
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಮುಸ್ಲಿಂ ಮೌಲ್ವಿ ತನ್ವಿರ್ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಸ್ಲಿಂರೊಂದಿಗೆ ಹೊಂದಿರುವ ಸಂಬಂಧ, ವ್ಯವಹಾರದಲ್ಲಿನ ಪಾಲುದಾರಿಕೆ ಕುರಿತ ವಿವಿಧ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಕಿಡಿಕಾರುತ್ತಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಫೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, ರಾಜಕೀಯ ಪಕ್ಷ ಬದಲಾದಂತೆ ಹಿಂದೂ ಉಲಿಯ ವೇಷವೂ ಬದಲಾಗುತ್ತಿದೆ ಎಂದು ಟೀಕಿಸಿದೆ.
ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ. ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ. ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ! ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿ ಎಂದು ತಾಕೀತು ಮಾಡಿದೆ.
Advertisement