2024 ಲೋಕಸಭಾ ಚುನಾವಣೆ ರಾಹುಲ್ vs ಮೋದಿ!

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸಿಎನ್‌ ಅಶ್ವಥ್‌ ನಾರಾಯಣ್‌ ಗುರುವಾರ ಹೇಳಿದ್ದಾರೆ.
ರಾಹುಲ್ ಗಾಂಧಿ, ಪ್ರಧಾನಿ ಮೋದಿ
ರಾಹುಲ್ ಗಾಂಧಿ, ಪ್ರಧಾನಿ ಮೋದಿ

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸಿಎನ್‌ ಅಶ್ವಥ್‌ ನಾರಾಯಣ್‌ ಗುರುವಾರ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಗುರುವಾರ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಪಾಲ್ಗೊಂಡ ನಂತರ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಶ್ವತ್ಥ ನಾರಾಯಣ್, ಕರ್ನಾಟಕದ ಜನರು ಎರಡನೇ ಆಲೋಚನೆಯಿಲ್ಲದೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಎಂದರು.

ಇದು ನರೇಂದ್ರ ಮೋದಿ  ಮತ್ತು ರಾಹುಲ್ ಗಾಂಧಿ  ನಡುವಿನ ಸ್ಪರ್ಧೆಯಾಗಲಿದೆ. ಮತದಾರರು ನರೇಂದ್ರ ಮೋದಿ ಅವರತ್ತ ನೋಡುತ್ತಾರಾ ಅಥವಾ ರಾಹುಲ್ ಗಾಂಧಿಗೆ ಮತ ಹಾಕಲು ಯೋಚಿಸುತ್ತಾರಾ ಊಹಿಸಿಕೊಳ್ಳಿ. ಅವಕಾಶವೇ ಇಲ್ಲ. ಹಾಗಾಗಿ ಇದು  ನರೇಂದ್ರ ಮೋದಿ ವರ್ಸಸ್ ರಾಹುಲ್ ಗಾಂಧಿ ನಡುವಿನ ಚುನಾವಣೆ ಎಂದು ಅವರು ಹೇಳಿದರು.

ಶೇಕಡ 90 ರಷ್ಟು ಜನರು ನರೇಂದ್ರ ಮೋದಿಯವರತ್ತ ಒಲವು ತೋರುತ್ತಾರೆ. ರಾಹುಲ್ ಗಾಂಧಿ ಅವರನ್ನು ತಿರಸ್ಕರಿಸುತ್ತಾರೆ. ಈ ಚುನಾವಣೆಗಳಲ್ಲಿ ನಾವು ಗೆಲ್ಲುವುದು ಖಚಿತ ಎಂದು ಅವರು ಭರವಸೆ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com