ಬೆಂಗಳೂರು: ಸ್ವಚ್ಚ ರಾಜಕಾರಣದಲ್ಲಿ ಬದ್ಧತೆ ಹೊಂದಿರುವ ನಾನು, ಸ್ಯಾಂಟ್ರೊ ರವಿಯಂಥವರಿಂದ ಆಮಿಷಕ್ಕೊಳಗಾಗುವಂತ ಪ್ರಸಂಗ ಬಂದರೆ, ಸಾವನ್ನು ಬಯಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಲೆನಾಡು ಮಿತ್ರ ವೃಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜ ಧ್ರೋಹಿಗಳೂ ಮತ್ತು ಪೀಡಕರಿಂದ ಅಕ್ರಮವಾಗಿ ಹಣ ಗಳಿಸಬೇಕಾದ ಸಂದರ್ಭ ಬಂದರೆ, ಬದುಕಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ನನ್ನ ಗುಜರಾತ್ ಪ್ರವಾಸಕ್ಕೂ, ಸ್ಯಾಂಟ್ರೋ ರವಿ ಬಂಧನಕ್ಕೂ ಥಳುಕು ಹಾಕಿ ಮಾತನಾಡುತ್ತಿರುವ ಕೆಲವು ನಾಯಕರ ಬಗ್ಗೆ ಪ್ರಸ್ತಾಪಿಸಿದ ಸಚಿವರು, ನನ್ನ ಗುಜರಾತ್ ಪ್ರವಾಸ ಬಹಳ ಹಿಂದೆಯೇ ನಿಗದಿಯಾಗಿತ್ತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿಯೋಗದ ನೇತೃತ್ವ ವಹಿಸಿದ್ದ ನನ್ನ ಗುಜರಾತ್ ಭೇಟಿ ಹಾಗೂ ಕಾರ್ಯಕ್ರಮಗಳು ಪಾರದರ್ಶಕವಾಗಿವೆ ಎಂದರು.
ಗುಜರಾತ್ ಪ್ರವಾಸದ ಸಂದರ್ಭದಲ್ಲಿ, ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಸ್ಥಾಪನೆ ಕುರಿತು, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ, ಉಪ ಕುಲಪತಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳ ಜತೆ, ಸಭೆ ನಡೆಸಿದ್ದೇನೆ. ಇದರ ಮುಂದುವರಿದ ಭಾಗವಾಗಿ, ಶೀಘ್ರದಲ್ಲಿಯೇ, ವಿಶ್ವ ವಿದ್ಯಾಲಯದ ಶಂಕುಸ್ಥಾಪನೆ ಕಾರ್ಯಕ್ರಮವೂ, ನಡೆಯಲಿದೆ ಎಂದರು.
Advertisement