ಧೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಪ್ರಹ್ಲಾದ್ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿ ಇದೆಯಾ?

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕನಸು ಬಿದ್ದಿತ್ತಾ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕನಸು ಬಿದ್ದಿತ್ತಾ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಶಶಿ ತರೂರ್ ಸಭೆಯಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಶೆಟ್ಟರ್ ಟಾಂಗ್ ಕೊಟ್ಟ ಅವರು ಕೇಂದ್ರ ಸಚಿವರಿಗೆ ಅವರಿಗೇನು ಅಂತರಾತ್ಮ ಇದೆಯಾ? ಧೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿಯಿದೆಯಾ? ಸುಮ್ಮನೆ ಆರೋಪ ಮಾಡೋದು, ಪ್ರಚಾರ ತೆಗೆದುಕೊಳ್ಳುವುದು ಬಿಟ್ಟರೆ ಇದರ ಹಿಂದೆ ಏನು ಇಲ್ಲ. ಇದು 100% ಆಧಾರ ರಹಿತ ಆರೋಪ ಆಗಿದೆ', ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಆ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿವಿಮಾತು ಹೇಳಿದ್ದಾರೆ.

ಒಂದು ಸಾವಿರ ಕೋಟಿ ಕಲೆಕ್ಟ್ ಮಾಡಿ ತೆಲಂಗಾಣಕ್ಕೆ ರಾಜ್ಯ ಕಾಂಗ್ರೆಸ್ ನೀಡುತ್ತೆ ಅಂತ ಜೋಶಿ ಆರೋಪ ಮಾಡಿದ್ದರು. ಈಗ ಅದಕ್ಕೆ ಅವರು ಏನು ಉತ್ತರ ನೀಡುತ್ತಾರೆ. ಅವರು ಸುಮ್ಮನೆ ಆರೋಪ ಮಾಡುತ್ತಾರೆ. ಬೆಂಗಳೂರಿನಲ್ಲಿ ಸಿಕ್ಕ ಹಣ ಕಾಂಗ್ರೆಸ್ ಪಾರ್ಟಿಗೆ ಸೇರಿದ್ದು ಅಂತ ಜೋಶಿ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಬಳಿ‌ ಐಟಿ, ಇಡಿ, ಸಿಬಿಐ ಇದೆ. ಅದನ್ನು ತನಿಖೆ ಮಾಡಿ ಅದು ಯಾರ ಹಣ, ಅದು ಯಾರ ಮನೆ ಎನ್ನುವ ಮಾಹಿತಿ ಹೊರಗೆ ತರಲಿ. ದಾಳಿ ಆದಾಗ ಮಾತ್ರ ದೊಡ್ಡಕ್ಕೆ ಸುದ್ದಿಯಾಗುತ್ತದೆ. ನಂತರ ಏನಾಯ್ತು ಎನ್ನುವುದರ ಬಗ್ಗೆ ಸುದ್ದಿಯೇ ಇರುವುದಿಲ್ಲ ಎಂದು ಟಾಂಗ್​ ಕೊಟ್ಟರು.

ಕಾಂಗ್ರೆಸ್​ನಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಇದು ಸಾರ್ವಜನಿಕವಾಗಿ‌ ಚರ್ಚೆಯ ಮಾಡುವ ವಿಚಾರ ಅಲ್ಲ. ಆದರೆ, ಶಾಸಕರಿಗೆ ವೈಯಕ್ತಿಕ ಸಮಸ್ಯೆ ಆದಾಗ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಆ ರೀತಿ ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. ಅದನ್ನು ಸಿಎಂ ಕರೆದು ಚರ್ಚೆ ಮಾಡಿ ಸರಿ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತಿದೆ. ಆರು ತಿಂಗಳಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್  ನಾಯಕರು ಬಿಜೆಪಿಗೆ 40% ಸರ್ಕಾರ ಎನ್ನುತ್ತಿದ್ದರು. ಆದರೆ ಕಾಂಗ್ರೆಸ್ ಪರಿಸ್ಥಿತಿ ಆರು ತಿಂಗಳಲ್ಲಿ ಭೀಕರವಾಗಿದೆ. ನೆಲ ಕಚ್ಚುವ ಪರಿಸ್ಥಿತಿ ತಲುಪಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದರು.

