ್ನು ಮಾಡಲು ಶಕ್ತಿಯೂ ಇಲ್ಲ ಅಥವಾ ಒಲವು ಇಲ್ಲ. ಅವರ ಅಜೆಂಡಾ ತುಂಬಾ ವಿಭಿನ್ನವಾಗಿದೆ, ಅದನ್ನು ನೋಡಿ ನನಗೆ ಆಘಾತವಾಯಿತು. ಅದಕ್ಕೇ ನಾನು ಪಕ್ಷ ಬಿಟ್ಟೆ.

ನಿಮ್ಮ ಬಗ್ಗೆ ಮತದಾರರ ಪ್ರತಿಕ್ರಿಯೆ ಹೇಗಿದೆ?

ನನಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿಎಎ ಗಲಭೆ ಸಂದರ್ಭದಲ್ಲಿ ಮತ್ತು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ನಾನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದರಿಂದ ಜನರಿಗೆ ನನ್ನ ಪರಿಚಯವಿದೆ. ಡಿಕೆ ಶಿವಕುಮಾರ್ ಅವರ ಬಂಧನ ಮತ್ತು ನಂತರ 370 ನೇ ವಿಧಿ ವಿವಾದದ ವೇಳೆ ನನಗೆ ಜನರೊಂದಿಗೆ ಸಂವಹನ ನಡೆಸಲು ಸಾಕಷ್ಟು ಅವಕಾಶಗಳನ್ನು ನೀಡಿತು. ಜನರು ಆರಂಭದಲ್ಲಿ ನನ್ನನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದರು. ಅವರಿಗೆ, ರಾಬಿನ್‌ಹುಡ್ ಅವರ ನಾಯಕ. ನಾನಲ್ಲ. ನೀವು ಅವರನ್ನು ಭೇಟಿಯಾದಾಗ, ತಿರುಗಾಡಿದಾಗ, ಅವರು ನಿಮ್ಮನ್ನು ತಿಳಿದುಕೊಳ್ಳುತ್ತಾರೆ. ಅಲ್ಲಿ ದೊಡ್ಡ ವಿರೋಧಿ ಆಡಳಿತವಿದೆ. ಎಷ್ಟೋ ಹಗರಣಗಳು ನಡೆದಿವೆ. ಜಮೀರ್‌ಗೆ ಪಾದರಾಯನಪುರ ಮತ್ತು ಜೆಜೆ ನಗರದಿಂದ ಮತಗಳು ಬಂದಿವೆ. ಹಿಂದೂ ಪ್ರಾಬಲ್ಯವಿರುವ ಚಾಮರಾಜಪೇಟೆ ಮತ್ತು ಆಜಾದ್ ನಗರದಿಂದ ಬಿಜೆಪಿ ಮತಗಳನ್ನು ಪಡೆಯುತ್ತದೆ.

ಈ ಕ್ಷೇತ್ರ ಗೆಲ್ಲಲು ಬಿಜೆಪಿಗೆ ಮಾಸ್ಟರ್ ಪ್ಲಾನ್ ಇದೆಯೇ?

ಅಲ್ಲಿ ಐಪಿಎಸ್ ಅಧಿಕಾರಿಯನ್ನು ಅಭ್ಯರ್ಥಿಯನ್ನಾಗಿ ಮಾಡುವುದು ಮಾಸ್ಟರ್ ಪ್ಲಾನ್ ನ ಮೊದಲ ಹೆಜ್ಜೆ.

ಆದರೆ ಬದಲಾವಣೆ ತರಲಾಗುವುದು ಎಂಬ ವಿಶ್ವಾಸವನ್ನು ಜನರಿಗೆ ನೀಡಲು ನಿಮಗೆ ಸಾಧ್ಯವೇ?

ಹೌದು. ವಾಸ್ತವವಾಗಿ, ಅವರಿಗೆ ನನ್ನ ಮೇಲೆ ವಿಶ್ವಾಸವಿದೆ. ಜನರು ಸಹ ಇದರಿಂದ ಹೊರಬರಲು ಮತ್ತು ಇತರರಂತೆಯೇ ಇರಲು ಬಯಸುತ್ತಾರೆ. ನನ್ನನ್ನು ಬಲ್ಲವರಿಗೆ ನನ್ನ ಮೇಲೆ ವಿಶ್ವಾಸವಿದೆ.

ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆ ನಿಮ್ಮ ಒಟ್ಟಾರೆ ಮೌಲ್ಯಮಾಪನ ಏನು? ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ?

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರತಿಯೊಬ್ಬರೂ ಆಡಳಿತದಲ್ಲಿ ಸ್ಥಿರತೆ ಬಯಸುತ್ತಾರೆ. ಅಲ್ಲದೆ, ಈ ಬಾರಿ 72 ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ, ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂಬುದಕ್ಕೆ ಇದು ಸೂಚನೆ. 72 ಮುಖಗಳಲ್ಲಿ ನಾನೂ ಒಬ್ಬ.

ನೀವು ಪೊಲೀಸ್ ಅಧಿಕಾರಿಯಾದಾಗ, ನೀವು ತರಬೇತಿ ಪಡೆದಿದ್ದೀರಿ. ನೀವು ರಾಜಕೀಯಕ್ಕೆ ಸೇರಿದಾಗ ಅಂತಹ ತರಬೇತಿ ಪಡೆದಿದ್ದೀರಾ?

