ಕೆಸಿಆರ್​ ಭೇಟಿ ಮಾಡಿದ್ದು ನಿಜ, ಆದರೆ...: ಮಾಜಿ‌ ಸಚಿವ ಜಮೀರ್​ ಅಹಮದ್ ಖಾನ್

ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಂತೆ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್ ಷಡ್ಯಂತ್ರ ಆರಂಭಿಸಿದ್ದಾರೆ ಎಂದು ಸ್ವತಃ ತೆಲಂಗಾಣದ ಕಾಂಗ್ರೆಸ್​ ಅಧ್ಯಕ್ಷ ರೇವಂತ್ ರೆಡ್ಡಿ ಗಂಭೀರ ಆರೋಪ ಮಾಡಿದ್ದರು‌.
ಕೆಸಿಆರ್ ಭೇಟಿ ಮಾಡಿದ ಜಮೀರ್ ಅಹ್ಮದ್ ಖಾನ್
ಕೆಸಿಆರ್ ಭೇಟಿ ಮಾಡಿದ ಜಮೀರ್ ಅಹ್ಮದ್ ಖಾನ್
Updated on

ಮೈಸೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಮತ್ತು ಪ್ರತ್ಯಾರೋಪಗಳು ಮುನ್ನೆಲೆಗೆ ಬರುತ್ತಿವೆ. ಈಗ ತೆಲಂಗಾಣದಲ್ಲಿ ಕರ್ನಾಟಕ ಚುನಾವಣಾ ರಾಜಕೀಯ ವಿಷಯ ಸದ್ದು ಮಾಡಿದೆ.

ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಂತೆ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್ ಷಡ್ಯಂತ್ರ ಆರಂಭಿಸಿದ್ದಾರೆ ಎಂದು ಸ್ವತಃ ತೆಲಂಗಾಣದ ಕಾಂಗ್ರೆಸ್​ ಅಧ್ಯಕ್ಷ ರೇವಂತ್ ರೆಡ್ಡಿ ಗಂಭೀರ ಆರೋಪ ಮಾಡಿದ್ದರು‌.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಪ್ರತಿಕ್ರಿಯಿಸಿದ್ದು, 500 ಕೋಟಿ ಆಫರ್ ವಿಚಾರ ಚರ್ಚೆಯಾಗುತ್ತಿದೆ ಎಂಬ ಆರೋಪ ಬಂದಿದೆ. ನನಗಂತೂ ಯಾವ ಆಫರ್ ಬಂದಿಲ್ಲ ಎಂದು ಹೇಳಿದ್ದಾರೆ.

ನಾನು ತೆಲಂಗಾಣ ಸಿಎಂ ಭೇಟಿ ಮಾಡಿದ್ದು ಸತ್ಯ. ಆದರೆ 500 ಕೋಟಿ ಆಫರ್ ಬಗ್ಗೆ ಗೊತ್ತಿಲ್ಲ. ನಾನು ಹೈದರಾಬಾದ್ ಗೆ ಹೋಗಿದ್ದು ನಿಜ. ಕೆಸಿಆರ್ ಭೇಟಿ ಮಾಡಿದ್ದೂ ನಿಜ. ನಮ್ಮ ಭೇಟಿಯಲ್ಲಿ ರಾಜಕೀಯ ವಿಷಯವೇ ಚರ್ಚೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ತಾಂಡೂರು ಶಾಸಕ ರೋಹಿತ್ ರೆಡ್ಡಿ ನನ್ನ ಸ್ನೇಹಿತ. ಅವರು ಸಿಎಂ ಚಂದ್ರಶೇಖರ್ ಭೇಟಿ ಮಾಡಿ ಎಂದು ಕೇಳಿಕೊಂಡ್ರು. ಅವರೇ ಬೇರೆ ಪಕ್ಷ, ನಾವೇ ಬೇರೆ ಪಕ್ಷ, ಏನೂ ಸಂಬಂಧವೇ ಇಲ್ಲ ಎಂದರು.

ಯಾರು ಆರೋಪ ಮಾಡಿದ್ದಾರೆ ಅವರನ್ನ ಕೇಳಿ. ನಿಖರವಾಗಿ ನನ್ನ ಹೆಸರನ್ನೇ ಹೇಳಿಲ್ಲ. ಹೀಗಾಗಿ ಯಾವುದೇ ಕ್ರಮದ ಬಗ್ಗೆ ಯೋಚನೆ ಮಾಡಲ್ಲ. ಬಹಳ ಜನ ಕೆಸಿಆರ್ ಅನ್ನು ಭೇಟಿ ಮಾಡಿದ್ದಾರೆ. ಅದು ಪ್ರಚಾರ ಆಗಿಲ್ಲ, ನನ್ನದು ಪ್ರಚಾರ ಆಗಿದೆ. ಮಾಧ್ಯಮಗಳು ನನ್ನ ವಿಚಾರ ಅಂದ್ರೆ ಜಾಸ್ತಿ ಪ್ರಚಾರ ಮಾಡ್ತಾರೆ ಎಂದು ಹೇಳಿದರು.

ಹೈದರಾಬಾದ್​ನ ನಮ್ಮ ಅಧ್ಯಕ್ಷರೂ ನನ್ನ ಹೆಸರು‌ ಹೇಳಿದ್ದಾರಾ ಹೇಳಿ ಅಂತಾ ಮಾಧ್ಯಮಗಳಿಗೆ ಜಮೀರ್​ ಅಹಮ್ಮದ್​ ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲದಂತೆ ನೋಡಿಕೊಳ್ಳಲು 500 ಕೋಟಿ ರೂಪಾಯಿಗಳ ಆಫರ್ ಬಗ್ಗೆಯೂ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಸೋಲಿಸಲು ಯಾರು ಸುಫಾರಿ ಕೊಟ್ಟಿದ್ದಾರೆ?. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇರಿಸುವುದರಿಂದ ಅವರಿಗೆ ಏನು ಸಿಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com