ಕಾಂಗ್ರೆಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಆರಂಭವಾಗಿದೆ. ಆಳಂದ ಶಾಸಕ ಬಿಆರ್ ಪಾಟಿಲ್, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಸತೀಶ್ ಗುಂಪುಗಾರಿಕೆ ಈ ಎಲ್ಲಾ ಸಂಗತಿಗಳ‌ನ್ನು ನೋಡಿದ್ರೆ ಎಷ್ಟು ಪ್ರಮಾಣದಲ್ಲಿ ಭಿನ್ನಾಭಿಪ್ರಾಯ ಇದೆ ಅಂತಾ ಗೊತ್ತಾಗುತ್ತದೆ ಎಂದ ಅವರು ರಾಷ್ಟ್ರೀಯ ನಾಯಕತ್ವದ ಬೆದರಿಕೆ ಇಲ್ಲ. ಸರಿಮಾಡುವ, ಸಂಬಾಳಿಸುವ ನೇತೃತ್ವ ಇಲ್ಲ ಎನ್ನುವುದು ತೋರಿಸುತ್ತದೆ. ಈಗ ಜಗಳ ಅತೀರೆಕಕ್ಕೆ ಹೋಗಿದೆ. ಇದು ಆಡಳಿತದ ಮೇಲೆ ಪರಿಣಾಮ ತೀವ್ರವಾಗಿ ಬೀರಿದೆ ಎಂದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯ ಮಂತ್ರಿ ಗುಂಪುಗಳ ಮಧ್ಯೆ ಹೊಂದಾಣಿಕೆ ಇಲ್ಲ. ಆದ್ದರಿಂದ ಪರಿಸ್ಥಿತಿ ಅಯೋಮಯವಾಗಿದೆ. ಜನ ಬರೀ ಇವರ ಜಗಳ ನೋಡುವುದೇ ಆಗಿದೆ. ಯಾರು ಮತ್ತೆ ಮುಖ್ಯಮಂತ್ರಿ ಆಗಬೇಕು, ಸಿದ್ದರಾಮಯ್ಯವರನ್ನು ಯಾವಾಗ ಕೆಳಗೆ ಇಳಿಸಬೇಕು ಎಂಬ ಚರ್ಚೆ ಜೋರಾಗಿದೆ. ಹಿರಿಯ ನಾಯಕ ಶಶಿ ತರೂರ್ ಸಭೆಯಲ್ಲಿಯೂ ಸಹ ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಅವರು ಅದಕ್ಕೆ ಉತ್ತರ ನೀಡಿಲ್ಲ ಎಂದರು.

ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಲು ಅನುಮತಿ ಕೊಡುತ್ತಿಲ್ಲ. ಮೇಲಿನಿಂದ ಹೇಳಿದ್ದಾರೆ, ಅದಕ್ಕೆ ಪೆಂಡಿಂಗ್ ಅಂತ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಮೇಲಿನಿಂದ ಅಂದರೆ ಯಾರು? ಯಾಕೆ ದುಡ್ಡು ಕೊಡುತ್ತಿಲ್ಲ ಎಂಬ ಬಗ್ಗೆ ಪರಿಶೀಲನೆ ಮಾಡಿ ಗುತ್ತಿಗೆದಾರರಿಗೆ ಹಣ ನೀಡಲಿ ಎಂದರು. ಇನ್ನೂ ಡಿಕೆ ಶಿವಕುಮಾರ್ ಮುನ್ನಡೆ ಅಥವಾ ಹಿನ್ನಡೆ ಅದು ಅವರಿಗೆ ಬಿಟ್ಟ ವಿಚಾರ. ಇದರ ಅರ್ಥ ಕೋರ್ಟ್ ಒಪ್ಪಿದೆ ಅಂತಲ್ಲಾ. ಆದರೆ ತನಿಖೆ ಮುಂದುವರೆಯಲಿದೆ ಎಂದು ಹೇಳಿದ್ದರು.

ಡಿಕೆ ಶಿವಕುಮಾರ್ ಮುನ್ನಡೆ ಅಥವಾ ಹಿನ್ನಡೆ ಅದು ಅವರಿಗೆ ಬಿಟ್ಟ ವಿಚಾರ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ವಿಚಾರದ ಪ್ರಕರಣ ಕುರಿತ ಪ್ರತಿಕ್ರಿಯೆ ನೀಡಿದ ಅವರು, ಇದರ ಅರ್ಥ ಕೋರ್ಟ್ ಒಪ್ಪಿದೆ ಅಂತಲ್ಲ. ತನಿಖೆ ಮುಂದುವರೆಯಲಿದೆ ಎಂದರು. ಬೆಳೆ ವಿಮೆ ಭಾರತ ಸರ್ಕಾರದ್ದು ಆದರೆ ಬೆಳೆ ವಿಮೆ ಏಜೆನ್ಸಿ, ಪರಿಹಾರದ ಪ್ರಮಾಣ, ಎಲ್ಲವನ್ನೂ ನಿರ್ಧಾರ ಮಾಡುವುದು ರಾಜ್ಯ ಸರ್ಕಾರ. ಹೀಗಾಗಿ ತಪ್ಪಾಗಿದೆ ಅದನ್ನು ಮರು ಪರಿಶೀಲನೆ ಮಾಡುತ್ತವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com