ಗೂಳಿಹಟ್ಟಿ ಶೇಖರ್ ಸವಾಲನ್ನು ಸ್ವೀಕರಿಸುವ ನೈತಿಕತೆಯನ್ನು ಬಿಜೆಪಿ ತೋರಿಸುತ್ತದೆಯೇ? ಕಾಂಗ್ರೆಸ್

ನಾಗ್ಪುರದ ಹೆಡಗೇವಾರ್‌ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಪ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಅವರು ಬಿಜೆಪಿಗೆ ಮತ್ತೊಂದು ಸವಾಲು ಹಾಕಿದ್ದಾರೆ.
ಗೂಳಿಹಟ್ಟಿ ಶೇಖರ್
ಗೂಳಿಹಟ್ಟಿ ಶೇಖರ್

ಬೆಂಗಳೂರು: ನಾಗ್ಪುರದ ಹೆಡಗೇವಾರ್‌ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಪ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಅವರು ಬಿಜೆಪಿಗೆ ಮತ್ತೊಂದು ಸವಾಲು ಹಾಕಿದ್ದಾರೆ.

ಹೆಡಗೇವಾರ್ ಸ್ಮಾರಕಕ್ಕೆ ನನ್ನನ್ನು ಒಳಗೆ ಬಿಟ್ಟಿದ್ದಿದ್ದರೆ, ಅದರ ಸಿಸಿ ಟಿವಿ ಫೂಟೇಜ್ ಬಿಡುಗಡೆ ಮಾಡಲಿ. ಒಂದು ವೇಳೆ ‌ನನ್ನ ಮಾತು ಸುಳ್ಳಾಗಿದ್ರೆ, ಬಿಜೆಪಿ ನಾಯಕರ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು  ಗುಡುಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವರದಿಯೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಗೂಳಿಹಟ್ಟಿ ಶೇಖರ್ ಸವಾಲನ್ನು ಸ್ವೀಕರಿಸುವ ನೈತಿಕತೆಯನ್ನು ಬಿಜೆಪಿ ತೋರಿಸುತ್ತದೆಯೇ ? ಎಂದು ಪ್ರಶ್ನಿಸಿದೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಗರ್ಭಗುಡಿಯಲ್ಲಿ ದಲಿತರಿಗೆ ಸ್ಥಾನಮಾನ ನೀಡಿ ನಂತರ ನಮ್ಮಲ್ಲಿ ಸಮಾನತೆ ಇದೆ ಎಂಬುದನ್ನು ಹೇಳಲಿ ಎಂದು ಟಾಂಗ್ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com