ರೈತನ ಮಗನಾಗಿ ಭಾರೀ ಪ್ರಮಾಣದ ಆಸ್ತಿ ಸಂಪಾದಿಸಿದ್ದು ಹೇಗೆ: ಅಕ್ರಮ ಎಸಗುವಾಗ ಜೀವಮಾನ ಪೂರ್ತಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂಬ ಭ್ರಮೆಯೇ?

ರೈತನ ಮಗನಾಗಿದ್ದುಕೊಂಡು ಕೊತ್ವಾಲ್‌ ಶಿಷ್ಯನಾದ ಡಿ.ಕೆ ಶಿವಕುಮಾರ್, ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ್ದು ಹೇಗೆ ಎಂಬುದು ಕನಕಪುರದ ಪ್ರತಿ ಬಂಡೆ ಬಂಡೆಗೂ ತಿಳಿದಿದೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ರೈತನ ಮಗನಾಗಿದ್ದುಕೊಂಡು ಕೊತ್ವಾಲ್‌ ಶಿಷ್ಯನಾದ ಡಿ.ಕೆ ಶಿವಕುಮಾರ್, ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ್ದು ಹೇಗೆ ಎಂಬುದು ಕನಕಪುರದ ಪ್ರತಿ ಬಂಡೆ ಬಂಡೆಗೂ ತಿಳಿದಿದೆ. ಆದರೆ ಆ ಬಗ್ಗೆ ಜಾರಿ ನಿರ್ದೇಶನಾಲಯ ತಿಳಿಯಲು ಹೊರಟಾಗ ಮಾತ್ರ ಅವರಿಗೆ ಆತಂಕ ಉಂಟಾಗುತ್ತದೆ ಎಂದು ಬಿಜೆಪಿ ಹೇಳಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ,  ತಾವು ಪ್ರಜಾದ್ರೋಹ ಯಾತ್ರೆ ಮಾಡಬೇಕೋ ಅಥವಾ ವಿಚಾರಣೆ ಎದುರಿಸಬೇಕೋ ಎಂಬುದನ್ನು ಡಿ.ಕೆ ಶಿವಕುಮಾರ್ ಅವರೇ ನಿರ್ಧರಿಸಬೇಕು. ಯಾತ್ರೆ ಹೆಸರಲ್ಲಿ ಹಿಂದೆ ಮಾಡಿದ ಪ್ರಜಾದ್ರೋಹದ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ಅವರು ಮಾಡಬಾರದು ಎಂದು ಲೇವಡಿ ಮಾಡಿದೆ.

ಈಗ ವಿಚಾರಣೆ ಬಗ್ಗೆ ನೀವು ಕಿಡಿಕಾರುತ್ತಿದ್ದೀರಿ. ಆದರೆ, ಅಕ್ರಮ ಎಸೆಗುವಾಗ ಜೀವಮಾನ ಪೂರ್ತಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂಬ ಭ್ರಮೆಯೇ ನಿಮ್ಮ ಈಗಿನ ಪರಿಸ್ಥಿತಿಗೆ ಕಾರಣ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಮ್ಮ ವಿರುದ್ಧ ಟೀಕೆ‌ ನಿಲ್ಲಿಸಿ ಎಂದು ಬಿಜೆಪಿ ಸಲಹೆ ನೀಡಿದೆ.

ಸೋನಿಯಾ ಗಾಂಧಿ ಅವರ ಅತ್ಯಾಪ್ತರಾಗಿದ್ದ ಅಹ್ಮದ್‌ ಪಟೇಲ್‌ ಅವರನ್ನು ರಾಜ್ಯ ಸಭೆಗೆ ಕಳುಹಿಸಲು ಕೋಟಿ ಕೋಟಿಗಳನ್ನು ಯಾರು ಯಾರಿಗೆ ಸಂದಾಯ ಮಾಡಿದರು ಎಂಬ ವಿವರ ನೀವೇ ನೀಡಬೇಕಷ್ಟೆ ಅವರೇ. ಅದಕ್ಕುತ್ತರಿಸದೆ ಎಷ್ಟೇ ರೂಪಾಯಿ ಮೌಲ್ಯದ ಮಾವು ಬೆಳೆದರೂ ಅದರ ಘಮ ನಿಮ್ಮ  ಅಕ್ರಮ ಮರೆಮಾಚುವುದಿಲ್ಲ ಎಂದು ಲೇವಡಿ ಮಾಡಿದೆ.

ಗೋವಿಂದ ರಾಜು ಅವರ ಡೈರಿಯಲ್ಲಿ ಸಿಕ್ಕ ಹೆಸರುಗಳು ಮತ್ತು ಆ ಹೆಸರುಗಳ ಮುಂದಿದ್ದ ಭಾರಿ ಪ್ರಮಾಣದ ಹಣ ಯಾರಿಗೆ ಯಾಕಾಗಿ ಸಂದಾಯವಾಗಿತ್ತು ಎಂಬುದಕ್ಕೆ ಉತ್ತರ ನೀಡಬೇಕಿರುವುದು ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು. ಅದನ್ನು ನಿರಂತರವಾಗಿ ತಪ್ಪಿಸಿಕೊಂಡು ಚುನಾವಣೆ ಹತ್ತಿರ ಬಂದಾಗ ಹಲುಬಿದರೆ ಕಪ್ಪು ಬಿಳಿಯಾಗುವುದಿಲ್ಲ ಎಂದಿದೆ.

ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿ ಆ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ಮಾತ್ರ ಮಾಡಬಾರದು ಎಂದರೆ ಹೇಗೆ?  ಡಿ.ಕೆ ಶಿವಕುಮಾರ್ ಅವರು ಬಯಸಿದಂತೆ ವಿಚಾರಣೆ ಮಾಡಲು ಅದೇನು ಕೆಪಿಸಿಸಿ ಘಟಕವಲ್ಲ, ಸ್ವಾಯತ್ತ ಸಂಸ್ಥೆ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com