ತನ್ನ ಸಿದ್ದಾಂತಕ್ಕೆ ಭಿನ್ನ ನಿಲುವು ಹೊಂದಿದ್ದ ನೇತಾಜಿಯವರನ್ನು ಅರ್ ಎಸ್ ಎಸ್ ಹೈಜಾಕ್ ಮಾಡುತ್ತಿರುವುದ್ಯಾಕೆ?

ತನ್ನ ಸಿದ್ದಾಂತಕ್ಕೆ ಭಿನ್ನ ನಿಲುವು ಹೊಂದಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್‌ ರನ್ನು ಆರ್ ಎಸ್ ಎಸ್ ಈಗ ಹೈಜಾಕ್ ಮಾಡುತ್ತಿರುವುದ್ಯಾಕೆ? ನೇತಾಜಿ ಎಂದೂ ಆರ್ ಎಸ್ಎಸ್ ಸಿದ್ಧಾಂತ ಒಪ್ಪಿರಲಿಲ್ಲ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ತನ್ನ ಸಿದ್ದಾಂತಕ್ಕೆ ಭಿನ್ನ ನಿಲುವು ಹೊಂದಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್‌ ರನ್ನು ಆರ್ ಎಸ್ ಎಸ್ ಈಗ ಹೈಜಾಕ್ ಮಾಡುತ್ತಿರುವುದ್ಯಾಕೆ? ನೇತಾಜಿ ಎಂದೂ ಆರ್ ಎಸ್ಎಸ್ ಸಿದ್ಧಾಂತ ಒಪ್ಪಿರಲಿಲ್ಲ. ಆದರೂ ಆರ್ ಎಸ್ ಎಸ್ ಗೆ ನೇತಾಜಿ ಮೇಲೆ ಈಗ ಪ್ರೇಮ ಉಕ್ಕಲು ಕಾರಣವೇನು? ಎಂದು ಎಐಸಿಸಿ ಕಾರ್ಯದರ್ಶಿ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್‌ ಜನ್ಮದಿನ. ಬೋಸ್‌ರವರ ಜಯಂತಿಯನ್ನುಆರ್ ಎಸ್ ಎಸ್ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ. ನೇತಾಜಿಗೂ, ಆರ್ ಎಸ್ ಎಸ್ ಗೂ ಏನು ಸಂಬಂಧ? ನೇತಾಜಿಆರ್ ಎಸ್ ಎಸ್ ಚಿಂತನೆಗೆ ವಿರುದ್ಧವಾಗಿದ್ದವರು. ಅವರೆಂದೂ ಆರ್ ಎಸ್ ಎಸ್ ಸಿದ್ದಾಂತ ಒಪ್ಪಿರಲಿಲ್ಲ.ಆರ್ ಎಸ್ ಎಸ್ ನ ಸಂಘ-ಶಾಖೆಗಳಲ್ಲಿ ಗುರುತಿಸಿಕೊಂಡಿರಲಿಲ್ಲ. ಆರ್ ಎಸ್ ಎಸ್ ಗೆ ಈಗ ನೇತಾಜಿ ಮೇಲೆ ಪ್ರೇಮ ಉಕ್ಕಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.

ಆರ್ ಎಸ್ ಎಸ್ ಸಿದ್ದಾಂತವಾದ 'ಒಂದು ದೇಶ, ಒಂದು ಧರ್ಮ, ಒಂದು ಭಾಷೆ' ನಿಲುವನ್ನು ನೇತಾಜಿಯವರು ಎಂದಿಗೂ ಬೆಂಬಲಿಸಿರಲಿಲ್ಲ.‌ ನೇತಾಜಿಯವರದ್ದು ಎಲ್ಲರನ್ನೂ ಒಳಗೊಳ್ಳುವ ಚಿಂತನೆ. ನೇತಾಜಿ ಎಲ್ಲಾ ಧರ್ಮವನ್ನು‌‌ ಒಟ್ಟಿಗೆ ತೆಗೆದುಕೊಂಡು ಹೋಗುವ ನಿಲುವಿನವರು. ತನ್ನ ಸಿದ್ದಾಂತಕ್ಕೆ ಭಿನ್ನ ನಿಲುವು ಹೊಂದಿದ್ದ ನೇತಾಜಿಯವರನ್ನು ಆರ್ ಎಸ್ ಎಸ್  ಈಗ ಹೈಜಾಕ್ ಮಾಡುತ್ತಿರುವುದ್ಯಾಕೆ?

ಸ್ವಾತಂತ್ರ್ಯ ಹೋರಾಟದಲ್ಲಿ ನಯಾಪೈಸೆ ಕೊಡುಗೆ ನೀಡದ ಆರ್ ಎಸ್ ಎಸ್  ಕೆಲ ಸ್ವಾತಂತ್ರ್ಯ ವೀರರನ್ನು ತಮ್ಮವರೆಂದು ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದೆ. ಈ ಹಿಂದೆ ಭಗತ್ ಸಿಂಗ್‌ರನ್ನು ಹೈಜಾಕ್ ಮಾಡಲು ಆರ್ ಎಸ್ ಎಸ್  ಯತ್ನಿಸಿತ್ತು. ಆದರೆ ಭಗತ್ ಸಿಂಗ್, ಆರ್ ಎಸ್ ಎಸ್ ಸಿದ್ದಾಂತದ ವಿರುದ್ಧವಾಗಿದ್ದರು ಎಂಬ ಸತ್ಯ ಗೊತ್ತಾದ ಬಳಿಕ ಭಗತ್ ಸಿಂಗ್ ತೆರೆಗೆ ಸರಿದರು. ಈಗ ನೇತಾಜಿ ಸರದಿ.

ಆರ್ ಎಸ್ ಎಸ್ ನೇತಾಜಿಯವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ನಿರ್ಧಾರಕ್ಕೆ ಬೋಸ್ ಪುತ್ರಿ ಅನಿತಾ ಬೋಸ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ನೇತಾಜಿ ಜನ್ಮದಿನವನ್ನು ಆರ್ ಎಸ್ ಎಸ್  ಆಚರಿಸುವ ಮೂಲಕ ನೇತಾಜಿಯವರನ್ನು ಹಿಂದುತ್ವವಾದಿ ಎಂದು ಬಿಂಬಿಸುವ ಹುನ್ನಾರ‌ ಹಾಕಿಕೊಂಡಿದೆ. ನೇತಾಜಿ ನಮ್ಮಂತೆಯೇ ಹಿಂದೂ ಆಗಿದ್ದರೆ ಹೊರತು ಯಾವತ್ತೂ ಹಿಂದುತ್ವವಾದಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com