ಮೈಸೂರು: ಪಿಎಸ್ಐ ಹಗರಣ, ಬಿಟ್ ಕಾಯಿನ್, 40% ವಿಚಾರ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲ ಪ್ರಕರಣದ ಬಗ್ಗೆ ತನಿಖೆ ಮಾಡಿ. ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ. ಕಾಂಗ್ರೆಸ್ ನವರು ಹೇಳಿದ್ದೇಲ್ಲ ಸತ್ಯ. ನೀವು ಸತ್ಯ ಸಂಧರು ಎಂಬುದನ್ನು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಪಕ್ಷದಲ್ಲೇ ಬಿಜೆಪಿಯವರೇ ತಪ್ಪು ಮಾಡಿದರೆ ಅವರನ್ನು ಹಿಡಿದು ಜೈಲಿಗೆ ಹಾಕಿ. ಈ ಮೂಲಕ ನಮ್ಮ ಪಕ್ಷವನ್ನ ಸ್ವಚ್ಚ ಮಾಡಲು ಅನುವು ಮಾಡಿಕೊಡಿ. ನೀವು ಬಿಜೆಪಿ ಸರ್ಕಾರದ ಮೇಲೆ ಏನೇನು ಆರೋಪ ಮಾಡಿದ್ದೀರಾ ಆವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ನೀವು ಯಾವ ಕಂಡಿಷನ್ ಹಾಕಿರಲಿಲ್ಲ. ಈಗಲೂ ಯಾವ ಕಂಡಿಷನ್ ಇಲ್ಲದೆ ಗ್ಯಾರಂಟಿ ಜಾರಿ ಮಾಡಿ. ನನಗು ಫ್ರೀ, ನಿನಗೂ ಎಲ್ಲರಿಗೂ ಫ್ರೀ ಎಂದವರು ಸಿದ್ದರಾಮಯ್ಯ ಅವರೇ, ಈಗ ಸಿದ್ದರಾಮಯ್ಯ ಅವರ ಮೇಲೆ ಅವರೇ ಹೇಳಿದ ಮಾತಿನಿಂದ ಒತ್ತಡವಿದೆ.
ಆ ಒತ್ತಡವನ್ನು ಅವರೇ ನಿಭಾಯಿಸಿಕೊಂಡು ಯಾವ ಷರತ್ತು ಇಲ್ಲದೆ ಗ್ಯಾರಂಟಿ ಜಾರಿ ಮಾಡಿ ಆಗ್ರಹಿಸಿದ್ದಾರೆ. ಘೋಷಣೆ ಮಾಡುವಾಗ ನೀವು ಯಾವ ಷರತ್ತು ಹಾಕಿರಲಿಲ್ಲ. ಈಗಲೂ ಯಾವ ಷರತ್ತು ಇಲ್ಲದೇ ಗ್ಯಾರಂಟಿ ಜಾರಿ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
Advertisement