ಕುಮಾರಕೃಪಾ, ಬಾಲಬ್ರೂಯಿ ಅತಿಥಿ ಗೃಹಗಳೇ 'ಸ್ಯಾಂಟ್ರೋ ರವಿ' ಅಡ್ಡ!? ರಾತ್ರೋ ರಾತ್ರಿ  ಪ್ರವೇಶ ನಿರ್ಬಂಧಿಸಿದ ಸರ್ಕಾರ!

ರಾಜಕಾರಣಿಗಳು ಮತ್ತು ಫಿಕ್ಸರ್ ಗಳು ಮಾಡಿದ ಅನೈತಿಕ ಕೆಲಸದಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಕುಮಾರಕೃಪಾ ಮತ್ತು ಬಾಲಬ್ರೂಯಿ ಅತಿಥಿಗೃಹಗಳು ರಾತ್ರೋರಾತ್ರಿ ಕೋಟೆಗಳಾಗಿ ಮಾರ್ಪಟ್ಟಿವೆ.
ಸ್ಯಾಂಟ್ರೋ ರವಿ
ಸ್ಯಾಂಟ್ರೋ ರವಿ

ಬೆಂಗಳೂರು: ರಾಜಕಾರಣಿಗಳು ಮತ್ತು ಫಿಕ್ಸರ್ ಗಳು ಮಾಡಿದ ಅನೈತಿಕ ಕೆಲಸದಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಕುಮಾರಕೃಪಾ ಮತ್ತು ಬಾಲಬ್ರೂಯಿ ಅತಿಥಿಗೃಹಗಳು ರಾತ್ರೋರಾತ್ರಿ ಕೋಟೆಗಳಾಗಿ ಮಾರ್ಪಟ್ಟಿವೆ.

ಸ್ಯಾಂಟ್ರೋ ರವಿ ವಿಷಯ ವೈರಲ್ ಆದ ನಂತರ ಸರ್ಕಾರ ಈ ಎರಡು  ಗೆಸ್ಟ್ ಹೌಸ್ ಗಳಿಗೆ ಪ್ರವೇಶ ನಿರ್ಬಂಧಿಸಿದೆ.

ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ, ಇತ್ತೀಚೆಗೆ ಆಡಿಯೋವೊಂದನ್ನು ರಿಲೀಸ್ ಮಾಡಿದ್ದರು. ಅದರಲ್ಲಿ ಕುಮಾರಕೃಪದಲ್ಲಿ ಕೂತು ಈತ ಭಾರೀ ವ್ಯವಹಾರ ನಡೆಸಿದ್ದಾನೆ. ಇವನ ಹಿಂದೆ ಅಡಗಿ ಕೂತಿರುವ ಅಸಲಿ ವ್ಯಕ್ತಿ ಯಾರು? ಎಂದು ಪ್ರಶ್ನಿಸಿದ್ದರು.

ಪ್ರಮುಖ ಹುದ್ದೆಗಾಗಿ ಬಯಸಿದ್ದ ಅಧಿಕಾರಿಯೋಬ್ಬರಿಗೆ ಇವನು ಮೊಬೈಲ್ ಕರೆ ಮಾಡಿ, ನಾಳೆ ಬಂದು ನೋಡು ಅಂತ ಹೇಳುತ್ತಾನೆ. ತನ್ನ ಸರ್ ಎಂದು ಕರೆಯುವಂತೆ ಆ ಪೊಲೀಸ್ ಅಧಿಕಾರಿಗೆ ತಾಕೀತು ಮಾಡುತ್ತಾನೆ. ರೀ ಏನು ತಿಳಿದುಕೊಂಡಿದ್ದೀರಾ? ಸ್ವತಃ ಮುಖ್ಯಮಂತ್ರಿಯೇ ನನ್ನನ್ನು ಸರ್ ಅಂತ ಕರೀತಾರೆ. ನೀನು ಸರ್ ಅಂತಿಲ್ಲ ಅಂತ ಆ ಪೊಲೀಸ್ ಅಧಿಕಾರಿಗೆ ಸ್ಯಾಂಟ್ರೋ ರವಿ ಅನ್ನುವ ವ್ಯಕ್ತಿ ಧಮ್ಕಿ ಹಾಕುತ್ತಾನೆ. ತನ್ನನ್ನು ಕೆಕೆ ಅತಿಥಿಗೃಹದಲ್ಲಿ ಭೇಟಿಯಾಗಬೇಕೆಂದು 1996 ರ ಬ್ಯಾಚ್ ಅಧಿಕಾರಿಗೆ ಆತ ಸೂಚಿಸುತ್ತಾನೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಸ್ಯಾಂಟ್ರೋ ರವಿ ಪ್ರಕರಣದ ನಂತರ್ ಸರ್ಕಾರ ಬಾಲಬ್ರೂಯಿ ಅತಿಥಿ ಗೃಹಕ್ಕೆ ನಿರ್ಬಂಧ ವಿಧಿಸಿದೆ.  ಪ್ಯಾಲೇಸ್ ರಸ್ತೆ ನಿವಾಸಿ ಶೃತಿ ಎಂಬುವರು ತಮ್ಮ ಕುಟುಂಬಸ್ಥರ ಜೊತೆ ಬಾಲಬ್ರೂಯಿಯನ್ನು ಅಡ್ಡಾಡಲು ಬಂದಿದ್ದರು. ಈ ವೇಳೆ ಐಡಿ ಕಾರ್ಡ್ ತೋರಿಸುವಂತೆ ಕೇಳಿದ ಪೊಲೀಸರು ಅವರನ್ನು ಒಳಗೆ ಬಿಡದೆ ವಾಪಸ್ ಮನೆಗೆ ಕಳುಹಿಸಿದ್ದಾರೆ.

ಹಲವು ವರ್ಷಗಳಿಂದ ಈ ವರ್ಗಾವಣೆ ದಂಧೆ ನಡೆಯುತ್ತಿದೆ. ಮಂತ್ರಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ತಮ್ಮ ವೈಯಕ್ತಿಕ ವಿಚಾರಗಳಿಗಾಗಿ ‘ಸ್ಯಾಂಟ್ರೋ ರವಿ’ಯಂತಹವರನ್ನು ಭೇಟಿ ಮಾಡಿದರೆ ತೊಂದರೆಯಿಲ್ಲ.

ಆದರೆ ವರ್ಗಾವಣೆಗಳು ಮತ್ತು ಪೋಸ್ಟಿಂಗ್‌ಗಳು ಅಂತಹ ವ್ಯಕ್ತಿಗಳ ಮೇಲೆ ಅವಲಂಬಿತವಾಗಿದ್ದರೆ, ಅದು ಅಪಾಯಕಾರಿ. ಈ ಸರ್ಕಾರವನ್ನು ಕೇಂದ್ರ ವಜಾ ಮಾಡಬೇಕು. ಕೆಎಸ್‌ಟಿಡಿಸಿಯಲ್ಲಿ ಭ್ರಷ್ಟ ಅಧಿಕಾರಿಯೊಬ್ಬರ ವಿರುದ್ಧ ನಾನು ಆರೋಪ ಮಾಡಿದಾಗ ಒಂದು ಗಂಟೆಯಲ್ಲಿ ಅವರನ್ನು ವರ್ಗಾವಣೆ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸ್ಯಾಂಟ್ರೋ ರವಿ  ಗೃಹಸಚಿವರನ್ನು ಭೇಟಿಯಾಗಿರಬಹುದು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com