ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ, ಕರ್ನಾಟಕ ಕಾಂಗ್ರೆಸ್ ಗೂ ಎಚ್ಚರಿಕೆ ಗಂಟೆ: ಬಸವರಾಜ ಬೊಮ್ಮಾಯಿ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕ ಕಾಂಗ್ರೆಸ್ ಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕ ಕಾಂಗ್ರೆಸ್ ಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಲೋಕಸಭೆ ಚುನಾವಣೆ ಗಿಂತ ಮೊದಲು ಬಂದಿರುವುದರಿಂದ ಇದನ್ನು ಸೆಮಿ ಫೈನಲ್ ಅಂತ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಂತೂ ಮೇಲಿಂದ‌ ಮೇಲೆ ಹೇಳಿದ್ದಾರೆ. ಈ ಫಲಿತಾಂಶ ಲೋಕಸಭೆ ಚುನಾವಣೆಗೆ ಸ್ಪಷ್ಟ ಸಂದೇಶ ನೀಡಿದೆ ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದಿದ್ದೇವೆ. ಛತ್ತಿಸ್ ಘಡ, ರಾಜಸ್ತಾನದಲ್ಲೂ ಸ್ಪಷ್ಟ ಬಹುಮತ ಪಡೆದಿದ್ದೇವೆ. ತೆಲಂಗಾಣದಲ್ಲಿ ನಮ್ಮ ಸಂಖ್ಯೆ 1 ರಿಂದ 11 ಕ್ಕೆ ಏರಿದ್ದೇವೆ. ಈ‌ ಫಲಿತಾಂಶಕ್ಕೆ ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾನ್ ಸೇರಿದಂತೆ ಎಲ್ಲ ನಾಯಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡಿತ್ತು.  ಜಾತಿ ರಾಜಕಾರಣ, ಸನಾತನ ಧರ್ಮದ ವಿರುದ್ದ ಅಪ ಪ್ರಚಾರ ಮಾಡಿದ್ದಾರೆ. ಗ್ಯಾರೆಂಟಿ ಗಳನ್ನು ಆಪ್ ಆರಂಭ ಮಾಡಿತ್ತು. ಅದನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಮುಂದುವರೆಸಿತು. ಸುಳ್ಳು ಹೇಳಿ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದರು. ಗ್ಯಾರೆಂಟಿಗಳನ್ನು ಜನ ತಿರಸ್ಕರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತದೆ. ಲೊಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಸಂಪೂರ್ಣ ನೆಲ ಕಚ್ಚಲಿದೆ ಎಂದು ಹೇಳಿದರು.

ಇನ್ನು ಈ ಫಲಿತಾಂಶ ಕರ್ನಾಟಕದ ಮೇಲೂ ಆಗಲಿದ್ದು, ಕರ್ನಾಟಕದಲ್ಲಿ ಇಷ್ಟೊಂದು ಬರ ಇದೆ.‌ ಡಿಸಿ ಅಕೌಂಟ್ ನಲ್ಲಿ 400 ಕೋಟಿಗೂ ಅಧಿಕ ರೂ. ಹಣ ಇದ್ದರೂ, ಅದನ್ನು ಬಿಡುಗಡೆ ಮಾಡದೇ ಕೇಂದ್ರದ ಕಡೆಗೆ ಬೆರಳು ಮಾಡುತ್ತಿದ್ದಾರೆ‌. ಹಿಂದಿನ ಯಾವುದೇ ಸರ್ಕಾರ ಈ ರೀತಿ ಮಾಡಿಲ್ಲ.‌ ಮೊದಲು ತನ್ನ ಬಳಿ ಇರುವ ಹಣವನ್ನು ರೈತರಿಗೆ ಪರಿಹಾರ ನೀಡಬೇಕು. ನಾವು ಪ್ರವಾಹ ಬಂದಾಗ ಮೊದಲು ಪರಹಾರ ನೀಡಿದ್ದೇವು. ಅತಿ ಹೆಚ್ಷು ಭ್ರಷ್ಟಾಚಾರ ಇರುವ ರಾಜ್ಯ ಕರ್ನಾಟಕ, ಪಿಎಸ್ ಐ ಹಗರಣದ ಕುರಿತು ನಾವು ಚಾರ್ಜ್ ಸೀಟ್ ಸಲ್ಲಿಸಿದ್ದರೂ ಮತ್ತೆ ಆಯೋಗ ಮಾಡಿದ್ದಾರೆ ಎಂದರು.

ಅಧಿವೇಶನದ ನಂತರ‌ ಜನಾಂದೋಲನ: ರಾಜ್ಯ ಸರ್ಕಾರದ ಗ್ಯಾರೆಂಟಿ ಗಳು ಕೇವಲ 25% ರಷ್ಟು ಜನರಿಗೆ ಮಾತ್ರ ತಲುಪಿದೆ. ಅಧಿವೇಶನ ಮುಗಿದ ಮೇಲೆ ಬಿಜೆಪಿಯಿಂದ ಗ್ಯಾರೆಂಟಿಗಾಗಿ ಸರಿಯಾದ ಅನುಷ್ಠಾನಕ್ಕಾಗಿ ಬೃಹತ್ ಚಳುವಳಿ ನಡೆಸಲು ತೀರ್ಮಾನ ಮಾಡಿದ್ದೆವೆ. ಗ್ಯಾರೆಂಟಿ ದೊರೆಯದ ಫಲಾನುಭವಿಗಳ ಮುಂದಾಳತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಅವರು ತಿಳಿಸಿದರು. 

ಮೋದಿ ವರ್ಚಸ್ಸು ಹೆಚ್ಚಾಗಿದೆ: ದೇಶದಲ್ಲಿ ಈಗಿನ ವಾತಾವರಣ ನೋಡಿದರೆ, ಮತ್ತೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಾರೆ. ರಾಜ್ಯದಲ್ಲಿ 25 ಎಂಪಿ ಸ್ಥಾನ ಗೆಲ್ಲುತ್ತೇವೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆ ನಮಗೆ ಹೆಚ್ಚು ಅನುಕೂಲವಾಗಲಿದೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಗೆದ್ದರೆ ಇಡಿ ದೇಶ ಗೆದ್ದಂತೆ ಅಂತ ಹೇಳುತ್ತಾರೆ. ಪ್ರಧಾನಿ ಮೊದಿಯವರ ವರ್ಚಸ್ಸು ಈಗ ಮತ್ತೆ ಹೆಚ್ಚಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com