ಚುನಾವಣೆ ಹೊತ್ತಿನಲ್ಲಿ ಪ್ರಧಾನಿ ಜಪ: ಮೋದಿ ರೋಡ್ ಶೋ ನಡೆಸಿದರೆ ಪಕ್ಷಕ್ಕೆ ಲಾಭ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು!

ವಿಧಾನಸಭೆ ಚುನಾವಣೆಗೆ ಇನ್ನು ಎರಡೇ ತಿಂಗಳು ಬಾಕಿ. ಕೇಸರಿ ಪಕ್ಷ ಬಿಜೆಪಿಯಿಂದ ಹಲವು ತಂತ್ರಗಾರಿಕೆ, ಚುನಾವಣಾ ತಂತ್ರಗಳು ನಡೆಯುತ್ತಿದೆ. ಕೇಂದ್ರ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. 
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಎರಡೇ ತಿಂಗಳು ಬಾಕಿ. ಕೇಸರಿ ಪಕ್ಷ ಬಿಜೆಪಿಯಿಂದ ಹಲವು ತಂತ್ರಗಾರಿಕೆ, ಚುನಾವಣಾ ತಂತ್ರಗಳು ನಡೆಯುತ್ತಿದೆ. ಕೇಂದ್ರ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಹಾಲಿ ಶಾಸಕರಿರುವ ಆರು ಕ್ಷೇತ್ರಗಳು ಹಾಗೂ ಕಳೆದ ಬಾರಿ ಬಿಜೆಪಿ ಸೋತಿದ್ದ ಭದ್ರಾವತಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಧಾನಿಯವರ ಭೇಟಿ ಸಹಾಯವಾಗುವ ನಿರೀಕ್ಷೆಯಿದೆ. 

ಪ್ರಧಾನಿ ಮೋದಿ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಅಕ್ಕಪಕ್ಕದ ಜಿಲ್ಲೆಗಳ ಸಂಘಟನೆಗಳಿಂದ ಮನವಿಗಳು ಬಂದಿವೆ. ಪ್ರಧಾನಮಂತ್ರಿಯವರ ಭೇಟಿಯನ್ನು ಚುನಾವಣಾ ಲಾಭವಾಗಿ ಪರಿವರ್ತಿಸಿಕೊಳ್ಳುವ ಉಮೇದು ಬಿಜೆಪಿ ನಾಯಕರದ್ದು. ಅದನ್ನು ಹೆಚ್ಚಿಸುವ ಸಲುವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ಸಭೆಯನ್ನು ಇತರ ಕ್ಷೇತ್ರಗಳಲ್ಲಿಯೂ ರೋಡ್ ಶೋ ನಡೆಸಲು ಬಿಜೆಪಿ ಆಲೋಚನೆ ಮಾಡಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಬಿಜೆಪಿಗೆ ಸವಾಲಾಗಿರುವ ಬೆಳಗಾವಿ: ಕಳೆದ ಬಾರಿಯ ಸಂಸತ್ತು ಉಪಚುನಾವಣೆಯಲ್ಲಿ ಕಡಿಮೆಯಾದ ಮತಗಳಿಂದಾಗಿ ಬಿಜೆಪಿ ಸ್ವಲ್ಪ ಸವಾಲೆನಿಸಿರುವ ಬೆಳಗಾವಿ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳು ಕಾಂಗ್ರೆಸ್‌ಗೆ ಸ್ಥಳಾಂತರಗೊಂಡಿವೆ. ಮಾಜಿ ಸಚಿವ ಉಮೇಶ ಕತ್ತಿ ನಿಧನ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿರುವುದು, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಿಸಿತುಪ್ಪವಾಗಿದೆ. 

ಬೆಳಗಾವಿಯ ಸ್ವತಂತ್ರ ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ ಅವರು ಅಧಿಕೃತ ಬಿಜೆಪಿ ಅಭ್ಯರ್ಥಿಯ ವಿರುದ್ಧ ಗೆಲುವು ಸಾಧಿಸಿರುವುದು ಬೆಂಗಳೂರು ನಗರ ನಂತರ ಎರಡನೇ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಜಿಲ್ಲೆಯಲ್ಲಿ ಪಕ್ಷದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ. 

ಮೋದಿ ಅವರ ರೋಡ್ ಶೋ ಬೆಳಗಾವಿಯ 18 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ, ಬೆಳಗಾವಿಯಲ್ಲಿ ಬಿಜೆಪಿಯ 11 ಮತ್ತು ಕಾಂಗ್ರೆಸ್‌ನ ಐದು ಶಾಸಕರಿದ್ದು, ಎರಡು ಸ್ಥಾನಗಳು ಖಾಲಿ ಇವೆ -- ಉಮೇಶ ಕತ್ತಿ ಹೊಂದಿದ್ದ ಹುಕ್ಕೇರಿ ಮತ್ತು ಸೌಂದತ್ತಿ ಕ್ಷೇತ್ರದ ಶಾಸಕರಾಗಿದ್ದ ಚಂದ್ರಶೇಖರ ಮಾಮನಿ, ಇಬ್ಬರೂ ಬಿಜೆಪಿಯವರಾಗಿದ್ದರು. 

11 ಕ್ಷೇತ್ರಗಳಲ್ಲಿ ಕಾಂಗ್ರೆಸ್ 10 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಕೆಲವು ಸ್ಥಾನಗಳನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೇರಿರುವುದು ಬಿಜೆಪಿಗೆ ಆತಂಕ ತಂದಿದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪಂಚಮಸಾಲಿಗಳು ಮೀಸಲಾತಿ ಪಂಕ್ತಿಯಿಂದ ಅಸಮಾಧಾನಗೊಂಡಿರುವ ಆತಂಕವೂ ಇದೆ.

ಮೋದಿಯವರ ಭೇಟಿಯು ಮೂರಕ್ಕಿಂತ ಹೆಚ್ಚು ಅವಧಿಗೆ ಅಧಿಕಾರದಲ್ಲಿರುವ ಕಾರ್ಯಕರ್ತರು ಮತ್ತು ಶಾಸಕರಿಗೆ ಪುನಶ್ಚೇತನ ನೀಡುತ್ತದೆ ಮತ್ತು ಭಿನ್ನಮತವನ್ನು ಶಮನಗೊಳಿಸುವ ನಿರೀಕ್ಷೆಯಲ್ಲದ್ದಾರೆ. ನಾವು ಫೆಬ್ರವರಿ 27ರಂದು ಮಧ್ಯಾಹ್ನ 3 ಗಂಟೆಗೆ ರೋಡ್ ಶೋನ್ನು ಯೋಜಿಸಿದ್ದೇವೆ, ಅದು ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ರಧಾನಿ ಮೋದಿಯವರ ಭೇಟಿಯು ಬೆಳಗಾವಿ ಮತ್ತು ಪಕ್ಕದ ಜಿಲ್ಲೆಗಳ ಕ್ಷೇತ್ರಗಳಿಗೂ ಸಹಾಯ ಮಾಡುತ್ತದೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com