ಗೌ​ಡರ ಹೆ​ಸ​ರು ಹೇಳದಿದ್ದರೆ ತಮ್ಮ ಬೇ​ಳೆ​ಕಾಳು ಬೇ​ಯಲ್ಲ; ಹೀಗಾಗಿ ನಿತ್ಯ ದೇ​ವೇ​ಗೌ​ಡರ ಹೆ​ಸ​ರೆತ್ತಿಯೇ ಮಾತು ಆ​ರಂಭ!

ಒಕ್ಕಲಿಗ ಸಮುದಾಯದಲ್ಲಿ ಬೇರೆ ನಾಯಕರು ಬೆಳೆಯುವುದನ್ನು ಎಚ್.ಡಿ.ಕುಮಾರಸ್ವಾಮಿ ಸಹಿಸುವುದಿಲ್ಲ. ಒಕ್ಕಲಿಗರು ಎಂಬ ಕಾರಣಕ್ಕೇ ನಮ್ಮ ವಿರುದ್ಧ ನಿಂತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಶೃಂಗೇರಿ: ಒಕ್ಕಲಿಗ ಸಮುದಾಯದಲ್ಲಿ ಬೇರೆ ನಾಯಕರು ಬೆಳೆಯುವುದನ್ನು ಎಚ್.ಡಿ.ಕುಮಾರಸ್ವಾಮಿ ಸಹಿಸುವುದಿಲ್ಲ. ಒಕ್ಕಲಿಗರು ಎಂಬ ಕಾರಣಕ್ಕೇ ನಮ್ಮ ವಿರುದ್ಧ ನಿಂತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ಚಂದ್ರೇಗೌಡ ಎಂಬ ಅಧಿಕಾರಿಯನ್ನು ವರ್ಷದಲ್ಲಿ ಏಳು ಬಾರಿ ವರ್ಗಾವಣೆ ಮಾಡಿದ್ದರು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಾಗರಾಜ್ ಅವರನ್ನು ತಪ್ಪಿಲ್ಲದಿದ್ದರೂ ಅಮಾನತು ಮಾಡಿದ್ದರು. ಇಬ್ಬರೂ ಮಂಡ್ಯದವರು, ಒಕ್ಕಲಿಗ ಸಮುದಾಯದವರು ಎಂದು ತಿಳಿಸಿದರು.

ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಎಂಬುದು ಅವರಲ್ಲಿದೆ. ಆದರೆ, ಅವರ ಕುಟುಂಬದ ಬಗ್ಗೆ ನಮಗೆ ಗೌರವ ಇದೆ. ಕುಮಾರಸ್ವಾಮಿ 10 ಬಾರಿ ಮುಖ್ಯಮಂತ್ರಿಯಾದರೂ ನಮಗೆ ಖುಷಿ ಇದೆ. ನಮ್ಮನ್ನು ಸಹಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದರು.

ಹಳೇ ಮೈ​ಸೂರು ಭಾ​ಗದ ಜ​ನತೆ ಅರ್ಥ ಮಾ​ಡಿ​ಕೊ​ಳ್ಳು​ತ್ತಿ​ದ್ದಾರೆ. ನಾನು ಒ​ಕ್ಕ​ಲಿಗ ನಾ​ಯಕ ಎಂಬ ಕಾ​ರ​ಣಕ್ಕೆ ನನ್ನ ಮೇಲೆ ದ್ವೇಷ ಕಾ​ರು​ತ್ತಿ​ದ್ದಾರೆ ಎಂದು ಬೇ​ಸರ ವ್ಯ​ಕ್ತ​ಪ​ಡಿ​ಸಿದರು. ಮಾಜಿ ಪ್ರಧಾನಿ ದೇ​ವೇ​ಗೌ​ಡರು ಪ್ರ​ಧಾನಿಯಾ​ಗಿ​ದ್ದ​ವರು. ನಾ​ವೆಲ್ಲಾ ಅ​ವ​ರನ್ನು ಪ್ರೀತಿ ಮಾ​ಡು​ತ್ತೇವೆ. ಕು​ಮಾ​ರ​ಸ್ವಾಮಿ ದೇ​ವೇ​ಗೌ​ಡರ ಹೆ​ಸ​ರನ್ನು ತ​ರದೆ ರಾ​ಜ​ಕೀಯ ಮಾ​ಡು​ವು​ದಕ್ಕೆ ಆ​ಗು​ವುದಿಲ್ಲ. ಅ​ದ​ಕ್ಕಾಗಿ ನಿತ್ಯ ದೇ​ವೇ​ಗೌ​ಡ​ರ ಹೆ​ಸರೆತ್ತುತ್ತಾರೆ ಎಂದು ಪ್ರ​ಶ್ನೆಯೊಂದಕ್ಕೆ ಉ​ತ್ತ​ರಿ​ಸಿ​ದರು. ಸ​ದ​ನ​ದಲ್ಲಿ ನಾವು ದೇ​ವೇ​ಗೌ​ಡರ ಹೆ​ಸ​ರು ಬ​ಳ​ಸಿಲ್ಲ. ದೇ​ವೇ​ಗೌ​ಡರ ಹೆ​ಸ​ರು ಬ​ಳ​ಸು​ವ​ವರೇ ಅ​ವರು. ಗೌ​ಡರ ಹೆ​ಸ​ರು ಹೇಳದಿದ್ದರೆ ತಮ್ಮ ಬೇ​ಳೆ​ಕಾಳು ಬೇ​ಯಲ್ಲ ಅ​ನ್ನು​ವುದು ಅ​ವ​ರಿಗೂ ಗೊ​ತ್ತಿದೆ.

ಆ​ದ್ದ​ರಿಂದಲೇ ನಿತ್ಯ ದೇ​ವೇ​ಗೌ​ಡರ ಹೆ​ಸ​ರೆತ್ತಿಯೇ ಮಾತು ಆ​ರಂಭಿ​ಸು​ತ್ತಾರೆ ಎಂದು ತಿರುಗೇಟು ನೀ​ಡಿ​ದರು.

ಪೆನ್‌ಡ್ರೈವ್‌ ದಾಖಲೆ ನೀಡಲಿ:

ವರ್ಗಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡಿದರೆ ಸಾಲದು.

ಸರ್ಕಾರದ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸರ್ಕಾರದ ವಿ​ರುದ್ಧ ಅವರ ಬಳಿ ಯಾವುದೇ ದಾ​ಖ​ಲೆ​ಗಳಿ​ದ್ದರೆ ಬಿ​ಡು​ಗಡೆ ಮಾ​ಡಲಿ ಸಂತೋಷ. ಬೇ​ಕಿ​ದ್ದರೆ ಸ​ದ​ನ​ದಲ್ಲೇ ದಾ​ಖಲೆಗಳನ್ನು ಬಿ​ಡು​ಗಡೆ ಮಾ​ಡಲಿ. ಅದನ್ನು ಬಿಟ್ಟು ಸುಮ್ಮನೆ ದಾಖಲೆ ಇದೆ ಎಂದು ಹೇಳಿ ಈ ಹಿಂದೆ ಜ​ನಾರ್ದನ​ರೆಡ್ಡಿ ಸಿಡಿಸಿದ ಸಿಡಿ ಬಾಂಬ್‌ ರೀತಿ ಆ​ಗು​ವುದು ಬೇಡ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com