ಅಧಿಕಾರಿಗಳ ಸಭೆಯಲ್ಲಿ ರಂದೀಪ್ ಸಿಂಗ್ ಸುರ್ಜೆವಾಲಾ ಉಪಸ್ಥಿತಿ: ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರಿನಲ್ಲಿ ನಿನ್ನೆ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಕೂಡ ಉಪಸ್ಥಿತರಿದ್ದರು. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೆರಳಿ ಕೆಂಡವಾಗಿದ್ದು ಸುರ್ಜೆವಾಲಾ ಸರ್ಕಾರದ ಕೆಲಸದಲ್ಲಿ ಮೂಗು ತೂರಿಸುವುದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. 
ಸಭೆಯಲ್ಲಿ ರಂದೀಪ್ ಸಿಂಗ್ ಸುರ್ಜೆವಾಲಾ
ಸಭೆಯಲ್ಲಿ ರಂದೀಪ್ ಸಿಂಗ್ ಸುರ್ಜೆವಾಲಾ

ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಕೂಡ ಉಪಸ್ಥಿತರಿದ್ದರು. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೆರಳಿ ಕೆಂಡವಾಗಿದ್ದು ಸುರ್ಜೆವಾಲಾ ಸರ್ಕಾರದ ಕೆಲಸದಲ್ಲಿ ಮೂಗು ತೂರಿಸುವುದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. 

ಇದಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿನ್ನೆ ಅಧಿಕೃತವಾಗಿ ಅಧಿಕಾರಿಗಳ ಜೊತೆಗೆ ಸುರ್ಜೆವಾಲಾ ಸಭೆ ನಡೆಸಿಲ್ಲ. ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಶಾಸಕರನ್ನು ಕರೆದಿದ್ದರು. ಬೆಂಗಳೂರು ನಗರ ಸಂಬಂಧ ಸಭೆ ಕರೆಯಲಾಗಿತ್ತು ಅಷ್ಟೇ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಾದರೆ ಕೊಡಲಿ ಎಂದು ಹೇಳಿದ್ದಾರೆ.

ರಣದೀಪ್​​ ಸುರ್ಜೇವಾಲ ಶಾಂಗ್ರಿಲಾ ಹೋಟೆಲ್​​ನಲ್ಲಿ ಇದ್ದರು. ಈ ವೇಳೆ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚಿಸಲು ಶಾಸಕರನ್ನು ಕರೆದಿದ್ದರು. ಇದೇ ಕಾರಣಕ್ಕೆ ಸುರ್ಜೇವಾಲ ಭೇಟಿಯಾಗಲು ಡಿ.ಕೆ.ಶಿವಕುಮಾರ್​ ಸೇರಿದಂತೆ ಅನೇಕ ಸಚಿವರು ಹೋಗಿದ್ದರು. ಜೊತೆಗೆ ಸಿಟಿ ರೌಂಡ್ಸ್​​ ಬಗ್ಗೆ ಡಿಕೆಶಿಯವರನ್ನ ಭೇಟಿಯಾಗಲು ಅಧಿಕಾರಿಗಳು ಬಂದಿದ್ದರು. ಈ ಕುರಿತು ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಾದರೆ ಕೊಡಲಿ ಎಂದು ತಿರುಗೇಟು ನೀಡಿದರು.

ಬಿಜೆಪಿಯಿಂದ ಇಂದು ರಾಜ್ಯಪಾಲರಿಗೆ ದೂರು: ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಸಭೆ ನಡೆಸಿದ ಸಂಬಂಧ ಇಂದು ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧರಿಸಿದೆ. ಇಂದು ಸಂಜೆ ಶಾಸಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ. ಅಧಿಕಾರದಲ್ಲಿ ಇರದಿದ್ದರೂ ಕಾಂಗ್ರೆಸ್ ಉಸ್ತುವಾರಿ ಸರ್ಕಾರದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com