ಕಾಂಗ್ರೆಸ್ ಔತಣಕೂಟಕ್ಕೆ ಮೂವರು ಶಾಸಕರ ಹಾಜರಾತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ವಿಜಯೇಂದ್ರ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಕಾಂಗ್ರೆಸ್ ಆಯೋಜಿಸಿದ್ದ ಔತಣಕೂಟದಲ್ಲಿ ತಮ್ಮ ಪಕ್ಷದ ಮೂವರು ಶಾಸಕರು ಭಾಗವಹಿಸಿರುವುದು ಗಂಭೀರ ವಿಷಯ ಎಂದು ಬಿಜೆಪಿ ಪರಿಗಣಿಸಿದೆ.
ವಿಜಯೇಂದ್ರ
ವಿಜಯೇಂದ್ರ

ಬೆಳಗಾವಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಕಾಂಗ್ರೆಸ್ ಆಯೋಜಿಸಿದ್ದ ಔತಣಕೂಟದಲ್ಲಿ ತಮ್ಮ ಪಕ್ಷದ ಮೂವರು ಶಾಸಕರು ಭಾಗವಹಿಸಿರುವುದು ಗಂಭೀರ ವಿಷಯ ಎಂದು ಬಿಜೆಪಿ ಪರಿಗಣಿಸಿದೆ.

ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಹಾಗೂ ಎಂಎಲ್ಸಿ ಎಚ್ ವಿಶ್ವನಾಥ್ ಕಾಂಗ್ರೆಸ್ ಔತಣ ಕೂಟದಲ್ಲಿ ಭಾಗವಹಿಸಿದ್ದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಈ ಮೂವರು ಶಾಸಕರು ಯಾವುದೇ ಸಭೆಯಲ್ಲಿ ಭಾಗವಹಿಸಲಿಲ್ಲ, ಆದರೆ ತಾವು ಆಹ್ವಾನ ನೀಡಿದ್ದರಿಂದ  ಬುಧವಾರ ರಾತ್ರಿಯ ಔತಣಕೂಟದಲ್ಲಿ ಮಾತ್ರ ಭಾಗವಹಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅವರು ಆಡಳಿತಾರೂಢ ಕಾಂಗ್ರೆಸ್‌ಗೆ ಸೇರಲು ಆಲೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  ಮೇ  ತಿಂಗಳ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು ಸೋತಾಗಿನಿಂದ ಈ ಮೂವರು ಬಿಜೆಪಿ ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ಭಾಗಿಯಾಗುತ್ತಿಲ್ಲ.

2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ 17 ಕಾಂಗ್ರೆಸ್-ಜೆಡಿ (ಎಸ್) ಶಾಸಕರಲ್ಲಿ ಮೂವರು ಸೇರಿದ್ದಾರೆ, ಇದು ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಯಿತು ಮತ್ತು ಬಿಜೆಪಿ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಟ್ಟಿತು.

ಸೋಮಶೇಖರ್ ಮತ್ತು ಹೆಬ್ಬಾರ್ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಸೋಮಶೇಖರ್ ಮತ್ತು ಹೆಬ್ಬಾರ್ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೂಲತಃ ಕಾಂಗ್ರೆಸ್ಸಿಗರಾಗಿದ್ದ ವಿಶ್ವನಾಥ್ ಅವರು 2019 ರಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು, ನಂತರ  ಬಿಜೆಪಿ ಸೇರ್ಪಡೆಯಾದರು.

ಕಾಂಗ್ರೆಸ್ ಔತಣಕೂಟಕ್ಕೆ ಆಗಮಿಸಿದ್ದ ಬಗ್ಗೆ ಪ್ರತ್ಕಿಕ್ರಿಯಿಸಿದ  ವಿಜಯೇಂದ್ರ, ಬೆಳಿಗ್ಗೆ ನನಗೆ ಅದರ ಬಗ್ಗೆ ಮಾಹಿತಿ ಸಿಕ್ಕಿತು. ನಾನು ಅವರೊಂದಿಗೆ ಇಂದೇ ಮಾತನಾಡುತ್ತೇನೆ, ಅವರ ಉದ್ದೇಶ ಏನು ಎಂದು ನಾನು ಚರ್ಚಿಸುತ್ತೇನೆ. ಇದು ಗಂಭೀರ ವಿಷಯ, ನಾನು ಇಂದು ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಪ್ರತ್ಯೇಕವಾಗಿ ಔತಣಕೂಟ ಏರ್ಪಡಿಸಿದ್ದೆ, ಅದಕ್ಕೆ ಪಕ್ಷದ ಇತರ ಮುಖಂಡರಿಗೂ ಆಹ್ವಾನ ನೀಡಲಾಗಿತ್ತು, ಹಾಗಾಗಿ ಅವರು (ಸೋಮಶೇಖರ್, ಹೆಬ್ಬಾರ್), ವಿಶ್ವನಾಥ್ ಸೇರಿದಂತೆ ಹತ್ತು ಮಂದಿ ಬಂದಿದ್ದರು ಎಂದು ಶಿವಕುಮಾರ್ ಹೇಳಿದ್ದಾರೆ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಏಕೆ ಬರುತ್ತಾರೆ, ಅವರು ನಮ್ಮ ಪಕ್ಷದ ಶಾಸಕರಲ್ಲ, ಊಟಕ್ಕೆ ಮಾತ್ರ ಬಂದಿದ್ದರು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com