ಯಾವ ರಾಜಕೀಯ ಪಕ್ಷವೂ ತರಬೇತಿ ನೀಡುವುದಿಲ್ಲ. ಅಂತಹ ಸುಂದರ ವ್ಯವಸ್ಥೆ ನಮ್ಮಲ್ಲಿದ್ದರೆ ಈಗಿನ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆರ್‌ಎಸ್‌ಎಸ್‌ನಿಂದ ಬಂದವರಿಗೆ ಬೇರೆ ಬೇರೆ ರೀತಿಯ ತರಬೇತಿ ನೀಡಲಾಗುತ್ತದೆ. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ, ಎಲ್ಲಾ ಶಾಸಕರಿಗೆ ತರಬೇತಿ ನೀಡುವಂತೆ ಒತ್ತಾಯಿಸಲಾಯಿತು ಮತ್ತು ಯಾರೂ ಸ್ಥಳದಿಂದ ಹೊರಹೋಗದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಯಿತು.

ನೀವು ಈಗ ಅಪರಾಧವನ್ನು ಹೇಗೆ ನೋಡುತ್ತೀರಿ ಎಂಬುದರಲ್ಲಿ ವ್ಯತ್ಯಾಸವಿದೆಯೇ?

ನಾನು ಈಗ ಅಪರಾಧವನ್ನು ಬೇರೆ ಮಟ್ಟದಲ್ಲಿ ನೋಡುತ್ತೇನೆ. ಹಿಂದೆ, ನಾನು ಅಪರಾಧವನ್ನು ಫೇಸ್ ವಾಲ್ಯು ನಲ್ಲಿ ನೋಡುತ್ತಿದ್ದೆ. ಈಗ ನಾನು ಅದರ ಹಿಂದಿನ ಕಾರಣವನ್ನು ನೋಡುತ್ತೇನೆ. ಅಪರಾಧ ನಡೆದಿರುವುದು ಏಕೆ? ಹಣ ಮತ್ತು ಶಿಕ್ಷಣವಿಲ್ಲದ ಜನರು ತಮ್ಮ ಹಕ್ಕುಗಳಿಂದ ವಂಚಿತರಾಗಿರುವುದರಿಂದ ಅಪರಾಧಗಳಿಗೆ ಸಿಲುಕುತ್ತಿದ್ದಾರೆ. ನಾವು ಕೆಟ್ಟ ಆಡಳಿತ ವ್ಯವಸ್ಥೆಯಿಂದ ಅಪರಾಧಿಗಳನ್ನು ಮಾಡುತ್ತೇವೆ.

ಪೊಲೀಸ್ ವೃತ್ತಿ ಬಿಟ್ಟು ರಾಜಕೀಯ ಸೇರಲು ಕಾರಣವೇನು?

ನನ್ನ ಸೇವೆಯ ಅವಧಿಯಲ್ಲಿ ನಾನು ಉತ್ತಮ ಅನುಭವವನ್ನು ಹೊಂದಿದ್ದೇನೆ. ನನಗೆ ಇನ್ನೂ ಮೂರು ವರ್ಷಗಳ ಸೇವೆ ಇತ್ತು ಮತ್ತು ಮುಂದಿನ ವರ್ಷ ನಿವೃತ್ತಿ ಹೊಂದುತ್ತಿದ್ದೆ. ನಾನು ನನ್ನ ಸೇವೆಯನ್ನು ಮುಗಿಸಿದ್ದು, ಪಾರ್ಟ್ ಟೈಮ್ ಕೆಲಸ ಮಾಡುವ ಬದಲು ಇದನ್ನು ಮಾಡೋಣ ಎಂದು ನಾನು ಭಾವಿಸಿದೆ.

ನಿಮ್ಮ ಆಲೋಚನೆ ಮತ್ತು ಸಿದ್ಧಾಂತ ಏನು?

ನನಗೆ ದೇಶವೇ ಮೊದಲು ಮತ್ತು ಸಂವಿಧಾನವೇ ಪ್ರಧಾನ. ನನಗೆ ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡುವುದು ಮುಖ್ಯ. ನನ್ನ ಸಿದ್ಧಾಂತ ಬಿಜೆಪಿ ಜೊತೆಗಿದೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ.

ಸಾಕಷ್ಟು ಮಂದಿ ಕೇಸುಗಳನ್ನು ಹೊಂದಿದ್ದು, ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನೀವು ಸ್ಪರ್ಧಿಸುವುದನ್ನು ನಿರ್ಬಂಧಿಸುವವರೆಗೆ ಅಥವಾ ಶಿಕ್ಷೆಗೆ ಗುರಿಯಾಗುವವರೆಗೆ ನೀವು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಭಾರತದ ಚುನಾವಣಾ ಆಯೋಗ ಹೇಳುತ್ತದೆ. ಅವರ ವಿರುದ್ಧ ಅನೇಕ ಪ್ರಕರಣಗಳಿವೆ, ಆದರೆ ಶಿಕ್ಷೆಯಾಗದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಪಕ್ಷವೂ ಸಂವಿಧಾನವನ್ನು ಅನುಸರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com