ಕೋಳಿ ಕೇಳಿ ಮಸಾಲೆ ಅರೆಯೋಲ್ಲ; ಅಧಿಕಾರಕ್ಕಾಗಿ ಅಂದು ನಮ್ಮ ಸರ್ಕಾರ ಬೀಳಿಸಿಲ್ವಾ? ಆಯನೂರು ಭೇಟಿ ಬಳಿಕ ಡಿಸಿಎಂ ಹೇಳಿಕೆ

ಸಿಟಿ ರವಿ ಹಿರಿಯರಿದ್ದಾರೆ. ಅವರು ಥ್ರೆಟ್ ಕೊಡುತ್ತಿದ್ದಾರೆ. ಕೈ ಕತ್ತರಿಸ್ತೇವೆ ಎಂದು, ನೀವು ಮಾಡಿದಾಗ ಏನಾಗಿತ್ತು, ಜೆಡಿಎಸ್‌, ಕಾಂಗ್ರೆಸ್ ಶಾಸಕರ ಕರ್ಕೊಂಡ್ ಮಜಾ ಮಾಡಿದ್ರಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗಲ್ಲ, ಕಾಂಗ್ರೆಸ್ ಗೆ ಬರುವವರನ್ನು ತಡೆಯೋಕೆ ಆಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತದ ಬಗ್ಗೆ ಡಿಸಿಎ ಪರೋಕ್ಷ ಸುಳಿವು ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಷನ್‌ ಸದ್ದು ಜೋರಾಗಿದ್ದು, ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯ ಅಸಮಾಧಾನಿತರನ್ನ ಸೆಳೆಯುವ ತಂತ್ರಗಾರಿಕೆಗೆ ಮುಂದಾಗಿದೆ. ಇದೀಗ ಜೆಡಿಎಸ್ ನಾಯಕ ಆಯನೂರು ಮಂಜುನಾಥ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್ ನಾಯಕ ಆಯನೂರು ಮಂಜುನಾಥ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರವರ ಬದುಕು, ಅವರವರ ಭವಿಷ್ಯ ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದ ಅವರು, ಸಿಟಿ ರವಿ ಹಿರಿಯರಿದ್ದಾರೆ. ಅವರು ಥ್ರೆಟ್ ಕೊಡುತ್ತಿದ್ದಾರೆ. ಕೈ ಕತ್ತರಿಸ್ತೇವೆ ಎಂದು, ನೀವು ಮಾಡಿದಾಗ ಏನಾಗಿತ್ತು, ಜೆಡಿಎಸ್‌, ಕಾಂಗ್ರೆಸ್ ಶಾಸಕರ ಕರ್ಕೊಂಡ್ ಮಜಾ ಮಾಡಿದ್ರಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಅವರ ರಾಜಕಾರಣ ಅವರು ಮಾಡಲಿ. ನಿಮಗೆ ಬರೋ ಥ್ರೆಟ್ ತರ ಅವರಿಗೂ ಬರುತ್ತೆ. ನಾವು ಯಾರನ್ನೂ ಕರೀತಿಲ್ಲ, ನಮಗಿರೋ ನಂಬರ್ ಗೆ ಯಾರೂ ಅವಶ್ಯಕತೆ ಇಲ್ಲ. ದೇಶದ ಉದ್ದಗಲಕ್ಕೂ ಭಾರತ ಉಳಿಸಲು ಒಗ್ಗೂಡಿದ್ದಾರೆ. ಜನ ಬರೋರನ್ನ ನಾನು ತಡೆಯಲು ಆಗಲ್ಲ, ಕೋಳಿ ಕೇಳಿ ಮಸಾಲೆ ಅರೆಯೋಕಾಗುತ್ತಾ ಎಂದು ಪ್ರಶ್ನಿಸಿದರು.

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಬಗ್ಗೆ ಭಾರಿ ಚರ್ಚೆಗಳಾಗುತ್ತಿದ್ದು, ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರ ರಾಜಕೀಯ ನಾಯಕರುಗಳ ಪರಸ್ಪರ ವಾಕ್ಸಮರಕ್ಕೂ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com