'ಹಾಲಲ್ಲಾದರು ಹಾಕು,ನೀರಲ್ಲಾದರು ಹಾಕು, ಏನು ಮಾಡಬೇಕೊ ಅಂತಿದೆಯೊ ಅದನ್ನು ಮಾಡು ತಂದೆ ಎಂದು ರಾಯರಲ್ಲಿ ಕೇಳಿಕೊಂಡಿದ್ದೇನೆ': ಅನಿತಾ ಕುಮಾರಸ್ವಾಮಿ

ಹಾಸನದಲ್ಲಿ ಜೆಡಿಎಸ್ ಟಿಕೆಟ್ ನೀಡಿಕೆ ವಿಚಾರವಾಗಿ ಹೆಚ್ ಡಿ ದೇವೇಗೌಡರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದು ಬಹಿರಂಗವಾಗಿರುವಾಗಿರುವುದರ ಮಧ್ಯೆ ಇಂದು ಭಾನುವಾರ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯವರ ಜೊತೆಗೆ ಮಂತ್ರಾಲಯ ಶ್ರೀ ಗುರು ರಾಘವೇಂದ್ರದ ದರ್ಶನ ಪಡೆದರು. 
ಮಂತ್ರಾಲಯ ಗುರುರಾಯರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಹೆಚ್ ಡಿಕೆ ದಂಪತಿ
ಮಂತ್ರಾಲಯ ಗುರುರಾಯರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಹೆಚ್ ಡಿಕೆ ದಂಪತಿ

ರಾಯಚೂರು: ಹಾಸನದಲ್ಲಿ ಜೆಡಿಎಸ್ ಟಿಕೆಟ್ ನೀಡಿಕೆ ವಿಚಾರವಾಗಿ ಹೆಚ್ ಡಿ ದೇವೇಗೌಡರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದು ಬಹಿರಂಗವಾಗಿರುವಾಗಿರುವುದರ ಮಧ್ಯೆ ಇಂದು ಭಾನುವಾರ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯವರ ಜೊತೆಗೆ ಮಂತ್ರಾಲಯ ಶ್ರೀ ಗುರು ರಾಘವೇಂದ್ರದ ದರ್ಶನ ಪಡೆದರು. 

ಮುಂದಿನ ವಿಧಾನಸಭೆಯಲ್ಲಿ ಶತಾಯಗತಾಯ 120 ಸ್ಥಾನಗಳನ್ನು ಗೆಲ್ಲುವ ಇಚ್ಚೆಯಿಂದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪಂಚರಾತ್ನ ಯಾತ್ರೆ ಮಾಡುತ್ತಿದ್ದಾರೆ. ನಿನ್ನೆಯಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇತ್ತ ಹಾಸನದಲ್ಲಿ ಮಾಜಿ ಸಚಿವ ಹೆಚ್​ ಡಿ ರೇವಣ್ಣ ಪತ್ನಿ ಭವಾನಿ ರೇವಣ ಟಿಕೆಟ್​ ಬೇಕು ಎಂದು ಪಟ್ಟು ಹಿಡಿದಿದ್ದು ಸಾಕಷ್ಟು ಸಂಕಷ್ಟ ತಂದಿದೆ. 

ಇಂದು ಹೆಚ್​ ಡಿ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿದ್ದರು. ಮೊದಲು ‌ಮಂಚಾಲಮ್ಮಾ ದೇವಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಬಳಿಕ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.. ನಂತರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಭೇಟಿ ಮಾಡಿ ಆಶಿರ್ವಾದ ಪಡೆದರು. 

ಬಳಿಕ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿ, ಈ ರಾಜ್ಯದ ಆರೂವರೆ ಕೋಟಿ ಜನರಿಗೆ ಈ ಬಾರಿ ಸ್ವತಂತ್ರ ಸರ್ಕಾರ ಕೊಡಿ, ಇಡೀ ರಾಜ್ಯದಲ್ಲಿ ಪ್ರತಿ ಕುಟುಂಬಗಳ ಆದಾಯ ಕನಿಷ್ಠ 15 ಸಾವಿರ ಆಗಬೇಕು, ಯಾವ ಕುಟುಂಬಗಳೂ ಕಣ್ಣೀರಲ್ಲಿ ಬದುಕು ನಡೆಸಬಾರದು ಎಂದು ಮಂತ್ರಾಲಯ ಗುರು ರಾಘವೇಂದ್ರರ ಎದುರು ಬೇಡಿಕೊಂಡಿದ್ದೇನೆ, ಈ ನಿಟ್ಟಿನಲ್ಲಿ ನಾನು ಪಂಚರತ್ನ ಯಾತ್ರೆ ಗುರಿಯನ್ನಿಟ್ಟುಕೊಂಡಿದ್ದೇನೆ ಎಂದಿದ್ದಾರೆ. 

ಕಳೆದ 5 ದಿನಗಳಿಂದ ರಾಯಚೂರಿನಲ್ಲಿ ಪಂಚರತ್ನ ಕಾರ್ಯಕ್ರಮ ನಡೆಯುತ್ತಿದೆ. ರಥ ಯಾತ್ರೆ ಯಶಸ್ಸಿಗೆ ಹಲವಾರು ವರ್ಷಗಳ ಬಳಿಕ, ರಾಯರೇ ನನ್ನನ್ನು ಕರೆಸಿಕೊಂಡಿದ್ದಾರೆ. ರಾಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಟಿದ್ದೇನೆ. ಅದಕ್ಕೆ ಅನುಗ್ರಹ ಕಲ್ಪಿಸಲು ಕೇಳಿಕೊಂಡಿದ್ದೇನೆ. ಸ್ವತಂತ್ರ ಸರ್ಕಾರವೇ ನನ್ನ ಗುರಿ. ಅದರ ಅನುಗ್ರಹಕ್ಕಾಗಿ ಕೇಳೊಕೊಂಡಿದ್ದೇನೆ. ಅನಿತಾ ಕುಮಾರಸ್ವಾಮಿ ಅವರು ರಾಯರ ಭಕ್ತರು ಎಂದು ಹೇಳಿದರು.

ತಮ್ಮ ಪತ್ನಿ ಅನಿತಾ ಮೊದಲಿನಿಂದಲೂ ಗುರು ರಾಘವೇಂದ್ರರ ಭಕ್ತರಾಗಿದ್ದು, ಅವರು ಇಂದು ದೇವರ ಮುಂದೆ ಏನು ಬೇಡಿಕೊಂಡರು ಎಂದು ನನ್ನಲ್ಲಿ ಹೇಳುವುದಿಲ್ಲ ಎಂದರು. 

ಹಾಲಲ್ಲಾದರು ಹಾಕು,ನೀರಲ್ಲಾದರು ಹಾಕು
ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ಅಂತ ಅಷ್ಟೇ ಕೇಳಿಕೊಂಡಿದ್ದೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಜೀವನದಲ್ಲಿ ನನಗೆ ಒಳ್ಳೆಯದಾಗಿದ್ದರೇ ಅದು ರಾಯರಿಂದ. ನಿನಗೆ ಏನು ಮಾಡಬೇಕು ಅನ್ನಿಸುತ್ತೋ ಅದನ್ನು ಮಾಡು ಅಂತ ರಾಯರಲ್ಲಿ ಕೇಳಿಕೊಂಡೆ, ಬಹಳ ಹಿಂದಿನಿಂದಲೂ ನಾನು ರಾಘವೇಂದ್ರ ಸ್ವಾಮಿಗಳ ಭಕ್ತಳು ಎಂದ‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com